Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 30, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 72/2016 ಕಲಂ: 87 Karnatka Police Act.
ದಿನಾಂಕ: 29-07-2016 ರಂದು ಸಾಯಂಕಾಲ 5-05 ಗಂಟೆಯ ಸುಮಾರಿಗೆ ಸಂಗನಾಳ ಗ್ರಾಮದಲ್ಲಿ ಬರುವ ಹನುಮಂತ ದೇವರ ಗುಡಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 4 ಜನರು 1). ವಿರೇಶ ತಂದೆ ರಾಮಪ್ಪ ಕೋಳೂರ ವಯ: 29 ವರ್ಷ ಜಾತಿ: ಕುರುಬರ ಉ: ಗೌಂಡಿ ಕೆಲಸ ಸಾ: ಸಂಗನಾಳ 2] ಈಶಪ್ಪ ತಂದೆ ಹೊನ್ನಪ್ಪ ಸಿದ್ದರೆಡ್ಡಿ ವಯ: 38 ವರ್ಷ ಜಾತಿ : ರಡ್ಡಿ ಉ: ಒಕ್ಕಲುತನ ಸಾ : ಸಂಗನಾಳ 3] ಶರಣಪ್ಪ ತಂದೆ ಕಳಕನಗೌಡ ಅಪ್ಪನಗೌಡ್ರ ವಯ: 52 ವರ್ಷ ಜಾತಿ : ರಡ್ಡಿ ಉ: ಒಕ್ಕಲುತನ  ಸಾ: ಸಂಗನಾಳ 4] ತೋಟನಗೌಡ ತಂದೆ ಮಲ್ಲನಗೌಡ ಮಾಲಿಪಾಟೀಲ ವಯ: 45 ವರ್ಷ ಜಾತಿ : ರಡ್ಡಿ ಉ: ಒಕ್ಕಲುತನ ಸಾ:ಸಂಗನಾಳ ಸಿಕ್ಕಿ ಬಿದ್ದಿದ್ದು 6 ಜನ ಆರೋಪಿತರು ಓಡಿ ಹೋಗಿದ್ದು  ಇರುತ್ತದೆ. 5] ಶರಣಪ್ಪ ತಂದೆ ವಿರುಪಾಕ್ಷಪ್ಪ ಗರಡಿ 6] ಸಿದ್ದಪ್ಪ ತಂದೆ ಶರಣಪ್ಪ ಅಡವಳ್ಳಿ 7] ಮಂಜುನಾಥ ತಂದೆ ದೇವಪ್ಪ ಸಿದ್ನೆಕೊಪ್ಪ 8] ಈರಪ್ಪ ತಂದೆ ಶರಣಪ್ಪ ವೀರಾಪೂರ 9] ಬೀಮಪ್ಪ @ ಬೀಮಶಿ ತಂದೆ ಶಿವಪ್ಪ ಜೋಗಿನ 10] ಅಂದಪ್ಪ ಅಡವಳ್ಳಿ ಸಾ: ಎಲ್ಲರೂ ಸಂಗನಾಳ ಇರುತ್ತಾರೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1,060=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಸಿಮೇಂಟ ಚೀಲ ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 73/2016 ಕಲಂ: 87 Karnatka Police Act.
ದಿನಾಂಕ: 29-07-2016 ರಂದು ರಾತ್ರಿ 7-55 ಗಂಟೆಯ ಸುಮಾರಿಗೆ ಹಿರೇಮ್ಯಾಗೇರಿ ಗ್ರಾಮದಲ್ಲಿ ಬರುವ ಪಾರ್ವತಿ-ಪರಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿಯ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ರಾತ್ರಿ 8-00 ಗಂಟೆಗೆ ದಾಳಿ ಮಾಡಿ ಹಿಡಿದಿದ್ದು 9 ಜನರು ಸಿಕ್ಕಿ ಬಿದ್ದಿದ್ದು 1). ಮಂಜುನಾಥ ತಂದೆ ಶರಣಪ್ಪ ಅಗ್ನಿ ವಯ: 32 ವರ್ಷ ಜಾತಿ :ಬಣಜಿಗ ಉ: ಕೂಲಿ ಕೆಲಸ 2). ಜಗದೀಶ ತಂದೆ ಶಿವಪುತ್ರಪ್ಪ ಜಮಖಂಡಿ ವಯ : 26 ವರ್ಷ ಜಾ ಲಿಂಗಾಯತ  3). ವಿಜಯಕುಮಾರ ತಂದೆ ತಿಪ್ಪಣ್ಣ ಚಲವಾದಿ ವಯ-38 ವರ್ಷ ಜಾತಿ- ಚಲವಾದಿ 4).ಅಂದಾನಪ್ಪ ತಂದೆ ಗುರಪ್ಪ ರಾಮಶೆಟ್ಟಿ ವಯ- 35 ವರ್ಷ ಜಾತಿ- ಪಂಚಮಸಾಲಿ 5). ಮುತ್ತಣ್ಣ ತಂದೆ ಬಸಪ್ಪ ಹೊಟ್ಟಿನ್ ವಯ- 35 ವರ್ಷ ಜಾತಿ- ಪಂಚಮಸಾಲಿ 6). ಬಸವರಾಜ ತಂದೆ ಕಲ್ಲಪ್ಪ ಗುರಿಕಾರ ವಯ- 48 ವರ್ಷ ಜಾತಿ- ಲಿಂಗಾಯತ 7). ಗುರಪ್ಪ ತಂದೆ ಮಲ್ಲಪ್ಪ ಯಲಬುರ್ಗಿ ವಯ- 32 ವರ್ಷ ಜಾತಿ- ಪಂಚಮಸಾಲಿ  8). ಮಾಹಾಂತೇಶ ತಂದೆ ಶಂಕ್ರಪ್ಪ ಗುರಿಕಾರ ವ-33 ವರ್ಷ ಜಾ-ಪಂಚಮಸಾಲಿ 9).ರಾಯಪ್ಪ ತಂದೆ ರಾಮಣ್ಣ ಮಾಡ್ಲಗೇರಿ ವ-48 ವರ್ಷ ಜಾ-ಲಿಂಗಾಯತ ಉ-ಒಕ್ಕಲುತನ ಸಾ- ಎಲ್ಲರೂ ಹಿರೇಮ್ಯಾಗೇರಿ 5 ಜನ ಆರೋಪಿತರು ಓಡಿ ಹೋಗಿದ್ದು  10] ಕಲ್ಲಪ್ಪ ತಂದೆ ಲಕ್ಷ್ಮಪ್ಪ ಗುರಿಕಾರ 11] ಕಲ್ಲಪ್ಪ ತಂದೆ ಗೇನಪ್ಪ ಗುರಿಕಾರ 12] ಶರಣಪ್ಪ ತಂದೆ ದೊಡ್ಡಪ್ಪ ಗುರಿಕಾರ 13] ಅಂದಪ್ಪ ತಂದೆ ಈರಪ್ಪ ಹೊಟ್ಟಿನ 14] ಅಶೋಕ ತಂದೆ ಶಂಕ್ರಪ್ಪ ದಿವಟರ ಸಾ: ಎಲ್ಲರೂ ಹಿರೇಮ್ಯಾಗೇರಿ ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,550=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಸಿಮೇಂಟ ಪ್ಲಾಸ್ಟೀಕ ಚೀಲ ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 83/2016 ಕಲಂ: 78(3) Karnatka Police Act.
ದಿನಾಂಕ: 29-07-2016 ರಂದು ರಾತ್ರಿ 8-25 ಗಂಟೆಯ ಸುಮಾರಿಗೆ ಆರೋಪಿ ಸಾಬಣ್ಣ ತಂದೆ ಅಲ್ಲಾಸಾಬ ನಧಾಪ್ ಸಾ: ಕವಲೂರು ಇತನು ಕವಲೂರು ಗ್ರಾಮದ ಸರಕಾರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಶ್ರೀ ರಾಜಕುಮಾರ ವಾಜಂತ್ರಿ ಪಿ.ಐ. ಡಿ.ಸಿ.ಐ.ಬಿ ಘಟಕ ಹಾಗೂ ತಮ್ಮ ಘಟಕದ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 6240=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ರಾತ್ರಿ 9-45 ಗಂಟೆಗೆ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಜರುಗಿಸುವ ಕುರಿತು ಒಂದು ವರದಿ ಮತ್ತು ಆರೋಪಿತನನ್ನು ಹಾಜರಪಡಿಸಿದ್ದು, ಈ ಬಗ್ಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 124/2016 ಕಲಂ: 457, 380 ಐ.ಪಿ.ಸಿ.
ದಿನಾಂಕ: 29-07-2016 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ ಅನೀಲ್ ತಂದೆ ಪಾರಸ್ ಮಲ್ ಛೋಪ್ರಾ ಸಾ: 1ನೇ ಕ್ರಾಸ್ ಬಿ.ಟಿ ಪಾಟೀಲ್ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂರೆ, ಫಿರ್ಯಾದಿದಾರರು ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿ ಡಿಜಿಟಲ್ ಪಾಯಿಂಟ್ ಎಂಬ ಎಲೆಕ್ಟ್ರಾನಿಕ್ಸ ಅಂಗಡಿಯನ್ನು ಹೊಂದಿದ್ದು. ದಿನಾಂಕ: 29-07-2016 ರಂದು ಬೆಳಿಗ್ಗೆ 2-30 ಗಂಟೆಯಿಂದ ಬೆಳಿಗ್ಗೆ 3-30 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರ ಡಿಜಿಟಲ್ ಪಾಯಿಂಟ್ ಅಂಗಡಿಯ ವೆಂಟಿಲೇಟರ್ ನ  ಕಬ್ಬಿಣದ ರಾಡ್ ಮುರಿದು ಅಂಗಡಿಯೊಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಗಳನ್ನು ಕಿತ್ತು ಅಂಗಡಿಯಲ್ಲಿದ್ದ 1] ಒಂದು ಸ್ಯಾಮ್ಸಂಗ್ ಮೇಟ್ರೋ 360 ಮೋಬೈಲ್ ಅಂಕಿರೂ: 3,320=00. 2] ಒಂದು ಸ್ಯಾಮ್ಸಂಗ್ ಗುರು 1205 ಮೋಬೈಲ್ ಅಂಕಿರೂ: 1,220=00. 3] ಒಂದು ಸ್ಯಾಮ್ಸಂಗ್ ಆನ್5 ಮೋಬೈಲ್ ಅಂಕಿ.ರೂ: 8,990=00. 4] ಐದು ಲೆನೆವೋ ಎ5000 ಮೋಬೈಲ್ ಅಂಕಿರೂ: 42,500=00. 6] ಒಂದು ಲೆನೆವೋ ಎ536 ಮೋಬೈಲ್ ಅಂ.ಕಿ.ರೂ: 6,249=00. 7] ಒಂದು ಲೆನೆವೋ ಪಿ1Turbo  ಮೋಬೈಲ್ ಅಂಕಿ.ರೂ: 17,300=00. 8] ಮೂರು ಲೆನೆವೋ ವೈಬ್ಸಿ ಮೋಬೈಲ್ಗಳು ಅಂ.ಕಿ.ರೂ: 19,500=00. 9] ಮೂರು ಲೆನೆವೋ ಎ1000 ಮೋಬೈಲ್ಗಳು ಅಂ.ಕಿ.ರೂ: 12,000=00. 10] ಎರಡು ಲೆನೆವೋ 319 ಮೋಬೈಲ್ಗಳು ಅಂ.ಕಿ.ರೂ: 8,652=00. 11] ಒಂದು ಲೆನೆವೋ ಕೆ3 ನೋಟ್ ಮೋಬೈಲ್ ಅಂ.ಕಿ.ರೂ: 9,300=00. 12] ಒಂದು ಜಿಯೋನಿ ಎಮ್5ಪ್ಲಸ್ ಮೋಬೈಲ್ ಅಂ.ಕಿ.ರೂ: 26,999=00. 13] ಒಂದು ಜಿಯೋನಿ ಪಿ3ಎಸ್ ಮೋಬೈಲ್ ಅಂ.ಕಿ.ರೂ: 5,765=00. 14] ನಾಲ್ಕು ಜಿಯೋನಿ ಪಿ5 ಎಲ್ ಮೋಬೈಲ್ಗಳು ಅಂ.ಕಿರೂ: 33,996=00. 15] ಮೂರು ಜಿಯೋನಿ ಎಫ್103 ಮೋಬೈಲ್ ಅಂ.ಕಿ.ರೂ: 35,997=00. 16] ಒಂದು ಜಿಯೋನಿ ಎಲ್700 ಮೋಬೈಲ್ ಅಂ.ಕಿ.ರೂ: 1,899=00. 17] ಒಂದು YU4711 ಮೋಬೈಲ್ ಅಂ.ಕಿ.ರೂ: 6,060=00. 18] ಒಂದು LYF FLAME 6 ಮೋಬೈಲ್ ಅಂ.ಕಿ.ರೂ: 3,000=00. 19] ಒಂದು LYF WIND 4  ಮೋಬೈಲ್ ಅಂ.ಕಿ.ರೂ: 6,800=00. 20] ಒಂದು ಒಪ್ಪೋ Neo7 ಮೋಬೈಲ್ ಅಂ.ಕಿ.ರೂ: 9,515=00. 21] ಒಂದು ಒಪ್ಪೋ A37 ಮೋಬೈಲ್ ಅಂ.ಕಿ.ರೂ: 11,421=00. 22] ಒಂದು ಒಪ್ಪೋ Neo5  ಮೋಬೈಲ್ ಅಂ.ಕಿ.ರೂ: 7,000=00. 23] ಒಂದು XOLO ಮೋಬೈಲ್ ಅಂಕಿರೂ: 5,500=00. 24] ಒಂದು ಸೋನಿ ಮೋಬೈಲ್ ಅಂಕಿರೂ: 18,990=00. 25] ಒಂದು ಇಂಟೆಕ್ಸ್ ಮೋಬೈಲ್ ಅಂಕಿರೂ: 7,500=00. ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 3,09,473=00 ಬೆಲೆಬಾಳುವುಗಳನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನಮ್ಮ ಅಂಗಡಿಯ ವೆಂಟಿಲೇಟರ್ ನ ಕಬ್ಬಿಣದ ರಾಡ್ ಮುರಿದು ಒಳ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಮೋಬೈಲ್ ಗಳನ್ನ ಪತ್ತೇ ಮಾಡಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಾಲು ಮಾಢಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 215/2016 ಕಲಂ: 498 (A), 323, 504, 506  R/W 149 IPC ಹಾಗೂ 3 & 4 D.P.Act.
ದಿನಾಂಕ:29-07-2016 ರಂದು ಮುಂಜಾನೆ 07.15 ಗಂಟೆಗೆ ಪಿರ್ಯಾದಿದಾರರಾದ ಶ್ರಿಮತಿ ಸರಸ್ವತಿ ಗಂಡ ರಾಮಣ್ಣ ಮನ್ನಾಪೂರ ವಯ :20 ವರ್ಷ ಉ : ಮನೆಗೆಲಸ ಸಾ :ಕಂದಕೂರ ತಾ : ಕುಷ್ಟಗಿ. ರವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ, ಫಿರ್ಯಾದಿದಾರಳಿಗೆ ದಿನಾಂಕ 27-08-2015 ರಂದು ಹಿರೇಅರಳಿಹಳ್ಳಿ ಗ್ರಾಮದ ರಾಮಣ್ಣ ಮನ್ನಾಪೂರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ 25,000/-ನಗದು ಹಣ, 2 ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ಕೊಟ್ಟಿರುತ್ತೇವೆ. 3-4 ತಿಂಗಳವರೆಗೆ ಗಂಡನೊಂದಿಗೆ ಸುಖ ಸಂಸಾರ ನಡೆಸಿಕೊಂಡು ನಂತರ ಫಿರ್ಯಾದಿ ಗಂಡ ಮತ್ತು ಅತ್ತೆ, ಗಂಡನ ಅಣ್ಣಂದಿರು ಮತ್ತು ಅವರ ತಂಗಿಯರು ದಿನಾಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವಾಚ್ಯವಾಗಿ ಬೈದಾಡುತ್ತಾ ಹೊಡಿಬಡಿ ಮಾಡುತ್ತಿದ್ದರು. ಮತ್ತು ನೀನು ನಿನ್ನ ತವರು ಮನೆಯಿಂದ ವರದಕ್ಷಿಣೆಯಾಗಿ 50,000/-ಗಳನ್ನು ಮತ್ತು 5 ತೊಲೆ ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ಪಿಡಿಸುತ್ತಿದ್ದರು. ಮತ್ತು ಈ ವಿಷಯವನ್ನು ಫಿರ್ಯಾದಿಯು ತನ್ನ ಅಣ್ಣ ಮತ್ತು ಆತನ ಸ್ನೇಹಿತ ಶರಣಯ್ಯ ಇವರಿಗೆ ತಿಳಿಸಿದ್ದು ಅವರು ಸಹ ಬುದ್ದಿ ಹೇಳಿ ಜಗಳ ಬಿಡಿಸಿದ್ದು ಅದೆ ದಿವಸ ಫಿರ್ಯಾದಿಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ. ದಿನಾಂಕ 10-07-2016 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ನಮ್ಮ ಮನೆಯ ಮುಂದೆ ಬಂದು ನನ್ನ ಗಂಡ ಲೇ ಸೂಳೆ ವರದಕ್ಷಿಣೆ ಹಣ ಮತ್ತು ಬಂಗಾರ ತರಬೇಕೆಂದು ಹೇಳಿದರೆ ನಿನ್ನ ತವರು ಮನೆಯಲ್ಲಿ ಕುಂತಿಯಾ ಅಂತಾ ಅವಾಚ್ಯವಾಗಿ ಬೈದಾಡುತ್ತಾ ನನಗೆ ಮೈ ಕೈಗೆ ಹೊಡಿಬಡಿ ಮಾಡಿದ್ದು, ಅವರ ಜೋತೆಗೆ ಬಂದಿದ್ದ ಇತರರು ನುಕಾಡಿ,ಎಳೆದಾಡಿ, ಹೊಡಿಬಡಿ ಮಾಡಿ ನಿನ್ನನ್ನು ಇವತ್ತು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದರು. ಅದೆ ವೇಳೆಗೆ ರಾಮಣ್ಣ ತಂದಿ ಹನಮಂತಪ್ಪ ಗೋಪಾಳಿ, ನನ್ನ ತಾಯಿ ಶಂಕ್ರವ್ವ ಗಂಡ ಹನಮಂತಪ್ಪ ಕುಷ್ಟಗಿ, ಮತ್ತು ಚಿಕ್ಕಪ್ಪನಾದ ದೇವಪ್ಪ ತಂದಿ ಮರಿಯಪ್ಪ ಕುಷ್ಟಗಿ, ಇವರು ಬಂದು ಜಗಳ ಬಿಡಿಸಿದರು. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008