Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow us on FACEBOOK also type
Koppal District Police

Thursday, January 19, 2017

1] ಮುನಿರಾಬಾದ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 07/2017 ಕಲಂ : 279, 304(ಎ) ಐ.ಪಿ.ಸಿ:.  
ದಿನಾಂಕ 19-01-2017 ರಂದು 02-30 ಎ.ಎಂ.ಕ್ಕೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿ ಸಾರಾಂಶವೇನೆಂದರೆ , ದಿನಾಂಕ 12-01-2017 ರಂದು ಆರೋಪಿತನು ತನ್ನ ಮೋ.ಸೈ.ನಂ.ಕೆ.ಎ.26 / ಹೆಚ್.8816 ನೇದ್ದರಲ್ಲಿ ತನ್ನ ಹೆಂಡತಿ ಗಿರಿಜಮ್ಮಳನ್ನು ತಂಬ್ರಳ್ಳಿಯಿಂದ ಹುಣ್ಣಿಮೆ ಇದ್ದುದರಿಂದ ಹುಲಗಿಯ ಹುಲಿಗೆಮ್ಮ ದೇವಸ್ಥನಕ್ಕೆ ಮೋ.ಸೈ.ನಲ್ಲಿ ಹೋಗುತ್ತಿರುವಾಗ 09-30 ಎ.ಎಂ.ಸುಮಾರಿಗೆ ಹುಲಗಿ -ನಿಂಗಾಪುರ ರಸ್ತೆಯ ಮೇಲೆ ಹುಲಗಿ ರೈಲ್ವೆ ಗೇಟ ಹತ್ತಿರ ಇರುವ ರೋಡ್ ಬ್ರೇಕರನ್ನು ಗಮನಿಸದೆ ಮೋ.ಸೈ.ನ್ನು ಅತೀ ವೇಗ ಮತ್ತು ಅಲಕ್ಷತನದಿಂದ  ಚಲಾಯಿಕೊಂಡು ಹೋಗಿದ್ದರಿಂದ ಮೋ.ಸೈ.ಮೇಲೆ ಹಿಂದೆ ಕುಳಿತ ಗಿರಿಜಮ್ಮಳು ಪುಟಿದು ಕೆಳಗೆ ರಸ್ತೆಯ ಮೇಲೆ ಬಿದ್ದುದರಿಂದ ಆಕೆಯ ತಲೆಗೆ .ಮುಖಕ್ಕೆ ,ಎಡಗೈಗೆ ರಕ್ತಗಾಯವಾಗಿ ಒಳಪೆಟ್ಟಿಗಿದ್ದು ಚಿಕಿತ್ಸೆ ಕುರಿತು ಹೊಸಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡುಹೋಗಿ ಚಿಕಿತ್ಸೆ ಕೊಡಿಸಿದ್ದು ಅಲ್ಲಿ ವೈದ್ಯಾಧಿಕಾರಿಗಳು ಶಿಪಾರಸ್ಸು ಮಾಡಿದ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಿನಾಂಕ 18-01-2017 ರಂದು ಹೆಚ್ಚಿನ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಿಸದೆ ದಿನಾಂಕ 18-01-2017 ರಂದು 08-00 ಪಿ.ಎಂ.ಸುಮಾರಿಗೆ ಮೃತಪಟ್ಟಿರುತ್ತಾಳೆ, ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ : 279, 337, 338 ಐ.ಪಿ.ಸಿ:. 
ದಿನಾಂಕ: 18-01-2017 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಪಿರ್ಯಾದಿ ಮತ್ತು ಗಾಯಾಳು ಕಾರ ಚಾಲಕ ಗುಲಾಮ ಮಹ್ಮದ ಹುನಗುಂದ ಇಬ್ಬರೂ ಕೂಡಿಕೊಂಡು ಕಾರ ನಂ ಕೆಎ-25/ಪಿ-4743 ನೇದ್ದರಲ್ಲಿ ಗಂಗಾವತಿ ಪಟ್ಟಣದಲ್ಲಿ ಪಿರ್ಯಾದಿಯ ಸಂಬಂದಿಕರ ಈಳೆ ಕಾರ್ಯಾಕ್ರಮಕ್ಕೆ ರಾಂಪೂರ ಹೊಸಳ್ಳಿ , ಯಲಬುರ್ಗಾ ಮುಖಾಂತರ ಗಂಗಾವತಿಗೆ ಯಲಬುರ್ಗಾ ತಾಲೂಕಾ ಪೈಕಿ ಮಲಕಸಮುದ್ರ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ಯಲಬುರ್ಗಾ- ಮಲಕಸಮುದ್ರ ರಸ್ತೆ ಮೇಲೆ ಬೇವೂರು ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಬೇವೂರು ಕಡೆಯಿಂದ ಯಲಬುರ್ಗಾ ಕಡೆಗೆ ಆರೋಪಿತನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ ಇಂಜೀನ್ ನಂ ಕೆಎ-37/ಟಿ.ಎ- 7977 ಮತ್ತು ಅದರ ಟ್ರೇಲರ ನಂ ಕೆಎ-37/ಟಿ.ಎ-7978 ನೇದ್ದನ್ನು ಅದರಲ್ಲಿ ಹಳ್ಳದ ಆಪು ಹುಲ್ಲು ತುಂಬಿ ಕೊಂಡು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಟ್ರ್ಯಾಕ್ಟರದ ಮುಂದಿನ ಹೆಡ್ಡ ಲೈಟ್ ಡಿಂಪ್ ಡಿಮ್ಮು ಮಾಡದೇ ಆಗೇಯೇ ಚಲಾಯಿಸಿಕೊಂಡು ಬಂದು ಕಾರಿನ ಬಲಬಾಗಕ್ಕೆ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿಗೆ ಮತ್ತು ಗಾಯಾಳು ಕಾರ ಚಾಲಕನಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 05/2017 ಕಲಂ : 363, 143, 147, 148, 324, 307, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ: 17-10-2017 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿ ಸಲೀಂ ಸೈದಾ ಸಾ: ಕೊಪ್ಪಳ ಮತ್ತು ಕರ್ನಾಟಕ ಸಂಗ್ರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾದ ಅನ್ಸಾರಶೇಖ ಮತ್ತು ಪ್ರವೀಣ, ವಿಶ್ವನಾಥ, ಗುರುರಾಜ ಎಲ್ಲರೂ ರೈಲ್ವೆ ನಿಲ್ದಾಣದ ಹತ್ತಿರ ನಿಂತುಕೊಂಡಿದ್ದೆವು. ಆಗ ಅನ್ಸಾರಶೇಖಗೆ 8123094572 ದಿಂದ ಪೋನ್ ಬಂದಿತು. ಅಷ್ಟರಲ್ಲಿಯೇ ಒಬ್ಬ ವ್ಯಕ್ತಿ ಬಂದು ತನ್ನ ಹೆಸರು ಜಿಲಾನ್ ಅಂತಾ ಹೇಳಿ ನನ್ನ ಮೊಟಾರ್ ಸೈಕಲ್ ಎಕ್ಸಿಡೆಂಟ್ ಆಗಿದ್ದಕ್ಕೆ ಎಕ್ಸಿಡೆಂಟ್ ಮಾಡಿದವರು ಹಣ ಕೇಳುತ್ತಿದ್ದಾರೆ, ನೀವು ಅಧ್ಯಕ್ಷರಿದ್ದೀರಿ ಅದನ್ನು ಬಗೆಹರಿಸಿ ಕೊಡಿರಿ  ಅಂತಾ ಅನ್ಸಾರಶೇಖ ಗೆ ಕೇಳಿದನು. ಆಗ ಅನ್ಸಾರಶೇಖ ನನಗೆ ಮತ್ತು ಪ್ರವೀಣ, ವಿಶ್ವನಾಥ ಮತ್ತು ಗುರುರಾಜನಿಗೆ ಜಿಲಾನ ಎಂಬ ವ್ಯಕ್ತಿಯ ಸಂಗಡ ಕಳಿಸುತ್ತಾನೆ. ನಾನು ಜೀಲಾನ್ ಈತನ ಮೊಟಾರ್ ಸೈಕಲ್ ಮೇಲೆ ಕುಳಿತುಕೊಂಡಿದ್ದು, ವಿಶ್ವನಾಥ, ಗುರುರಾಜ ಮತ್ತು ಪ್ರವೀಣ ಇವರು ತಮ್ಮ ಒಂದು ಮೋಟಾರ್ ಸೈಕಲ್ ಮೇಲೆ ಬಂದರು. ಜೀಲಾನ ಈತನು ನನಗೆ ಕೂಡಿಸಿಕೊಂಡು ಜೋರಾಗಿ ಓಡಿಸಿಕೊಂಡು ಬೂದುಗುಂಪ ಕ್ರಾಸ್ ವರೆಗೆ ಹೋಗಿದ್ದು , ಅಲ್ಲಿಗೆ ಉಳಿದ 04 ಮೋಟಾರ್ ಸೈಕಲ್ಗಳಲ್ಲಿ ಒಟ್ಟು 12 ಜನರು ನನಗೆ ಕರೆದುಕೊಂಡು ಹೋಗಿ ಲೇ ಸೂಳೆ ಮಗನೆ ಆ ಅನ್ಸಾರಶೇಖ ಸೂಳಿ ಮಗನಿಗೆ ಹೇಳು  ಅವನ ಮನಿಗೆ ಬಂದು ಮರ್ಡರ್ ಮಾಡಿ ಬರುತ್ತೇವೆ ಅಂತಾ ನನಗೆ ಕಟ್ಟಿಗೆ ಕಲ್ಲಿನಿಂದ ನನಗೆ ಬೂದುಗುಂಪಾ ಕ್ರಾಸ್ ಹತ್ತಿರ ಬಿಟ್ಟು ಹೊರಟು ಹೋದರು. ಆಗ ನನ್ನ ಸ್ನೇಹಿತನಾದ ಆತೀಫ್ ತನ್ನ ಮೊಬೈಲ್ ನಂ: 8050366829 ನೇದ್ದರಿಂದ ಪೋನ್ ಮಾಡಿದ್ದು ಅವನು ಬಂದು ನನಗೆ ಕರೆದುಕೊಂಡು ಬಂದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾನೆ. ಆಸ್ಪತ್ರೆಯಲ್ಲಿ ಗುರುರಾಜ, ವಿಶ್ವನಾಥ ಮತ್ತು ಪ್ರವೀಣ ಮೂವರು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ತಲೆಗೆ ಬೆನ್ನಿಗೆ ಕೈಗೆ ಕಣ್ಣಿಗೆ ರಕ್ತ ಗಾಯವಾಗಿದ್ದು ಕಂಡುಬಂದಿತು. 04 ಬೈಕಗಳಲ್ಲಿ ಬಂದು ನನಗೆ ಹೊಡಿಬಡಿ ಮಾಡಿದವರೇ ಅವರಿಗೂ ಸಹ ಕಲ್ಲು ಕಟ್ಟಿಗೆ ಗಳಿಂದ ಹೊಡೆದು ರಕ್ತ ಗಾಯಗೊಳಿಸಿದ ಬಗ್ಗೆ ತಿಳಿಯಿತು. ನಂತರ ನನ್ನ ಮೊಬೈಲ್ ಗೆ ಪೋನ್ ಮಾಡಿದವರ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1] ಜಿಲಾನ್ 2] ರವಿ ಭಾದಶ್ಯಾ, 3] ಅಂಜಿ @ ಅಂಜಿನ್ ಅಂತಾ ತಿಳಿದು ಬಂದಿತು. ಕಾರಣ ನನಗೆ ಬಲವಂತವಾಗಿ ಕರೆದುಕೊಂಡು ಹೋಗಿ ಹೊಡೆದಿದ್ದು ಅಲ್ಲದೆ ಮತ್ತು ವಿಶ್ವನಾಥ, ಪ್ರವೀಣ ಇವರಿಗೆ ಕೊಪ್ಪಳ ನಗರದ ಮಾತಾ ಹೊಟೇಲ್ ಹತ್ತಿರ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಜನರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Wednesday, January 18, 2017

1] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 02/2017 ಕಲಂ : 279, 337 ಐ.ಪಿ.ಸಿ:.  
ದಿನಾಂಕ 17-01-2017 ರಂದು ಬೆಳಿಗ್ಗೆ 8-30 ಗಂಟೆಗೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಠಾಣೆಯ ರವೀಂಧ್ರ ಸಿ.ಹೆಚ್.ಇಸ 164 ರವರನ್ನು ಕಳುಹಿಸಿದ್ದು ಅವರು ಆಸ್ಪತ್ರೆಗೆ ಹೋಗಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ಇಂದು ರಾತ್ರಿ 9-30 ಗಂಟೆಗೆ ವಾಪಾಸ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ. 14-01-2017 ರಂದು ಸಂಜೆ 7-15 ಗಂಟೆಗೆ ಫಿರ್ಯಾದಿದಾರರು ತಮ್ಮ ಅಂಗವಿಕಲರ ಮೂರು ಗಾಲಿಯ ವಾಹನ ನಂಬರ. KA-37/X-9324 ನೆದ್ದರಲ್ಲಿ ತನ್ನ ಹೆಂಡತಿ ಕಮಲಮ್ಮ ಮತ್ತು ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಕೊಪ್ಪಳದ ಗವಿಮಠ ಜಾತ್ರೆಯನ್ನು ಮುಗಿಸಿಕೊಂಡು ವಾಪಾಸ ಮನೆಗೆ ಹೊಗಲು ವಾಹನವನ್ನು ಚಲಾಯಿಸಿಕೊಂಡು ಕುಷ್ಟಗಿ ರಸ್ತೆಯ ಮೇಲೆ ಹೋಗಿ ಬೇಲದಾರ ಕಾಲೋನಿಗೆ ಹೋಗಲು ತನ್ನ ವಾಹನವನ್ನು ಬಲಗಡೆಗೆ ತಿರುಗಿಸುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ನಂಬರ. KA-35/X-3096 ನೆದ್ದರ ಸವಾರನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಟಕ್ಕರಮಾಡಿ ಅಪಘಾತಮಾಡಿದನು. ಇದಿರಿಂದ ಫಿರ್ಯಾದಿಗೆ ಮತ್ತು ಆತನ ಹೆಂಡತಿಗೆ ಸಾದಾ ಸ್ವರೂಪದ ಗಾಯಗಳು ಆಗಿರುತ್ತವೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ನಗರ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 05/2017 ಕಲಂ : 143, 147, 148, 323, 324, 354, 307, 504, 506 ಸಹಿತ 149 ಐ.ಪಿ.ಸಿ:.  
ದಿನಾಂಕ 17-01-2017 ರಂದು ಸಾಯಂಕಾಲ 6-00 ಗಂಟೆಗೆ ಶ್ರೀಮತಿ ವಿಜಯ ಲಕ್ಷ್ಮಿ ಗಂಡ ಪ್ರಸಾದ ತಾಳೂರು, ಫಿರ್ಯಾದಿ ನೀಡಿದ್ದು, ಆರೋಪಿತರಾದ ಶ್ರೀಮತಿ ಸಿ.ಹೆಚ್. ಪದ್ಮಾವತಿ ಇವರು ಫಿರ್ಯಾದಿದಾರರ ಮನೆಯ ಮುಂದೆ ಸುಮ್ಮನೆ ತಿರುಗಾಡುವುದು ಮತ್ತು ಬೇರೆಯವರ ಮೇಲೆ ಹಾಕಿ ಬೈದಾಡುವುದು ಮಾಡುತ್ತಿದ್ದು, ಮುಂಜಾನೆ 11-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ವೆಂಕಟೇಶ್ವರ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಇರುವಾಗ ಯಾರೋ ವ್ಯಕ್ತಿಗಳು ಮನೆಯ ಮುಂದೆ ಬಂದು ಕಾಲಿಂಗ್ ಬೆಲ್ಲನ್ನು ಒತ್ತಿದ್ದರಿಂದ ಫಿರ್ಯಾದಿಯು ಯಾರು ಅಂತಾ ಕೇಳಲು ಅವರು ಮನೆಯಲ್ಲಿ ಕಾರ್ಯಕ್ರಮವಿದೆ ಅಂತಾ ಹೇಳಿದ್ದರಿಂದ ಫಿರ್ಯಾದಿಯು ಬಾಗಿಲನ್ನು ತೆಗೆದು ಮನೆಯಿಂದ ಹೊರಗೆ ಬಂದು ನೋಡಲು ಹೊರಗಡೆ ಯಾರೋ ವ್ಯಕ್ತಿಗಳಿದ್ದು ಅವರಿಗೆ ಎನು ಅಂತಾ ವಿಚಾರಿಸಲು ಅವರು ನಮ್ಮ ಮನೆಯಲ್ಲಿ ಕಾರ್ಯಾಕ್ರಮವಿದೆ ಬನ್ನಿರಿ ಅಂತಾ ಅಂದು ತಮ್ಮ ಧರ್ಮದ ಪದ್ದತಿಯಂತೆ ಹಣೆಗೆ ಕುಂಕುಮ ಹಚ್ಚಲು ಬಂದಿದ್ದು, ಕುಂಕುಮ ಹಚ್ಚಿಕೊಳ್ಳುತ್ತಿರುವಾಗ ಆರೋಪಿತರಾದ 01]  ಸಿ.ಹೆಚ್. ಶ್ರೀನಿವಾಸ. 02] ಸಿ.ಹೆಚ್. ಪದ್ಮಾವತಿ. 03] ಸಿ.ಹೆಚ್. ಅನಂತ ಲಕ್ಷ್ಮಿ, ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುವ 04] ಲಲಿತಾ @ ಲಲ್ಲಿ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಬಂದು ಏನಲೇ ಸೋಳೆ ನಿನ್ನ ಸೊಕ್ಕು ಬಹಳವಾಗಿದೆ ನಮ್ಮ ಮನೆಯ ಹತ್ತಿರ ಇದ್ದು ನಮ್ಮ ಮಾತನ್ನು ಕೇಳುವುದಿಲ್ಲಾ ಅಂತಾ ಅಂದವರೇ ಕೈ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಕಾಲಿನಿಂದ ಒದ್ದಿದ್ದು ಅಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯಿಂದ ತಲೆಗೆ ಹೊಡೆಯಲು ಬಂದಿದ್ದು ಫಿರ್ಯಾದಿಯು ಹಿಂದೆ ಸರಿದಿದ್ದರಿಂದ ಮುಗಿನ ಹತ್ತಿರ ಭಾರಿ ಪೆಟ್ಟಾಗಿ ರಕ್ತ ಸೋರುತ್ತಿದ್ದು ಮತ್ತು ಕಣ್ಣಲ್ಲಿ ಕಾರ ಪುಡಿಯನ್ನು ಉಗ್ಗಿ ಹಲ್ಲೆ ಮಾಡಿ ಹೋಗುವಾಗ ಲೇ ಸೋಳೆ ಇವತ್ತು ನೀನು ಉಳಿದುಕೊಂಡೆ ನಾಳೆ ಸಿಗು ನಿನ್ನ ಕತೆ ಮುಗಿಸಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 16/2017 ಕಲಂ : 306 ಐ.ಪಿ.ಸಿ:.

ದಿನಾಂಕ: 17-01-2017 ರಂದು ಮುಂಜಾನೆ 10:00 ಗಂಟೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರಿಂದ ಬಂದ ಜ್ಞಾಪನ ಪತ್ರದೊಂದಿಗೆ ರಾಯಚೂರ ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂ: 164/2016 ಕಲಂ 306 ಐಪಿಸಿ ನೇದ್ದು ಹದ್ದಿಯ ಪ್ರಯುಕ್ತ ವರ್ಗಾವಣೆಯಾಗಿ ಬಂದಿದ್ದು ಅದರ ಸಾರಾಂಶ ಏನಂದರೆ, ಮೃತ ವೆಂಕಟೇಶ ತಂದೆ ಸಣ್ಣ ಅಯ್ಯಪ್ಪ ಕಂಬಾರ, 32 ವರ್ಷ ಸಾ: ವೆಂಕಟಗಿರಿ ಈತನು ಈಗ್ಗೆ 08 ವರ್ಷಗಳಿಂದ ಸಿ.ಎಂ.ಎಸ್. ಇಂಡಿಯಾ ಪ್ರೈವೇಟ್ ಲಿಮಿಟೇಡ್ ಗಂಗಾವತಿ ಶಾಖೆಯಲ್ಲಿ ಕ್ಯಾಷ್ ಲೋಡರ್ ಅಂತಾ ಕೆಲಸ ಮಾಡಿಕೊಂಡು ಇದ್ದೂ ಸದ್ರಿ ಕಂಪನಿಯವರು ತಿಳಿಸಿದ ಎ.ಟಿ.ಎಂ. ಗಳಿಗೆ ಹಣವನ್ನು ಹಂಚಿಕೆ ಮಾಡುವಾಗ ಹೆಚ್ಚು ಕಡಿಮೆಯಾಗಿ ಈ ಬಗ್ಗೆ ಮೃತನೇ ಹಣವನ್ನು ಬಳಿಸಿಕೊಡ್ಡಿದ್ದಾನೆ ನೀನೇ ಕಟ್ಟಬೇಕು ಅಂತಾ ಪದೆ ಪದೆ ಕಿರುಕುಳ ಕೊಡುವದು ಮಾಡುತ್ತಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ಇದ್ದೂ, ಮನೆಗೂ ಸಹ ಸಿ.ಎಂ.ಎಸ್. ಇಂಡಿಯಾ ಪ್ರೈವೇಟ್ ಲಿಮಿಟೇಡ್ ಗಂಗಾವತಿ ಶಾಖೆಯವರ ಪೈಕಿ ವಿರೇಶ ಎಂಬುವರು ಬಂದು ಹಣವನ್ನು ಕೊಡು ಅಂತಾ ಕರೆದುಕೊಂಡು ಹೋಗಿ ಕಿರುಕುಳ ಕೊಡುತ್ತಾ ಪದೆಪದೆ ಪೀಡಿಸುತ್ತಿದ್ದರಿಂದ ಮನನೊಂದು ಬೆಸತ್ತು ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಮೃತ ವೆಂಕಟೇಶನು ದಿನಾಂಕ 23-10-2016 ರಂದು 11.00 ಗಂಟೆಗೆ ದಾಸನಾಳ ಬ್ರೀಜ್ ಹತ್ತಿರದ ಕಾಲುವೆ ನೀರಿನಲ್ಲಿ ಹಾರಿ ಹರಿದು ಹೋಗಿದ್ದು ಹುಡುಕುತ್ತಾ ಬಂದಾಗ ಮಸ್ಕಿ ಕೇನಾಲ ಬಳಗಾನೂರು ರೊಡ್ ಬ್ರೀಜ್ ಹತ್ತಿರ ಇಂದು ದಿನಾಂಕ 24-10-2016 ರಂದು 12.00 ಗಂಟೆಗೆ ಸಿಕ್ಕಿದ್ದು ಇರುತ್ತದೆ. ಕಾರಣ ಮೃತ ವೆಂಕಟೇಶನು ಸಿ.ಎಂ.ಎಸ್. ಪ್ರೈವೇಟ್ ಲಿಮಿಟೇಂಡ್ ಗಂಗಾವತಿ ಶಾಖೆ ಇವರ ಕಿರುಕುಳದಿಂದ ಬೆಸತ್ತು ಮನನೊಂದು ದಾಸನಾಳ ಬ್ರೀಜ್ ಹತ್ತಿರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

Tuesday, January 17, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ : 279, 338, 304(ಎ) ಐ.ಪಿ.ಸಿ ಮತ್ತು  187 ಐ.ಎಂ.ವಿ. ಕಾಯ್ದೆ:
ದಿ:16-01-2017 ರಂದು ಮದ್ಯಾನ್ಹ 1-15 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೈಕೆಯಲ್ಲಿದ್ದ ಹಾಗೂ ಪ್ರತ್ಯಕ್ಷ ಸಾಕ್ಷಿದಾರರಾದ ಕುಬೇರಪ್ಪ ಬಡಿಗೇರ. ಸಾ: ಹನಮನಹಳ್ಳಿ. ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಇಂದು ದಿ:16-01-17 ರಂದು ಮದ್ಯಾನ್ಹ 12-10 ಗಂಟೆಗೆ ಫಿರ್ಯಾದಿದಾರರು ತಮ್ಮ ಮೋಟಾರ ಸೈಕಲ್ ದಲ್ಲಿ ಇರಕಲಗಡಾ ದಿಂದಾ ಕೊಪ್ಪಳಕ್ಕೆ ಬರುತ್ತಿದ್ದಾಗ, ಲೇಬಗೇರಿ ಕ್ರಾಸ್ ಹತ್ತಿರ ತನ್ನ ಮುಂದೆ ಕುಷ್ಟಗಿ ಕಡೆಯಿಂದ ಕೊಪ್ಪಳದ ಕಡೆಗೆ ಹೊರಟಿದ್ದ ಬಸ್ ನಂ: ಕೆಎ-37/ಎಫ್-0543 ನೇದ್ದರ ಚಾಲಕನು ತನ್ನ ಬಸ್ ನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಕ್ರಾಸ್ ರಸ್ತೆಯನ್ನು ಗಮನಿಸದೇ ತನ್ನ ಎದುರುಗಡೆ ಕೊಪ್ಪಳದ ಕಡೆಯಿಂದ ಬಂದ ಮೋಟಾರ ಸೈಕಲ್ ನಂ: ಕೆಎ-35/ಎಸ್-6230 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ, ಮೋಟಾರ ಸೈಕಲ್ ಸವಾರ ಮಾರ್ಕಂಡೆಪ್ಪ ಇತನಿಗೆ ತಲೆಗೆ, ಎಡತೊಡೆಗೆ, ಎಡಕಾಲ ಪಾದಕ್ಕೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಬಸ್ ಚಾಲಕನು ತನ್ನ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ.   ನಂತರ ಸದರಿ ಪ್ರಕರಣದಲ್ಲಿಯ ಗಾಯಾಳು ಮಾರ್ಕಂಡೆಪ್ಪ ಸಾ: ಲೇಬಗೇರಿ. ಇತನನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದ ಗದಗ ಹತ್ತಿರ ಮದ್ಯಾನ್ಹ 3-00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.


Monday, January 16, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 10/2017 ಕಲಂ : 498(ಎ), 323, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:15-01-2017 ರಂದು ರಾತ್ರಿ 9-50 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸಲ್ಮಾ ಗಂಡ ಶಬ್ಬೀರಸಾಬ ವಯಾ-24 ವರ್ಷ ಸಾ. ಬೂದಗುಂಪಾ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಈಗ್ಗೆ ದಿನಾಂಕ:-24-05-2014 ರಂದು ಬೂದಗುಂಪಾ ಗ್ರಾಮದ ಶಬ್ಬೀರ ತಂದಿ ರಾಜಾಹುಸೇನ್ ಸಾಬ ಇತನೊಂದಿಗೆ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿದ್ದು ಇವರಿಗೆ ಒಂದು ಹೆಣ್ಣು ಮಗು 2 ವರ್ಷದ್ದು ಇದ್ದು ಸದ್ರಿ ಪಿರ್ಯಾದಿದಾರರಿಗೆ ಹೆಣ್ಣು ಮಗುವಾದ ನಂತರ ಪಿರ್ಯಾದಿದಾರರ ಗಂಡ ಶಬ್ಬೀರಸಾಬ ಮತ್ತು ಅತ್ತೆ ಬೀಬಿ ಮಾವ ರಾಜಾಹುಸೇನ್ ಮೈದೂನರಾದ ಹಸನ್ ಸಾಬ ರವರು ಪಿರ್ಯಾದಿದಾರರಿಗೆ ಹೆಣ್ಣು ಮಗುವಾಗಿದೆ ಅಂತಾ ದೈಹೀಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಅಸ್ಲೀಲವಾಗಿ ಬೈದು ಹೊಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿ ದಿನಾಂಕ:-16-05-2016 ರಂದು ಮನೆಯಿಂದ ಹೊರಗಡೆ ಹಾಕಿದ್ದು ಇಷ್ಟು ದಿವಸ ಗಂಡನ ಮನೆಯವರು ಕರೆದುಕೊಂಡು ಹೋಗುತ್ತಾರೆ ಅಂತಾ ಸುಮ್ಮನಿದ್ದು ಇಲ್ಲಿವರೆಗೂ ಕರೆದುಕೊಂಡು ಹೋಗದ ಕಾರಣಕ್ಕೆ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ : 279, 337, 304(ಎ) ಐ.ಪಿ.ಸಿ ಮತ್ತು  187 ಐ.ಎಂ.ವಿ. ಕಾಯ್ದೆ:

ದಿ:15-01-2017 ರಂದು ರಾತ್ರಿ 8-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಗ್ರಾಮದ ವಿರುಪಣ್ಣ ಇವರ ಮೋಟಾರ ಸೈಕಲ್ ನಂ: ಕೆಎ-37/ವಾಯ್-8215 ನೇದ್ದರ ಹಿಂದೆ ಕುಳಿತುಕೊಂಡು ಇಬ್ಬರೂ ತಮ್ಮ ಗ್ರಾಮದಿಂದಾ ಕೊಪ್ಪಳದ ಶ್ರೀ ಗವಿಮಠದ ಜಾತ್ರೆಗೆ ಅಂತಾ ಚಿಲವಾಡಗಿ ಕ್ರಾಸ್ ದಾಟಿ ಎ.ಆರ್. ಢಾಬಾ ಸಮೀಪದಲ್ಲಿ ಕೊಪ್ಪಳದ ಕಡೆಗೆ ಬರುತ್ತಿದ್ದಾಗ, ಅದೇ ಸಮಯಕ್ಕೆ ಎದುರುಗಡೆ ಕೊಪ್ಪಳದ ಕಡೆಯಿಂದ ಆಟೋ ನಂ: ಕೆಎ-36/ಬಿ-1419 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ವಾಹನವನ್ನು ಬಿಟ್ಟು ಅದರ ಚಾಲಕ ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರ ವಿರುಪಣ್ಣನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿದಾರರಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಕಾರಣ ಆಟೋ ನಂ: ಕೆಎ-36/ಬಿ-1419 ನೇದ್ದರ ಚಾಲಕನು ಅಪಘಾತ ಮಾಡಿದ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಚಾಲಕನಿಗೆ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Sunday, January 15, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ : 279, 337 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 14-01-2017 ರಂದು ಸಂಜೆ 6:45 ಗಂಟೆಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರಗೆ ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳುವಿನ ಜೊತೆಗೆ ಇದ್ದ ಶ್ರೀ ವಿರುಪಾಕ್ಷಿ ತಂದೆ ಸುಂಕಪ್ಪ ಮಲಪನಗುಡಿ, ವಯಸ್ಸು: 22 ವರ್ಷ ಜಾತಿ: ಭೋವಿ. ಉ: ವ್ಯವಸಾಯ ಸಾ: ಬುಕ್ಕಸಾಗರ ತಾ: ಹೊಸಪೇಟೆ,ಇವರ ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 14-01-2017 ರಂದು ಸಂಜೆ 6:30 ಗಂಟೆಯ ಸುಮಾರಿಗೆ ಫಿರ್ಯಾದಿ ತಂದೆಯಾದ ಸುಂಕಪ್ಪ ಈತನು ತನ್ನ ಟಿ.ವಿ.ಎಸ್. ಎಕ್ಸಲ್ ಹೆವ್ಹಿ ಡ್ಯೂಟಿ ಮೋಟಾರ ಸೈಕಲ ನಂ: ಕೆ.ಎ-01/ಇ.ಬಿ-2811 ನೇದ್ದರಲ್ಲಿ ಆನೆಗುಂದಿಯಿಂದ ತಳವಾರಘಟ್ಟ ಬ್ರಡ್ಜ ರಸ್ತೆಯ ಕಡೆಗೆ ನಿಧಾನವಾಗಿ ಹೋಗುತ್ತಿರುವಾಗ ಎದುರುಗಡೆಯಿಂದ ನಂಬರ್ ಇರಲಾರದ ಹಿರೋ ಪ್ಯಾಶನ್ ಪ್ರೋ ಮೋಟಾರ ಸೈಕಲನ್ನು ಅದರ ಚಾಲಕನು ಅತೀವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರು ಕೊಟ್ಟು ಅಪಘಾತ ಪಡಿಸಿ ಸ್ಥಳದಲ್ಲಿಯೇ ಮೋಟಾರ ಸೈಕಲ ಬಿಟ್ಟು ಹೋಗಿದ್ದರಿಂದ ಫಿರ್ಯಾದಿ ತಂದೆಯ ತಲೆಗೆ ಗಾಯವಾಗಿ ಮೂಗಿನಿಂದ ರಕ್ತ ಬಂದು ಕೈಕಾಲುಗಳಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ : 279, 337, 338 ಐ.ಪಿ.ಸಿ ಮತ್ತು  187 ಐ.ಎಂ.ವಿ. ಕಾಯ್ದೆ:

ದಿನಾಂಕ : 14-01-2017 ರಂದು ಬೆಳಿಗ್ಗೆ ನಾನು ನಮ್ಮೂರಾದ ಹಿರೇಅರಳಿಹಳ್ಳಿ ಗ್ರಾಮದಿಂದ ಹೊಲದಲ್ಲಿ ಕೆಲಸ ಮಾಡುವ ಸಲುವಾಗಿ ಬಂದು ಸಂಜೆ 7-00 ಗಂಟೆ ಸುಮಾರಿಗೆ ವಾಪಾಸ್ ಹಿರೇಅರಳಿಹಳ್ಳಿಗೆ ಹೋಗುವ ಸಲುವಾಗಿ ನಮ್ಮ ಹೊಲದಿಂದ ಕೃಷ್ಣಗಿರಿ ಕಾಲೋನಿ ಮೂಲಕ ಕುಷ್ಟಗಿಯ ಎನ್.ಹೆಚ್.50 ರಸ್ತೆಯ ಅಂಡರ್ ಗ್ರೌಂಡ ಬ್ರಿಡ್ಜ ಮೇಲೆ ಕುಷ್ಟಗಿಯ ಬಸ್ ನಿಲ್ದಾಣದ ಕಡೆಗೆ ಹೋಗುವ ಸಲುವಾಗಿ ಎನ್.ಹೆಚ್. 50 ರಸ್ತೆಯನ್ನು ದಾಟುತ್ತಿದ್ದಾಗ ಹೊಸಪೇಟೆ ಕಡೆಯಿಂದ ಯಾವುದೋ  ಒಂದು ಮೋ.ಸೈ ಸವಾರನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ವಾಹನವನ್ನು ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಟಕ್ಕರ ಕೊಟ್ಟು ಮೋ.ಸೈ ನ್ನು ನಿಲ್ಲಿಸದೇ ಹೋಗಿದ್ದು, ನನಗೆ ಬಲಗಡೆ ಹಣೆಗೆ ಎಡಗೈ ಮುಂಗೈಗೆ ತೆರಚಿದ ಗಾಯವಾಗಿ ಎಡಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿದ್ದು ಕೂಡಲೇ ಅಲ್ಲಿಯೇ ಇದ್ದ ಹನಮಂತಪ್ಪ ಗುತ್ತೂರು ಹಾಗೂ ಮಲ್ಲೇಶ ತಂದೆ ವಿರುಪಾಕ್ಷಪ್ಪ ಇವರು ಬಂದು ಒಂದು ಖಾಸಗಿ ವಾಹನದಲ್ಲಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು, ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡೆನು.

Friday, January 13, 2017

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 03/2017 ಕಲಂ : 279, 337, 338 ಐ.ಪಿ.ಸಿ:.
ದಿನಾಂಕ: 12-01-2017 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮೋಟಾರ ಸೈಕಲ ನಂ ಕೆಎ-37/w-1763 ನೇದ್ದನ್ನು ಚಲಾಯಿಸಿಕೊಂಡು ತಮ್ಮೂರಿಗೆ ಯಲಬುರ್ಗಾ ಪಟ್ಟಣದಲ್ಲಿ ಬರುವ ಯಲಬುರ್ಗಾ- ಬಂಡಿ ರಸ್ತೆ ಮೇಲೆ ಡಾ- ಬಿ.ವಿ ಇಟಗಿ ಇವರ ಶಿವಕೃಪಾ ಆಸ್ಪತ್ರೆಯ  ಹತ್ತಿರ ಹೋಗುತ್ತಿದ್ದಾಗ ಪಿರ್ಯಾದಿದಾರನ ಹಿಂದುಗಡೆಯಿಂದ ಅಂದರೆ ಯಲಬುರ್ಗಾ ಪಟ್ಟಣದಲ್ಲಿ ಬರುವ ಕನಕದಾಸ ವೃತ್ತದ ಕಡೆಯಿಂದ ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ ನಂ ಕೆಎ-37/ಈಎ-7905 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನ ಮೋಟಾರ ಸೈಕಲ ಹಿಂದಿನಿಂದ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರಿಗೆ ಸಾದಾ & ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ಕಾರಣ ಸದರಿ ಮೋಟಾರ ಸೈಕಲ್ ಸವಾರನ ವಿರುದ್ಧ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ : 341, 355, 504, 506 ಸಹಿತ 34 ಐ.ಪಿ.ಸಿ:.
ದಿ: 12-01-2017 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರಾದ ರಾಯಪ್ಪ ತಂದೆ ಹನುಮಪ್ಪ ಹಟ್ಟಿ ಸಾ: ಇರಕಲಗಡಾ ಇವರು ದೂರು ನೀಡಿದ್ದು, ದಿ: 10-01-2017 ರಂದು ಮಧ್ಯಾಹ್ನ 03-40 ಗಂಟೆಗೆ ಕೊಪ್ಪಳ ನಗರದ ತಾಲೂಕ ಪಂಚಾಯತಿ ಆಫೀಸ್ ಹತ್ತಿರ ಕಲಕೇರಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾದ ಹನಮಂತಪ್ಪ ನಾಯಕ ಈತನು ತನ್ನ ಸಂಗಡ ಓರ್ವ ವ್ಯಕ್ತಿಯನ್ನು ಕರೆದುಕೊಂಡು ಮೋಟಾರ್ ಸೈಕಲ್ ಮೇಲೆ ಬಂದು ನನ್ನ ಮೋಟಾರ್ ಸೈಕಲ್ ಅಡ್ಡ ಗಟ್ಟಿ ಹನುಮಂತಪ್ಪ ನಾಯಕ ಈತನು ನನಗೆ ಲೇ ಸೂಳೆ ಮಗನೆ ನನ್ನ ಮೇಲೆ ಕಂಪ್ಲೇಟ್ ಮಾಡತೀಯಾ ಅಂತಾ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲು ಮುಂದಾಗಿ ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದು ಸಾರ್ವಜನಿಕರ ಮುಂದೆ ನನಗೆ ಮಾನ ಹಾನಿ ಮಾಡಿರುತ್ತಾನೆ. ಅಲ್ಲದೆ ಜೀವದ ಭಯ ಉಂಟಾಗಿದೆ ಕಾರಣ ಹನಮಂತಪ್ಪನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 07/2017 ಕಲಂ 454, 457, 380 ಐ.ಪಿ.ಸಿ:.

ದಿನಾಂಕ:-12-01-2017 ರಂದು ಬೆಳಿಗ್ಗೆ 11-05 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶರಣಪ್ಪ ತಂದಿ ಪರ್ವತಗೌಡ ಬೆಣಕಲ್ ವಯಾ-36 ವರ್ಷ ಜಾ. ಲಿಂಗಾಯತ ಉ-ವ್ಯವಹಾರ ಸಾ. ಜೆ.ಪಿ ನಗರ ಕಾರಟಗಿ. ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಪಿರ್ಯಾದಿದಾರರು ದಿನಾಂಕ:-10-01-2017 ರಂದು ಗಂಗಾವತಿಯ ಶ್ರೀ ಚನ್ನಬಸವೇಶ್ವರ ಜಾತ್ರೆ ಇದ್ದುದರಿಂದ ಅಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ತಮ್ಮ ಕುಟುಂಬ ಸಮೇತ ಗಂಗಾವತಿಯ ಜಾತ್ರೆಗೆಂದು ಜೆ.ಪಿ ನಗರದಲ್ಲಿರುವ ನಮ್ಮ ಮನೆಗೆ ಮುಖ್ಯಾ ಭಾಗಿಲಿಗೆ ಭೀಗ ಹಾಕಿಕೊಂಡು ಹೋಗಿ ಇಂದು ದಿನಾಂಕ;-12-01-2017 ರ ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಮನೆಗೆ ಬಂದು ನೋಡಲು ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿಕೊಂಡು ಹೋಗಿದ್ದ ಭೀಗದ ಚಿಲಕವು ಮುರಿದು ಒಳಗಡೆ ಹೋಗಿ ಬೆಡ್ ರೂಮಿನಲ್ಲಿ ಇಟ್ಟಿದ್ದ ಟ್ರೀಜರಿಯ ಬಾಗಿಲು ತೆರೆದು ಅದರಲ್ಲಿ 1) 20 ಗ್ರಾಂನ ಬಂಗಾರದ ಒಂದು ನಕ್ಲೇಸ್ ಅಂ.ಕಿ 48000=00 ಗಳು 2) 5 ಗ್ರಾಂನ ಒಂದು ಬಂಗಾರದ ಚೈನ್ ಸರ ಅಂ.ಕಿ 13000=00 ಗಳು 3) ಅಂದಾಜು 5 ಗ್ರಾಂ ನ ಮಕ್ಕಳ 6 ಸಣ್ಣ ಬಂಗಾರದ ಉಂಗುರಗಳು ಅಂ.ಕಿ 13000=00 ಗಳು 4) 5 ಗ್ರಾಂನ ಲಕ್ಷ್ಮಿ ಮೂರ್ತಿ ಇರುವ ಬಂಗಾರದ ಉಂಗರ ಅ.ಕಿ 13000=00 ಗಳು 5) ಅಂದಾಜು 7 ಗ್ರಾಂನ ಎರಡು ಜೊತೆಯ ಕೀವಿಯ ರಿಂಗ್ ಗಳು ಅಂ.ಕಿ 18000=00 ಗಳು 6) ಅಂದಾಜು 5 ಗ್ರಾಂ ನ ಒಟ್ಟು 110 ತಾಳಿಯ ಗುಂಡುಗಳು ಅಂ ಕಿ 12000=00 ಗಳು 7) 8 ತೊಲೆಯ ಒಂದು ಜೊತೆ ಕಾಲು ಚೈನು ಅಂ.ಕಿ 3200=00 8) 10 ತೊಲೆಯ ಮಕ್ಕಳ ಬೆಳ್ಳಿ ಗೆಜ್ಜೆಗಳು ಮಾವಿನ ಗೆಜ್ಜೆಗಳು ಅಂ ಕಿ 4000=00 ಮತ್ತು 13500=00 ನಗದು ಹಣ ಕಾಣಲಿಲ್ಲಾ ಹೀಗೆ ಒಟ್ಟು 47 ಗ್ರಾಂ ಬಂಗಾರದ ಆಭರಣಗಳು ಅಂದಾಜು ಕಿಮ್ಮತ್ತು 117000=00 ರೂ. ಗಳು ಮತ್ತು 18 ತೊಲೆ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 7200=00 ರೂ. ಗಳು ಹಾಗೂ ನಗದು ಹಣ 13500=00 ರೂ. ಗಳನ್ನು ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

Thursday, January 12, 2017

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 05/2017 ಕಲಂ : 279, 338 ಐ.ಪಿ.ಸಿ:.
ದಿನಾಂಕ 11-01-2017 ರಂದು ಮದ್ಯಾಹ್ನ 2-45 ಫಿಯರ್ಾದಿದಾರರಾದ ಶ್ರೀ ರಾಮಾಂಜನೇಯರೆಡ್ಡಿ ತಂದೆ ಹನುಮಂತರೆಡ್ಡಿ ಚಿತ್ತರಕಿ ವಯ. 33 ಜಾ.ಹಿಂದೂ ರೆಡ್ಡಿ ಉ.ಒಕ್ಕಲುತನ ಸಾ. 11 ನೇ ವಾರ್ಡ ಕನಕಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿಯರ್ಾದಿಯನ್ನು ನೀಡಿದ್ದು ಅದರ ಸಾರಾಂಶವೇನೇಂದರೇ ನಿನ್ನೆ ದಿನಾಂಕ 10-01-2017 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಶಂಕ್ರಪ್ಪ ತಂದೆ ನಿಂಗಪ್ಪ ನವಲಹಳ್ಳಿ ಈತನು ಶಶಿಧರ ತಂದೆ ಮಲ್ಲಪ್ಪ ಸಮಗಂಡಿ ಈತನನ್ನು ಹೊಂಡಾ ಶೈನ ಮೋ/ಸೂ ಸಂ. ಕೆ.ಎ-37  ಎಕ್ಸ-6637 ನೇದ್ದರಲ್ಲಿ ಕೂಡ್ರಿಸಿಕೊಂಡು ನವಲಿ ಕಡೆಯಿಂದ ಕನಕಗಿರಿ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವಡಕಿ ಸೀಮಾದ ಶ್ರೀ ಬೀರಲಿಂಗೇಶ್ವರ ಗುಡಿಯ ಹತ್ತಿರ ತಿರುವಿನಲ್ಲಿ ಮೋ ಸೈ ನ್ನು ನಿಯಂತ್ರಿಸಲಾಗದೇ ರಸ್ತೆಯ ಎಡ ಪಕ್ಕದಲ್ಲಿ ಕೆಡವಿ ಅಪಘಾತವನ್ನು ಮಾಡಿದ್ದು ಇದರಿಂದ ಶಶಿಧರ ಸಮಗಂಡಿ ಈತನಿಗೆ ಎಡಗಾಲು ಮೊಣಕಾಲಿಗೆ ಭಾರಿ ಒಳಪೆಟ್ಟು ಉಂಟಾಗಿ ಮುರಿದಿರುತ್ತದೆ ಎಡಗೈ ಮುಂಗೈಗೆ ಮುರಿದು ರಕ್ತ್ತ ಬಂದಿರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 013/2017 ಕಲಂ : 279, 338 ಐ.ಪಿ.ಸಿ:.
ದಿನಾಂಕ:- 11-01-2017 ರಂದು ರಾತ್ರಿ 07:00 ಗಂಟೆಗೆ ಫಿರ್ಯಾದಿದಾರರಾದ ಕೃಷ್ಣ ತಂ/ ಆಶಣ್ಣ ಕಂಪಾಟಿ ವಯಾ 32 ವರ್ಷ, ಸಾ. ತಿರುಮಲಾಪುರ ತಾ: ಗಂಗಾವತಿ ಇವರು ಫಿರ್ಯಾದಿಯನ್ನು ನೀಡಿದ್ದು, ದಿನಾಂಕ:- 10-01-2017 ರಂದು ರಾತ್ರಿ 07-00 ಗಂಟೆಯ ಸುಮಾರಿಗೆ ಗಂಗಾವತಿ-ಹುಲಗಿ ರಸ್ತೆಯ ಮೇಲೆ ತಿರುಮಲಾಪುರ ಗ್ರಾಮದ ಹತ್ತಿರ ಆನೆಗುಂದಿಯಿಂದ ಬಸಾಪುರಕ್ಕೆ ಹೋಗಲು ರಂಗಪ್ಪ ಈತನು ಮೋ.ಸೈ. ನಂ. ಕೆ.ಎ.35/ಕ್ಯೂ.8932 ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಬಸಾಪುರದಿಂದ ಸಾಣಾಪುರಕ್ಕೆ ಹೋಗಲು ರಾಜಾಬಕ್ಷಿ ಈತನು ನಂಬರ ಇರದ ಆಟೋವನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಇಬ್ಬರು ಎದರು ಬದುರಾಗಿ ಡಿಕ್ಕಿ ಅಪಘಾತ ಮಾಡಿಕೊಂಡಿದ್ದು ಇರುತ್ತದೆ. ಈ ಅಪಘಾದಲ್ಲಿ ರಂಗಪ್ಪ ಇವರಿಗೆ ಎಡಗಾಲ ಎಲಬು ಮುರಿದು ಗಾಯವಾಗಿದ್ದು ಮುಖಕ್ಕೆ, ಮೂಗಿಗೆ, ಎಡಗೈ ಮುಂಗೈಗೆ ಗಾಯವಾಗಿರುತ್ತದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 03/2017 ಕಲಂ 379 ಐ.ಪಿ.ಸಿ:.
ದಿನಾಂಕ 11-01-2017 ರಂದು ಬೆಳಿಗ್ಗೆ 8-00 ಎ.ಎಂ ಗಂಟೆಗೆ ಜೀಲಾನಿ ಪಾಷ ತಂದೆ ಮೊಹ್ಮದ ಸಾಬ, ವಯಾ 50 ವರ್ಷ, ಜಾತಿ: ಮುಸ್ಲಿಂ, ಉ: ಲಾರಿ ನಂಬರು ಕೆಎ-37-3870 ನೇದ್ದರ ಮಾಲಿಕರು, ಸಾ: ಗುಂಡಮ್ಮ ಕ್ಯಾಂಪ 22 ನೇ ವಾರ್ಡ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಪಿರ್ಯಾಧಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 09-01-2016 ರಂದು 10-00 ಪಿ ಎಮ್ ದಿಂದ ದಿನಾಂಕ: 10-01-2017 ರಂದು ಬೆಳಗಿನ 5-00 ಎ,ಎಂ ನಡುವಿನ ಅವಧಿಯಲ್ಲಿ   ಯಾರೋ ಕಳ್ಳರು ಗಂಗಾವತಿ ನಗರದಲ್ಲಿನ ತುಂಗಭದ್ರ ಟ್ರಾನ್ಸಪೋರ್ಟ ಹತ್ತಿರ ನಿಲ್ಲಿಸಿದ್ದ ಪಿರ್ಯಾಧಿದಾರರ ಲಾರಿ ನಂ ಕೆ,ಎ 37 – 3870 ನೇದ್ದನ್ನು   ಕಳ್ಳತನ ಮಾಡಿಕೊಂಡು ಹೋಗಿ ಅದನ್ನು ಗೂಗಿ ಬಂಡಿ- ಸಿಂಗನಗುಂಡ ಮಧ್ಯದ ರಸ್ತೆಯಲ್ಲಿ ಬಿಟ್ಟು , ಸದರಿ ಲಾರಿಯಲ್ಲಿಂದ (01] ಅಪೋಲೋ—04 ಟೈರು.— ಅಂ.ಕಿ 90,000-00 ರೂಪಾಯಿ.02] ಎಂ.ಅರ್.ಎಫ್.- 02 ಟೈರು.ಅಂ.ಕಿ 45,000-00 ರೂಪಾಯಿ.03] ಜೆ.ಕೆ. ಟೈರು. :- 01, ಅಂ.ಕಿ 23,000-00 ರೂಪಾಯಿ.04] 1 ಟೇಪ ರಿಕಾರ್ಡ, ಅ.ಕಿ. 1500-00. ಹಾಗೂ ಜಾಕ ಮತ್ತು ಜಾಕರಾಡ- ಅಂ.ಕಿ 4000-00 ರೂಪಾಯಿ  ಒಟ್ಟು 1,63,500-00.  ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ಪಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 379 ಐ.ಪಿ.ಸಿ:.

ದಿನಾಂಕ: 11-01-2017 ರಂದು ರಾತ್ರಿ 9-15 ಗಂಟೆಗೆ ಫಿರ್ಯಾದಿದಾರರಾದ ಗವಿಸಿದ್ದಪ್ಪ ತಂದೆ ಅಮರಪ್ಪ ಗೊಂಡಬಾಳ ವಯಾ: 38 ವರ್ಷ  ಸಾ: ಕುಂಬಾರ ಓಣಿ ಕೊಪ್ಪಳ.  ಫಿರ್ಯಾದಿದಾರರು ದಿನಾಂಕ: 03-01-2017 ರಂದು ಸಂಜೆ 6-00 ಗಂಟೆ ಸುಮಾರಿಗೆ ತನ್ನ ಮಾಲಿಕತ್ವದ ಲಾರಿ ನಂ ಕೆ.ಎ 52 0700 ನೇದ್ದನ್ನು ನಗರದ ಎ.ಪಿ.ಎಮ್.ಸಿ ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದು, ಅಂದು ರಾತ್ರಿ 10-30 ಗಂಟೆಯವರೆಗೆ ತಾನು ಲಾರಿಯಲ್ಲಿ ಇದ್ದು, ನಂತರ ತಾನು ಊಟಕ್ಕೆ ಮನೆಗೆ ಹೋಗಿ ವಾಪಸು ಮುಂಜಾನೆ ದಿನಾಂಕ: 04-01-2017 ರಂದು ಬೆಳಿಗ್ಗೆ 5-00 ಗಂಟೆಯ ಸುಮಾರಿಗೆ ತಾನು ಲಾರಿ ಹತ್ತಿರ ಬಂದು ನೋಡಿದಾಗ ತಾನು ನಿಲ್ಲಿಸಿದ್ದ ತನ್ನ ಲಾರಿ ಕಾಣಲಿಲ್ಲಾ, ನಂತರ ತಾನು ಮತ್ತು ತನ್ನ ಗೆಳೆಯರೊಂದಿಗೆ ಸುತ್ತಾಮುತ್ತಾ ಹುಡುಕಿದಾಗ ತನ್ನ ಲಾರಿಯನ್ನು ಕಾಸನಕಂಡಿ ಹತ್ತಿರ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿ ಅದರ ಎಲ್ಲಾ ಹತ್ತು ಗಾಲಿಗಳು, ಒಂದು ಸ್ಟೇಪನಿ, ಹಾಗೂ ತಾಡಪಾಲು, ಜಾಕ್, ಬ್ಯಾಟರಿ ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 1,64,400=00 ಬೆಲೆಬಾಳುವುಗಳನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ತಾನು ಎಲ್ಲಾ ಹುಡುಕಾಡಿ ಸಿಗದೇ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದು ಅದೆ.

 
Will Smith Visitors
Since 01/02/2008