Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 26, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 159/2016 ಕಲಂ: 87 Karnataka Police Act:.
ದಿನಾಂಕ: 25-09-2016 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕಿನ್ನಾಳ ರಸ್ತೆಯ ಪ್ರಮೋದ ಕಲ್ಯಾಣ ಮಂಟಪದ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  09 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಶ್ರೀ ಸತೀಶ.ಎಸ್.ಪಾಟೀಲ್ ಪಿ.ಐ ಕೊಪ್ಪಳ ನಗರ ಠಾಣೆ ರವರು  ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ  13730=00  ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾಗವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 282/2016 ಕಲಂ 279, 337, 338 ಐಪಿಸಿ:.
ದಿನಾಂಕ. 25-09-2016 ರಂದು 4-00 ಪಿ.ಎಂ.ಕ್ಕೆ ಫಿರ್ಯಾದಿ ಯಮನಪ್ಪ ತಂ/ ಹನಮಂತ ಮೂಗನೂರ ವಯಾ 31 ವರ್ಷ, ಜಾ. ಕುರುಬರು ಉ. ಕಟ್ಟಿಗೆ ವ್ಯಾಪಾರ ಸಾ. ಬಸಾಪಟ್ಟಣ ತಾ. ಗಂಗಾವತಿರವರು ತಮ್ಮ ಮಗ ವಿರೇಶ ವಯಾ 10 ವರ್ಷ ಇಬ್ಬರು ಚಿಕ್ಕಬೆಣಕಲ್ ದಿಂದ ಹಿರೇ ಬೆಣಕಲ್ ಗೆ ನಡೆದುಕೊಂಡು ಬರುತ್ತಿರುವಾಗ ಚಿಕ್ಕ ಬೆಣಕಲ್ ಹಿರೇ ಬೆಣಕಲ್ ರಸ್ತೆಯ ನಡುವೆ ಗಾಳೆಮ್ಮ ಗುಡಿ ಹತ್ತಿರ ಹಿಂದಿನಿಂದ ಮೋಟಾರ ಸೈಕಲ್ ನಂ. ಕೆ.ಎ.37/ವೈ.8318 ನೇದ್ದರ ಚಾಲಕ ವಿರೇಶ ತಂ/ ಪಕೀರಪ್ಪ ಗಿಣಿಗೇರಾ ಈತನು ತನ್ನ ಹೆಂಡತಿ ಉಮಾದೇವಿ ಇವರನ್ನು ಹಿಂದೆ ಕೂಡಿಸಿಕೊಂಡು ಮೋಟಾರ ಸೈಕಲನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಅಡ್ಡಾದಿಡ್ಡ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ಫಿರ್ಯಾದಿ ಮಗ ವಿರೇಶನಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿ ಮೋಟಾರ ಸೈಕಲ್ ನಿಯಂತ್ರಣ ಮಾಡಲು ಆಗದೆ ಮೋಟಾರ ಸೈಕಲ್ ಸಮೇತ ಬಿದ್ದಿದ್ದು ಇದರಿಂದ ಫಿರ್ಯಾದಿ ಮಗನಿಗೆ ಮೋಟಾರ ಸೈಕಲ ಚಾಲಕ ವಿರೇಶನಿಗೆ ಗಾಯಗಳಾಗಿದ್ದು ವಿರೇಶನ ಹೆಂಡತಿ ಉಮಾದೇವಿ ಇವರಿಗೆ ಎಡಗಡೆ ತಲೆಗೆ ರಕ್ತಗಾಯವಾಗಿದ್ದು ಎಡಕಿವಿಯಿಂದ ಸ್ವಲ್ಪ ರಕ್ತ ಬಂದು ಮೂರ್ಚೆ ಹೋಗಿರುತ್ತಾಳೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 251/2016 ಕಲಂ 279,337,338,427 .ಪಿ.ಸಿ..

ದಿನಾಂಕ:25-09-2016 ಮುಂಜಾನೆ 09-00 ಗಂಟೆಯ ಸುಮಾರಿಗೆ ಫಿರ್ಯಾಧಿಯಾದ ನಾನು ಭೀಮಪ್ಪ ತಂದೆ ಹನುಮಪ್ಪ ಬಳೂಟಗಿ ಸಾ:ಗೂಡೂರ ನಮ್ಮ ಅಳಿಯನಾದ ಪ್ರಕಾಶ ತಂದೆ ರಾಮಣ್ಣ ಹೊಸಮನಿ ಇಬ್ಬರೂ ಕೂಡಿ ನಮ್ಮ ಅಳಿಯನ ಡಿಸ್ಕವರಿ ಮೋಟಾರ ಸೈಕಲ್ ನಂ: ಕೆ.ಎ-29 ವ್ಹಿ-7527 ನೇದ್ದನ್ನು ತೆಗೆದುಕೊಂಡು ನಮ್ಮ ವಯಕ್ತಿಕ ಕೆಲಸದ ನಿಮಿತ್ಯ ಕುಷ್ಟಗಿಗೆ ಹೊರಟು ಕುಷ್ಟಗಿಗೆ ಬಂದು ಕುಷ್ಟಗಿಯಲ್ಲಿ ಮದ್ಯಾಹ್ನದವರೆಗೆ ನಮ್ಮ ಕೆಲಸವನ್ನು ಮುಗಿಸಿಕೊಂಡು ವಾಪಸ ಗೂಡೂರಗೆ ಹೋಗಲು ಕುಷ್ಟಗಿ-ಹನಮಸಾಗರ ರಸ್ತೆಯ ಮೇಲೆ ಹೋಗುತ್ತಿರುವಾಗ ಮದ್ಯಾಹ್ನ 04-00 ಗಂಟೆಯ ಸುಮಾರಿಗೆ ತಳವಗೇರಾ ಸೀಮಾದಲ್ಲಿ ತಳವಗೇರಾ ಇನ್ನೂ 1 ಕಿ.ಮೀ ದೂರ ಇರುವಾಗ್ಗೆ ನಮ್ಮ ಮೋಟಾರ ಸೈಕಲನ್ನು ನಡೆಯಿಸುತ್ತಿದ್ದ ನಮ್ಮ ಅಳಿಯ ಪ್ರಕಾಶ ಇತನು ಮೋಟಾರ ಸೈಕಲನ್ನ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಮುಂದೆ ಎಡಗಡೆ ರಸ್ತೆಯ ಮೇಲೆ ಹೋಗುತ್ತಿದ್ದ ಒಂದು ಎಮ್ಮಿಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದರಿಂದ ನಾವು ಮೋಟಾರ ಸಮೇತ ಎಡಗಡೆ ಬಿದ್ದಿದ್ದು ಗಾಯ ಮಾಡಿಕೊಂಡಿದ್ದು ಎಮ್ಮಿಗೆ ಬಲಗಾಲು ಹಿಂಗಾಲು ಮುರಿದಂತಾಗಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008