Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 24, 2015

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 143/2015 ಕಲಂ. 279, 337, 338. 304(ಎ) ಐ.ಪಿ.ಸಿ:.  
ದಿನಾಂಕ:23-10-2015 ರಂದು 3-00 ಪಿಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ವಿಚಾರಿಸಿದ್ದು, ಇಬ್ಬರೂ ಗಾಯಾಳುಗಳನ್ನು ಗದಗಗೆ ರೇಫರ್ ಮಾಡಿದ್ದು, ಕಳುಹಿಸಿ, ಪಿರ್ಯಾದಿಯ ಹೇಳಿಕೆ ಪಿರ್ಯಾದಿಯನ್ನು 3-10 ಪಿಎಂದಿಂದ 4-10  ಪಿಎಂದವರೆಗೆ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ಆರೋಪಿತನು ಚಲಾಯಿಸುತ್ತಿದ್ದ ಟ್ರ್ಯಾಕ್ಟರದಲ್ಲಿ ತಾನು, ಸುರೇಶ, ಶರಣಪ್ಪ ಹಾಗೂ ಯಲ್ಲಪ್ಪ ಸೇರಿ ಸಿಮೆಂಟ್ ಹೆಂಡಿಗಳನ್ನು ಲೋಡ್ ಮಾಡಿಕೊಂಡು ಕುಕನೂರದಿಂದ ಬೇವೂರಗೆ ಹೋಗುತ್ತಿರುವಾಗ ಸದರ ಟ್ರ್ಯಾಕ್ಟರಿಯನ್ನು ಆರೋಪಿತ ಕುಕನೂರಿನ ಗುದ್ನೆಪ್ಪ ಸರ್ಕಲ್ ಕಡೆಯಿಂದ ಗುದ್ನೆಪ್ಪನ ಮಠದ ಕಡೆಗೆ ಹೋಗುವ ಗ್ರಾಮ ಪಂಚಾಯತಿಯ ಹತ್ತಿರ ರಸ್ತೆಯ ತಿರುವಿನಲ್ಲಿ ಟ್ರ್ಯಾಕ್ಟರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಟ್ರ್ಯಾಲಿ ಪಲ್ಟಿಯಾಗಿದ್ದು, ತಾನು ಪುಟಿದು ಮುಂದೆ ಬಿದ್ದಿದ್ದು, ಆದರೆ, ಉಳಿದವರು ಹೆಂಡಿಯ ಕೆಳಗೆ ಸಿಕ್ಕಿಹಾಕಿಕೊಂಡಿದ್ದು, ನೋಡಿದ ಜನ ಬಂದು ಉಪಚರಿಸಲು ಯಲ್ಲಪ್ಪ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುರೇಶ ಮತ್ತು ಶರಣಪ್ಪ ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತನಗೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು, ಅಂಬ್ಯುಲೆನ್ಸ್ ದಲ್ಲಿ ತಮಗೆ ಚಿಕಿತ್ಸೆ ಕುರಿತು ಕರೆದುಕೊಂಡು ಬಂದಿದ್ದು, ಸದರ ಘಟನೆಗೆ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದ ಚಾಲನಯೇ ಕಾರಣವಾಗಿರುತ್ತದೆ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ 4-20 ಪಿಎಂಕ್ಕೆ ಬಂದು ಸದರ ದೂರಿನ ಸಾರಾಂಶದ ಮೇಲಿಂದ ಕುಕನೂರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 183/2015 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ 23-10-2015 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯಾಧಿದಾರರಾದ ಯಮನಪ್ಪ ತಂದೆ ಹನಮಪ್ಪ ಗುಮಗೇರಿ ವಯಾ: 50 ವರ್ಷ ಜಾತಿ: ವಾಲ್ಮಿಕಿ ಉ; ಒಕ್ಕಲುತನ ಸಾ: ಕಂದಕೂರು   ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತಿ ಫಿರ್ಯಾದಿ ಸಾರಾಂಶವೇನೆಂದರೆ, ನನ್ನ ಕಾಸಾ ಅಣ್ಣನಾದ ಹನಮಂತಪ್ಪ ಇತನ ಮಗನಾದ ಕನಕಪ್ಪ ಗುಮಗೇರಿ ಇತನು ಹಿರೋ ಮೋಟರ್ ಸೈಕಲ್ ನಂ: ಕೆ.ಎ-37/ವಿ-4963 ನೇದ್ದನ್ನು ತೆಗೆದುಕೊಂಡು ತನ್ನಅಕ್ಕಳಾದ ಮಂಜಮ್ಮಳನ್ನು ನಾಗರಾಳ ಊರಿಗೆ ಬಿಟ್ಟು ಬರಲು ಇಂದು ದಿನಾಂಕ: 23-10-2015 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಹೋಗಿದ್ದನು. ನಂತರ ಮಂಜವ್ವಳನ್ನು ಬಿಟ್ಟು ವಾಪಾಸ್ ಕಂದಕೂರು ಗ್ರಾಮ್ಕಕೆ ಬರುವಾಗ ದಾರಿಯಲ್ಲಿ ನಮ್ಮೂರ ಮೌನೇಶ ತಂದೆ ಮಲ್ಲಪ್ಪ ಚಕ್ರಸಾಲಿ ಇತನು ನಾನು ಊರಿಗೆ ಬರುತ್ತೇನೆ ಅಂತಾ ಹೇಳಿದ್ದರಿಂದ ಕನಕಪ್ಪನು ಮೌನೇಶನನ್ನು ತನ್ನ ಮೊಟರ್ ಸೈಕಲ್ ನ ಹಿಂದುಗಡೆ ಕುಡಿಸಿಕೊಂಡು ಊರಿಗೆ ಬರುವಾಗ ಸಂಜೆ 4-00 ಗಂಟೆ ಸುಮಾರಿಗೆ ಕಂದಕೂರು ಸೀಮಾದಲ್ಲಿ ಕಂದಕೂರು ನಾಗರಾಳ ರಸ್ತೆಯಲ್ಲಿ ಶರಣಪ್ಪ ಬಿಜಕಲ್ ಇವರ ಹೊಲದ ಹತ್ತಿರ ಎಡಗಡೆ ಬರುತ್ತಿರುವಾಗ ಎದುರುಗಡೆಯಿಂದ ಮಿನಿ ಲಾರಿ ನಂ: ಕೆ.ಎ-28/9487 ನೇದ್ದರ ಚಾಲಕನಾದ ಬಸವರಾಜ ತಂದೆ ದೇವಪ್ಪ ಕಾಮನೂರು ಸಾ: ಕಂದಕೂರು ಇತನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಾಗರಾಳ ಕಡೆಯಿಂದ ಬರುತ್ತಿದ್ದ ಕನಕಪ್ಪನ ಮೋಟರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಕನಕಪ್ಪನಿಗೆ ಎಡಗಡೆ ತಲೆಗೆ ಭಾರಿ ರಕ್ತ ಗಾಯವಾಗಿ ಮಾಂಸ ಮುದ್ದೆಗಳು ಹೊರ ಬಂದಿದ್ದು, ಹಣೆಗೆ, ಬಲಗಾಲ ಮೊಣಕಾಲಿಗೆ ಭಾರಿ ರಕ್ತ ಗಾಯವಾಗಿ  ಬಲ ಭುಜ ಮುರಿದಂತಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂದೆ ಕುಳಿತ ಮೌನೇಶ ಚಕ್ರಸಾಲಿ ಇತನಿಗೆ ತಲೆಯ ಹಿಂಬಾಗಕ್ಕೆ ಬಾರಿ ರಕ್ತ ಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಬಲಗಾಲ ಮೊಣಕಾಲು ಮುರಿದಂತಾಗಿದ್ದು ನಂತರ ದಾರಿಯಲ್ಲಿ ಹೋಗುತ್ತಿದ್ದ ನಮ್ಮ ಅಳಿಯನಾದ ಶರಣಪ್ಪ ಗೋಪಾಳಿ ಇತನು ನೋಡಿ ನನಗೆ ಫೋನ್ ಮಾಡಿ ವಿಷಯ ತಿಳಿಸಿದನು. ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ. ನಂತರ ಭಾರಿ ರಕ್ತ ಗಾಯಗೊಂಡ ಮೌನೇಶ ಚಕ್ರಸಾಲಿ ಇತನನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟಗೆ ತೆಗೆದುಕೊಂಡು ಹೋಗುತ್ತಿರುವಾಗ ದಾರಿ ಮದ್ಯದಲ್ಲಿ ಟೋಲ್ ನಾಕಾ ಹತ್ತಿರ ಮೌನೇಶನು ಸಹ ಮೃತಪಟ್ಟಿರುತ್ತಾನೆ. ಸದರಿ ಅಪಘಾತಪಡಿಸಿದ ಮಿನಿ ಲಾರಿ ನಂ: ಕೆ.ಎ-28/9487 ನೇದ್ದರ ಚಾಲಕನಾದ ಬಸವರಾಜ ಕಾಮನೂರು ಸಾ: ಕಂದಕೂರು ಇತನು ವಾಹನವನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಕಾರಣ ಆತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 236/2015 ಕಲಂ. 307 ಐ.ಪಿ.ಸಿ:.

ದಿನಾಂಕ 23-10-2015 ರಂದು 21-30 ಗಂಟೆಗೆ ಶ್ರೀಮತಿ ಸುಂಕಮ್ಮ ಗಂಡ ಹನುಮಂತಪ್ಪ ವಯಾ: 68 ವರ್ಷ, ಜಾ: ಭೋವಿ, ಉ: ಕೂಲಿ ಕೆಲಸ, ಸಾ: ವಿರುಪಾಪೂರ ಗಂಗಾವತಿ ರವರು  ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿತನಾದ ಶೇಖರಪ್ಪ ಇವನು ಗಾಯಾಳು ಅಂಜಿನಪ್ಪ ಈತನ ಹತ್ತಿರ ಟ್ರಾಕ್ಟರ್ ಡ್ರೈವರ್ ಕೆಲಸ ಮಾಡಿಕೊಂಡಿದ್ದು, ಅವನು ಇಂದು ಗಾಯಾಳು ಅಂಜಿನಪ್ಪನಿಗೆ ರಾತ್ರಿ 8-30 ಗಂಟೆಯ ಸುಮಾರಿಗೆ ಸಾರಾಯಿ ಕುಡಿಯುಲು ಹಣ ಕೇಳಿದ್ದು ಆ ಸಮಯದಲ್ಲಿ ಅವನು ನನ್ನ ಬಳಿ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗಿದ್ದು ಇರುತ್ತದೆ. ನಂತರ ಅಂಜಿನಪ್ಪನು ಇಂದು ದಸರಾ ಹಬ್ಬ ಇದ್ದುದರಿಂದ ಓಣಿಯಲ್ಲಿನ ತನ್ನ ಸಂಬಂಧಿಕರಿಗೆ ಮತ್ತು ಕುಲಸ್ಥರಿಗೆ ಬನ್ನಿ ಕೊಡಲು ಹೋಗಿದ್ದು, ಅವನು ಬನ್ನಿ ಕೊಡಲು ಹೋದ ಸಮಯವನ್ನು ನೋಡಿ ಆರೋಪಿತನಾದ ಶೇಖರಪ್ಪ ಇವನು ಅಂಜಿನಪ್ಪನು ತನಗೆ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅವನನ್ನು ಕೊಲೆ ಮಾಡಿ ಬಿಡಬೇಕು ಎಂಬ ಉದ್ದೇಶದಿಂದ ಸಾರಾಯಿ ಬಾಟಲಿಯನ್ನು ತೆಗೆದುಕೊಂಡು ನನ್ನ ಅಕ್ಕಳ ಮಗನಾದ ಅಂಜಿನಪ್ಪನಿಗೆ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಅದರಿಂದ ಅಂಜಿನಪ್ಪನಿಗೆ ಬಾರೀ ಪ್ರಮಾಣದ ರಕ್ತಗಾಯವಾಗಿದ್ದು ಇರುತ್ತದೆ. ಸದ್ಯ ಅವನನ್ನು ಚಿಕಿತ್ಸೆ ಕುರಿತು ಬಳ್ಳಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008