Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 29, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 15/2016 ಕಲಂ: 279, 337, 338, 304(ಎ) ಐ.ಪಿ.ಸಿ:
ದಿ:-29-01-16 ರಂದು ಬೆಳಗಿನ  ಜಾವ 12-45 ಗಂಟೆಗೆ  ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಮಾಹಿತಿ ಬಂದಿದ್ದರಿಂದ ಕೂಡಲೆ ಆಸ್ಪತ್ರೆಗೆ ಬೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ದಾಖಲಾಗಿದ್ದವರ ಬಗ್ಗೆ ವಿಚಾರಿಸಿ ಅಲ್ಲಿ ಹಾಜರಿದ್ದ ಪ್ರತ್ಯೇಕ್ಷ ಸಾಕ್ಷಿ  ಕರಿಯಪ್ಪ ತಂದೆ ಮೂಕಪ್ಪ ವಯ 45 ವರ್ಷ ಸಾ. ನಂದಿಹಳ್ಳಿ ತಾ. ಗಂಗಾವತಿ  ರವರಿಗೆ ವಿಚಾರಿಸಲು ಇವರು ಒಂದು ಲಿಖಿತ ದೂರನ್ನು ಬರೆಯಿಸಿಕೊಟ್ಟಿದ್ದು ಅದರ ಸಾರಾಂಶವೆನಂದರೆ, ನಾನು ಮತ್ತು ನಮ್ಮೂರಿನ ಬಸವರಾಜ ಇಬ್ಬರು ಕೂಡಿ ಗಂಗಾವತಿಯಲ್ಲಿ ತಮ್ಮ ಸಂಬಂದಿಕರ ಮನೆಯಲ್ಲಿ ಇದ್ದ ಕಾರ್ಯವನ್ನು ಮುಗಿಸಿಕೊಂಡು ತಮ್ಮ ಮೋಟಾರ್ ಸೈಕಲ್ ಮೇಲೆ ಗಂಗಾವತಿ ರಾಯಚೂರು ರಸ್ತೆಯ ಮೇಲೆ ವಾಪಾಸ ಮನೆಗೆ ಬರುತ್ತಿರುವಾಗ್ಗೆ ಸಾಲುಂಚಿಮರ ದಾಟಿ ಕಾರಟಗಿ ಕಡೆಗೆ ಬರುತ್ತಿರುವಾಗ್ಗೆ ಕಾರ್ ನಂ ಕೆ.ಎ-36 ಎನ್.1611 ನೆದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ  ಅಲಕ್ಷತನದಿಂದ ಚಾಲಾಯಿಸಿಕೊಂಡು ನಮ್ಮ ಮೋಟಾರ್ ಸೈಕಲ್ ಸೈಡ ಹಾಕಿ ಮುಂದೆ ಬಂದು ಆಂಜನೆಯ ದೇವಸ್ಥಾನದ ಹತ್ತಿರ  ಕಾರಟಗಿ ಕಡೆಯಿಂದ ತನ್ನ ಸೈಡಿನಲ್ಲಿ ಬರುತ್ತಿದ್ದ ಟಾಟಾ ಏಸ್ ವಾಹನ ನಂ ಕೆಎ-34/ಎ-6440 ನೆದ್ದಕ್ಕೆ ಎದರುಗಡೆಯಿಂದ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಎರಡು ವಾಹನಗಳ ಮುಂದಿನ ಭಾಗ ಸಂಪೂರ್ಣ ಜಕಂಗೊಂಡು ಟಾಟಾ ಏಸ್ ವಾಹನದಲ್ಲಿ ಕುಳಿತಿದ್ದ ವಾಹನ ಚಾಲಕ 1) ಯಂಕನಗೌಡ ತಂದೆ ಬಸನಗೌಡ  ಸಾ. ಟಿ. ರಾಂಪೂರ 2) ತಿಪ್ಪಣ್ಣ ತಂದೆ ಅಳ್ಳಪ್ಪ ನಾಯಕರ ಟಿ. ರಾಂಪೂರ 3) ಫಕೀರಪ್ಪ ತಂದೆ ಮಾರೆಪ್ಪ ಸಾ. ಕರ್ಜಿಗನೂರ 4) ಕನಗಿರಿ ತಂದೆ ಶಿವಮೂರ್ತಿ 5) ಗುಂಡಪ್ಪ ತಂದೆ ಶಿವನಪ್ಪ ಮತ್ತು ಕಾರ್ ಚಾಲಕ ಶ್ರೀನಿವಾಸ ಶೆಟ್ಟಿ ಮತ್ತು ಚಂದ್ರಶೇಖರ ಅಂಗಡಿ ಇವರಿಗೆ ಗಂಭೀರ ಮತ್ತು ಸಾಧಾ ಸ್ವರೂಪದ ಗಾಯಗಳಾಗಿರುತ್ತದೆ ಈ ಘಟನೆಯು ದಿನಾಂಕ:-28-01-2016 ರಂದು ರಾತ್ರಿ 11-40 ರಿಂದ 11-55 ಗಂಟೆಯ ಅವಧಿಯಲ್ಲಿ ಸಂಭವಿಸಿರುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ತಿಪ್ಪಣ್ಣ ತಂದೆ ಅಳ್ಳಪ್ಪ ನಾಯಕರ ಟಿ. ರಾಂಪೂರ ಈತನು ಮೃತಪಟ್ಟಿದ್ದು ಮತ್ತು ಪಕೀರಪ್ಪ ತಂದಿ ಮಾರೆಪ್ಪ ಈತನು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಕುರಿತು ಕಳುಹಿಸಿಕೊಡುತ್ತಿದ್ದಂತೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಈ ಘಟನೆಗೆ ಕಾರಣನಾದ ಕಾರ್ ನಂ  ಚಾಲಕ ಕೆ.ಎ-36 ಎನ್-1611 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 107 ಸಿ.ಆರ್.ಪಿ.ಸಿ.
ಚುನಾವಣಾ ಆಯೋಗ ತಾಲೂಕಾ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು ಈಗ ಚುನಾವಣಾ ನೀತಿ ಸಂಹಿತೆಯು ಜಿಲ್ಲೆಯಲ್ಲಿ ಮತ್ತು ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈಗಾಗಲೇ ಗ್ರಾಮಗಳಲ್ಲಿ ಸ್ಥಳಿಯ ಮುಖಂಡರುಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಮತ್ತು ತಾಲೂಕಾ ಮತ್ತು ಜಿಲ್ಲಾ ಪಂಚಾಯತ ಚುನಾವಣೆಗೆ ಸಾರ್ವಜನಿಕರಲ್ಲಿ ಮತಯಾಚಿಸುತ್ತಿದ್ದು, ಅಲ್ಲದೆ ಗ್ರಾಮಗಳ ಓಣಿಗಳಲ್ಲಿ ಮತಯಾಚನೆಯ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖ್ಯಗಣ್ಯರು, ಮುಖಂಡರು ಸದರ  ಚುನಾವಣೆಯ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಮತ ಕೇಳುವುದಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಕೊಪ್ಪಳ ಗ್ರಾಮೀಣ ಠಾಣಾ ಸರಹದ್ದಿ ಎಂ.ಓಬಿ ಆಸಾಮಿಯಾದ ನಾಗರಾಜ ತಂದೆ ಗಿರಿಯಪ್ಪ ಕವಲೂರ. ವಯಾ: 25 ವರ್ಷ, : ಉಪ್ಪಾರ, . ಕೂಲಿಕೆಲಸ ಸಾ. ಗಿಣಿಗೇರಿ. ಇವನು ತಮ್ಮ ಚಟುವಟಿಕೆಯನ್ನು ಮುಂದುವರೆಸಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಗಳ ಓಣಿಗಳಲ್ಲಿ ಬೇರೆ ಬೇರೆ ಅಭ್ಯರ್ಥಿಗಳಲ್ಲಿ ವೈಮನಸ್ಸನ್ನು ಉಂಟು ಮಾಡಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಗ್ರಾಮಗಳಲ್ಲಿ ಶಾಂತಿ ಕದಡಿ ಅಶಾಂತತೆ ನೆಲೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಮಾಡುವ ಸಂಭವ ಕಂಡುಬಂದಿದ್ದರಿಂದ ಅವರನ ಚಟುವಟಿಕೆಯ ನಿಯಂತ್ರಣಕ್ಕಾಗಿ ಸದರಿಯವನ ಮೇಲೆ ಮುಂಜಾಗ್ರತಾ ಕ್ರಮ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 19/2016 ಕಲಂ: 107 ಸಿ.ಆರ್.ಪಿ.ಸಿ.
ಚುನಾವಣಾ ಆಯೋಗ ತಾಲೂಕಾ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು ಈಗ ಚುನಾವಣಾ ನೀತಿ ಸಂಹಿತೆಯು ಜಿಲ್ಲೆಯಲ್ಲಿ ಮತ್ತು ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈಗಾಗಲೇ ಗ್ರಾಮಗಳಲ್ಲಿ ಸ್ಥಳಿಯ ಮುಖಂಡರುಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಮತ್ತು ತಾಲೂಕಾ ಮತ್ತು ಜಿಲ್ಲಾ ಪಂಚಾಯತ ಚುನಾವಣೆಗೆ ಸಾರ್ವಜನಿಕರಲ್ಲಿ ಮತಯಾಚಿಸುತ್ತಿದ್ದು, ಅಲ್ಲದೆ ಗ್ರಾಮಗಳ ಓಣಿಗಳಲ್ಲಿ ಮತಯಾಚನೆಯ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖ್ಯಗಣ್ಯರು, ಮುಖಂಡರು ಸದರ  ಚುನಾವಣೆಯ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಮತ ಕೇಳುವುದಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಕೊಪ್ಪಳ ಗ್ರಾಮೀಣ ಠಾಣಾ ಸರಹದ್ದಿ ಎಂ.ಓಬಿ ಆಸಾಮಿಯಾದ ರವಿ ತಂದೆ ಕನಕಪ್ಪ ಜೀರ್. ವಯಾ: 22 ವರ್ಷ, ಜಾ: ಹೂಗಾರ, ಉ. ಕೂಲಿಕೆಲಸ ಸಾ. ಗಿಣಿಗೇರಿ. ಇವನು ತಮ್ಮ ಚಟುವಟಿಕೆಯನ್ನು ಮುಂದುವರೆಸಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಗಳ ಓಣಿಗಳಲ್ಲಿ ಬೇರೆ ಬೇರೆ ಅಭ್ಯರ್ಥಿಗಳಲ್ಲಿ ವೈಮನಸ್ಸನ್ನು ಉಂಟು ಮಾಡಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಗ್ರಾಮಗಳಲ್ಲಿ ಶಾಂತಿ ಕದಡಿ ಅಶಾಂತತೆ ನೆಲೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಮಾಡುವ ಸಂಭವ ಕಂಡುಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 19/2016 ಕಲಂ: 107 ಸಿ.ಆರ್.ಪಿ.ಸಿ.
ಸದ್ಯ ಜಿಲ್ಲಾ ಪಂಚಾಯತ ಮತ್ತು ತಾಲುಕ ಪಂಚಾಯತ ಚುನಾವಣೆ ಇರುವುದರಿಂದ ಹನಮಪ್ಪ ತಂ/ ಉಡಚಪ್ಪ ಹುಲಿಹೈದರ ವಯಾ 50, ಜಾ. ನಾಯಕ ಉ. ಒಕ್ಕಲುತನ ಸಾ. ಹೊಸ ಶಿವಪೂರ ಇತನು ಮುನಿರಾಬಾದ ಠಾಣೆಗೆ ರೌಡಿಶೀಟುದಾರರು ಇದ್ದು, ಚುನಾವಣೆ ವೇಳೆಯಲ್ಲಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸದರಿ ಪ್ರತಿವಾದಿದಾರರಿಂದ ಮುಚ್ಚಳಿಕೆ ಪತ್ರ ಪಡೆದುಕೊಳ್ಳುವಂತೆ ಮುಂಜಾಗ್ರತ ಕ್ರಮ ಜರುಗಿಸಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 30/2016 ಕಲಂ: 279, 337 ಐ.ಪಿ.ಸಿ.
ದಿನಾಂಕ. 28-01-2016 ರಂದು 12-30 ಪಿ.ಎಂ.ಕ್ಕೆ ಫಿರ್ಯಾದಿದಾರ ಅಳಿಯ ಜಿ. ನರಸಿಂಹಲು ಈತನು ಮೋ.ಸೈ. ನಂ. ಕೆ.ಎ.35/ಇ.ಬಿ.5844 ಚಲಾಯಿಸಿಕೊಂಡು ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ರಸ್ತೆಯ ಮೇಲೆ ಮೂನ ಲೈಟ ಡಾಬಾದ ಹತ್ತಿರ ಹೊಸಪೇಟೆ ಕಡೆಗೆ ಹೋಗುತ್ತಿರುವಾಗ ಕಾರ ನಂ. ಕೆ.ಎ.50/ಎನ್.8785 ನೇದ್ದರ ಚಾಲಕನು ಕಾರನ್ನು ಅತಿವೆಗವಾಗಿ ನಿಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಿ. ನರಸಿಂಗಲು ಇವರ ಮೋ.ಸೈ.ಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಜಿ. ನರಸಿಂಹಲು ಇವರಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದಿರಿಂದ ಜಿ. ನರಸಿಂಹಲು ಇವರಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
6) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 08/2016 ಕಲಂ: 107 ಸಿ.ಆರ್.ಪಿ.ಸಿ.


ದಿನಾಂಕ: 28-01-2016 ರಂದು ಸಾಯಂಕಾಲ 6-00 ಗಂಟೆಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಪೆಟ್ರೋಲಿಂಗ್ ಕುರಿತು ಹನಕುಂಟಿ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮದಲ್ಲಿ ತಿರುಗಾಡಿ ಸೂಕ್ಷ್ಮವಾಗಿ ಜನರನ್ನು ಮತ್ತು ಪೊಲೀಸ್ ಭಾತ್ಮೀದಾರರನ್ನು ಭೇಟಿ ಮಾಡಿ ವಿಚಾರಿಸಲಾಗಿ ತಿಳಿದು ಬಂದಿದ್ದೇನೆಂದರೆ, ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ನಾದ ಪ್ರಭುಗೌಡ ತಂದಿ ನೀಲನಗೌಡ ಪಾಟೀಲ್ ವಯ: 42 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಹನಕುಂಟಿ ಇವರು ಗ್ರಾಮದಲ್ಲಿನ ಮುಗ್ದ ಜನರಿಗೆ ಸಣ್ಣ ಪುಟ್ಟ ಜಗಳಗಳಲ್ಲಿ ಪ್ರಚೋದನೆ ಮಾಡಿ ಸಣ್ಣ ಜಗಳವನ್ನೆ ದೊಡ್ಡದು ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಸ್ವಭಾವದವರಾಗಿರುತ್ತಾರೆ. ಸದ್ಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಜರುಗಲಿದ್ದು ಚುನಾವಣೆಯ ವೇಳೆ ಸದರಿಯವರು ತಮ್ಮ ಪಕ್ಷದ ಜನರಿಗೆ ಓಟು ಹಾಕುವಂತೆ ಹೆದರಿಸಿ, ಬೆದರಿಸುವ ಸಂಭಂವ ಕಂಡು ಬಂದಿರುತ್ತದೆ. ಅಲ್ಲದೇ ಸದರಿಯವರು ಚುನಾವಣೆಯ ವೇಳೆ ಸಣ್ಣ ಪುಟ್ಟ ಜಗಳಗಳಿಗೆ ವ್ಯತಿರೀಕ್ತವಾಗಿ ನಡೆದುಕೊಂಡು ಜನರಿಗೆ ಪ್ರಚೋದನೆ ನೀಡಿ ಸಣ್ಣ ಜಗಳವನ್ನೆ ದೊಡ್ಡದು ಮಾಡಿ ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುವ ಸಂಭವ ಕಂಡು ಬಂದಿದ್ದು, ಅಲ್ಲದೇ ಸಾರ್ವಜನಿಕರಿಗೆ ಹೆದರಿಸಿ ಬೆದರಿಸಿ ಚುನಾವಣೆಯಲ್ಲಿ ಒಂದು ಪಕ್ಷದ ಪರ ನಿಂತು ಇನ್ನೂಂದು ಪಕ್ಷಕ್ಕೆ ವಿರೋಧವಾಗಿ ಜನರಲ್ಲಿ ತಪ್ಪು ಮಾಹಿತಿ ನೀಡಿ ಜನರಲ್ಲಿ ಪಕ್ಷಗಳ ನಡುವೆ ವೈಮನಸ್ಸು ಹುಟ್ಟಿಸಿ ಎರಡು ಪಕ್ಷಗಳ ನಡುವೆ ಜಗಳ ಹೆಚ್ಚಿಸಿ ಸಾರ್ವಜನಿಕರಲ್ಲಿ ಎರಡು ಗುಂಪುಗಳಾಗಿ ಮಾರ್ಪಡಿಸಿ ಗ್ರಾಮಗಳಲ್ಲಿ ಶಾಂತಿ ಕದಡಿ ಅಶಾಂತತೆ ನೆಲಸಿ, ಸಾರ್ವಜನಿಕರ ಆಸ್ತಿಪಾಸ್ತಿಯ ನಷ್ಠ ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಕಂಡು ಬಂದಿರುತ್ತದೆ. ಇವರಿಂದ ಮುಂದಾಗುವ ಅನಾಹುತ ಹಾಗೂ ಶಾಂತತೆಗೆ ಭಂಗ ಉಂಟಾಗದಂತೆ ಶಾಂತಿಯುತವಾಗಿ ಮತದಾನ ನಡೆಯುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008