Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, April 30, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 126/2016 ಕಲಂ: 87 Karnataka Police Act.
ದಿನಾಂಕ 29-04-2016 ರಂದು ರಾತ್ರಿ 10-30 ಗಂಟೆಗೆ ಶ್ರೀ. ರಾಮಪ್ಪ ಜಳಗೇರಿ ಪಿ.ಎಸ್.ಐ ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕ್ಯಾದಿಗುಂಪಾ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-108, 63 ಪಿ.ಸಿ-116,117, 393 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 11 ಜನ ಆರೋಪಿತರನ್ನು ಹಾಗೂ ಇಸ್ಪೆಟ್ ಜೂಜಾಟದ ಒಟ್ಟು ಹಣ 10300-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ 7 ಮೋಬೈಲ್ ಪೋನ್ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 101/2016 ಕಲಂ: 279, 304(ಎ)  ಐ.ಪಿ.ಸಿ:.

ದಿನಾಂಕ 29-04-2016 ರಂದು ರಾತ್ರಿ 8-35 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ಎಮ್.ಎಲ್ .ಸಿ ಮಾಹಿತಿ ಬಂದು ಕೂಡಲೆ ನಾನು ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಂಗಾವತಿ ಆಸ್ಪತ್ರೆಯಲ್ಲಿ ಇದ್ದ ಮೃತನ ಹೆಂಡತಿ ಶ್ರೀಮತಿ ಜೋತಿ ಗಂಡ ಸೋಮನಾಥ ತಳವಾರ ವಯಾ-23 ವರ್ಷ ಜಾ. ನಾಯಕ  -ಕೂಲಿ ಕೆಲಸ ಸಾ. ತೊಂಡಿಹಾಳ ತಾ. ಗಂಗಾವತಿ ರವರಿಗೆ ವಿಚಾರಿಸಿದ್ದು ಸದರಿಯವರು ಒಂದು ಲಿಖಿತ ದೂರನ್ನು ಬರೆಯಿಸಿಕೊಟ್ಟಿದ್ದು ಸದರಿ ದೂರಿನ ಸಾರಾಂಶದಲ್ಲಿ ನನ್ನ ತವರು ಮನೆ ಕಾರಟಗಿಯ ಬಸವೇಶ್ವರ ನಗರ ಇದ್ದು ಇಗ್ಗೆ 4 ವರ್ಷಗಳ ಹಿಂದೆ ತೊಂಡಿಹಾಳ ಗ್ರಾಮದ ಸೋಮನಾಥ ತಂದಿ ಗಾಳೆಪ್ಪ ತಳವಾರ ವಯಾ-25 ವರ್ಷ ಈತನೊಂದಿಗೆ ನಮ್ಮ ತಂದೆ ತಾಯಿಗಳು ಮದುವೆ ಮಾಡಿದ್ದು ನನಗೆ ಒಂದು ಹೆಣ್ಣು ಮಗು ಇರುತ್ತದೆ ಸದ್ಯ ನಾನು ನನ್ನ ಗಂಡ ಸೊಮನಾಥ ನಮ್ಮ ತಾಯಿ ಗಂಗಮ್ಮ ಮೂರು ಜನರು ಬೂದಗುಂಪಾ ಗ್ರಾಮದ ಮಲ್ಲಪ್ಪ ಇವರ ಇಟ್ಟಂಗಿ ಬಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ:-29-04-2016 ರಂದು ನಮ್ಮ ತಮ್ಮನ ಮುತ್ತಣ್ಣ ಈತನ ಮದುವೆ ಇದ್ದುದರಿಂದ ನಾನು ನನ್ನ ಗಂಡ ಮತ್ತು ನಮ್ಮ ಅತ್ತಿ ಮೂರು ಜನರು ಕಾರಟಗಿ ಬಸವೇಶ್ವರ ನಗರಕ್ಕೆ ಹೋಗಿದ್ದೆವು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ನನ್ನ ಗಂಡ ಸೋಮನಾಥ ಈತನು ಮದುವೆ ಮುಗಿಸಿಕೊಂಡು ನಮಗೆ ನಾನು ಇಟ್ಟಂಗಿ ಬಟ್ಟೆ ಕಡೆಗೆ ಹೋಗುತ್ತೇನೆ ನೀವು ಮೇಲೆ ಬನ್ನಿರಿ ಅಂತಾ ಹೇಳಿ ನಮ್ಮ ತಮ್ಮನ ಬೀಗರು ತಂದಿದ್ದ ಟ್ರ್ಯಾಕ್ಟರ್ ನಂ ಕೆಎ-37 ಟಿ.ಬಿ 2771 ನೆದ್ದರಲ್ಲಿ ತನಗೆ ಪರಿಚಯವಿದ್ದ ಟ್ರ್ಯಾಕ್ಟರ್ ಚಾಲಕನ ಪಕ್ಕದಲ್ಲಿ ಇಂಜನ್ ಮೇಲೆ ಕುಳಿತುಕೊಂಡಿದ್ದನ್ನು ಸದರಿ ಟ್ರ್ಯಾಕ್ಟರಿಯ ಚಾಲಕ ಹುಸೇನಪ್ಪ ತಂದಿ ಹನುಮಂತಪ್ಪ ಈತನು ಸದರಿ ಟ್ರ್ಯಾಕ್ಟರ್ ಇಂಜಿನ್ ನ್ನ ಟ್ರೇಲರ್ ಸಮೇತ ಬಸವೇಶ್ವರ ನಗರದ ಓಣಿ ರಸ್ತೆಯಲ್ಲಿ ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಗುರಪ್ಪ ಇವರ ಕಾರದ ಪುಡಿ ಗಿರಣಿಯ ಮುಂದೆ ಇರುವ ರೋಡ್ ಹಂಪ್ಸ್ ನ್ನು ಗಮನಿಸದೇ ಚಾಲಕನು ನಿರ್ಲಕ್ಷತನ ದಿಂದ ರೋಡ್ ಹಂಪ್ಸನ್ನು ಜಂಪ ಮಾಡಿಸಿದ್ದರಿಂದ ಟ್ರ್ಯಾಕ್ಟರ್ ಜಂಪ ಆಗಿ ಡ್ರೈವರ್ ಪಕ್ಕದಲ್ಲಿ ಕುಳಿತುಕೊಂಡಿದ್ದ ನನ್ನ ಗಂಡನು ಪುಟಿದು ರಸ್ತೆಯ ಮೇಲೆ ಬಿದ್ದಾಗ ಟ್ರ್ಯಾಕ್ಟರ್ ಚಾಲಕನು ರಸ್ತೆಯ ಮೇಲೆ ಬಿದ್ದಿದ್ದ ನನ್ನ ಗಂಡನನ್ನು ಗಮನಿಸದೇ ನಿರ್ಲಕ್ಷತನದಿಂದ ಟ್ರ್ಯಾಕ್ಟರ್ ನನ್ನ ಗಂಡನ ಮೇಲೆ ಆಯಿಸಿಕೊಂಡು ಹೋಗಿದ್ದರಿಂದ ನನ್ನ ಗಂಡ ಎಡಗಾಲ ತೊಡೆಗೆ ಹೊಟ್ಟೆಯ ಮೇಲೆ ಇಂಜನ್ ಗಾಲಿ ಹತ್ತಿ ಹೊಗಿದ್ದರಿಂದ ನನ್ನ ಗಂಡನಿಗೆ ತಿವ್ರವಾದ ಗಾಯಗಳು ಒಳಪೆಟ್ಟಾಗ್ಗಿದ್ದರಿಂದ ಇದನ್ನು ನೋಡಿದ ನಾಗರಾಜ, ಶರಣಪ್ಪ, ಮಂಜುನಾಥ, ನಮ್ಮ ಅತ್ತೆ ಗಂಗಮ್ಮ ಎಲ್ಲರೂ ಸೇರಿ ನನ್ನ ಗಂಡನನ್ನು ಚಿಕಿತ್ಸೆ ಕುರಿತು ಕಾರಟಗಿ ಆಸ್ಪತ್ರೆಗೆ ತಂದು ನನ್ನ ಗಂಡನ ಸ್ಥಿದಿ ಚಿಂತಾ ಜನಕವಿದ್ದಿದ್ದರಿಂದ ಶಿಘ್ರವಾಗಿ ಚಿಕಿತ್ಸೆ ಕೊಡಿಸುವ ಸಲುವಾಗಿ ಗಂಗಾವತಿ ಸರಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತೇವೆ ನನ್ನ ಗಂಡನು ಚಿಕಿತ್ಸೆ ಪಡೆಯುತ್ತಿದ್ದಾಗ ಟ್ರ್ಯಾಕ್ಟರ್ ಅಪಘಾತದಲ್ಲಿ ಆದ ತಿವ್ರವಾದ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ಸಾಯಂಕಾಲ 6-35 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    

0 comments:

 
Will Smith Visitors
Since 01/02/2008