Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, October 25, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 109/2016 ಕಲಂ: 279, 304(ಎ) ಐ.ಪಿ.ಸಿ:
ದಿನಾಂಕ: 24-10-2016 ರಂದು ಮುಂಜಾನೆ 0600 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂ. ಕೆಎ-37/ಎಸ್-8133 ನೇದ್ದನ್ನು  ಯಲಬುರ್ಗಾ-ಕೊಪ್ಪಳ ರಸ್ತೆ ಮೇಲೆ ಯಲಬುರ್ಗಾ ಸೀಮಾದಲ್ಲಿ ಬರುವ ರೇವಣಪ್ಪ ಹಿರೇಕುರಬರ ಇವರ ಹೊಲದ ಹತ್ತಿರ ಸದರಿ ಮೋಟಾರ ಸೈಕಲನ್ನು ಯಲಬುರ್ಗಾ ಕಡೆಯಿಂದ ಕೊಪ್ಪಳ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಮೋಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಸದ್ರಿಯವನ ತಲೆಯ ಮುಂದಿನ ಬಲ ಭಾಗಕ್ಕೆ ಭಾರಿ ಸ್ವರೂಪದ ರಕ್ತ ಗಾಯವಾಗಿ ಮೂಗಿನಿಂದ ರಕ್ತ ಬಂದು ನಾಲಿಗೆ ಕಚ್ಚಿಕೊಂಡಿದ್ದರಿಂದ ಬಾಯಿಯಿಂದ ಕೂಡಾ ರಕ್ತ ಬಂದಿದ್ದು ಇರುತ್ತದೆನಂತರ ಸದ್ರಿಯವನು ಮುಂಜಾನೆ 0620 ಗಂಟೆಯ ಸುಮಾರಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 272/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 24-10-2016 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಕೊರಡಕೇರಾ ಗ್ರಾಮದ ಬಾಲಪ್ಪ ಪೂಜಾರ ರವರು ತೀರಿಕೊಂಡಿರುತ್ತಾರೆ. ಇಂದು ಮದ್ಯಾಹ್ನ ಅಂತ್ಯಾ ಸಂಸ್ಕಾರ ಇದೆ. ನೀವು ಬರಬೇಕು ಹಾಗೂ ಸಂಬಂದಿಕರಿಗೆ ವಿಷಯ ತಿಳಿಸಿ ಅಂತಾ ಮಾಹಿತಿ ತಿಳಿಸಿದ್ದು, ಸದರಿ ಮಾಹಿತಿಯ ಪ್ರಕಾರ ನಾನು ನಮ್ಮ ಸಂಬಂದಿಕರು 13 ಜನ ಕೂಡಿ ನಮ್ಮೂರಿನ ಟಾಟಾ ಎ.ಸಿ. ನಂ. ಕೆ.ಎ-37-ಎ-4827 ನೇದ್ದರಲ್ಲಿ ಮುಂಜಾನೆ 10-30 ಗಂಟೆಯ ಸುಮಾರಿಗೆ ಹತ್ತಿಕೊಂಡು, ಕೊರಡಕೇರಾ ಗ್ರಾಮಕ್ಕೆ ಹೋಗಲು ಹೊರಟಿದ್ದು ಇರುತ್ತದೆ ಅದರ ಚಾಲಕನಾದ ದೇವಪ್ಪ ಕೊನಸಾಗರ ಈತನು. ಟಾಟಾ ಎ.ಸಿ ವಾಹನವನ್ನು ನಡೆಸುತ್ತಿದ್ದನು. ನಂತರ ಮುಂಜಾನೆ 11-00 ಗಂಟೆಯ ಸುಮಾರಿಗೆ ಬಂಡಿ ಕ್ರಾಸದಿಂದ ಕೊರಡಕೇರಾ ಕಡೆಗೆ ಗಜೇಂದ್ರಗಡ-ಕುಷ್ಟಗಿ ರಸ್ತೆಯ ಮೇಲೆ ಪ್ರಲ್ಹಾದರಾವ್ ಬ್ರಾಹ್ಮಣರ ಹೊಲದ ಹತ್ತಿರ ನಮ್ಮ ಟಾಟಾ ವಾಹನದ ಚಾಲಕನಾದ ದೇವಪ್ಪ ಕೊನಸಾಗರ ಈತನು ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗುತ್ತಾ ಒಮ್ಮಿದೊಮ್ಮಲೇ ಬ್ರೇಕ್ ಮಾಡಿ ನಿಯಂತ್ರಣ ತಪ್ಪಿ ಓಳಮಗ್ಗಲಾಗಿ ರಸ್ತೆಯ ಎಡಕ್ಕೆ ವಾಹನವನ್ನು ಕೆಡವಿ ಅಪಘಾತಪಡಿಸಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮೇಲ್ಕಾಣಿಸಿದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಮತ್ತು ಒಳಪೆಟ್ಟುಗಳಾಗಿದ್ದು,  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.    
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 305/2016 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 24-10-2016 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಸಿದ್ದಪ್ಪ ತಂದೆ ಪಾಮಣ್ಣ ಮತ್ತು ನಮ್ಮೂರಿನ ಪಂಪಣ್ಣ ತಂದೆ ಬಸಪ್ಪ ಬಳ್ಳಾರಿ, ನಾಯಕ ಇವರು ಕೂಡಿಕೊಂಡು ನಮ್ಮೂರಿನ ಸಿದ್ದಪ್ಪನ ಹೋಟಲ್ ಹತ್ತಿರ  ಗಂಗಾವತಿ ಕೊಪ್ಪಳ ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದೆವು. ಆಗ ನಮ್ಮೂರಿನ ಸೋಮವ್ವ ಗಂಡ ನಿಂಗಪ್ಪ ಗೊಲ್ಲರ ಮತ್ತು ಅವರ ತಂಗಿ ನೇತ್ರಮ್ಮ ಗಂಡ ನರಿಯಪ್ಪ ಗೊಲ್ಲರ ಇವರು ಮತ್ತು ನೇತ್ರಮ್ಮಳ ಮಗ ಸಣ್ಣೆಪ್ಪ ವಯಸ್ಸು 5 ವರ್ಷ ಈತನಿಗೆ ಕರೆದುಕೊಂಡು ತಮ್ಮ ಹೊಲದಿಂದ ವಾಪಸ್ ಮನೆಯ ಕಡೆಗೆ ಗಂಗಾವತಿ ಕೊಪ್ಪಳ ರಸ್ತೆಯ ಎಡ ಪಕ್ಕದಲ್ಲಿ ಬರುತ್ತಿದ್ದರು. ಆಗ ಅವರ ಹಿಂಭಾಗ ಕೊಪ್ಪಳ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿ ವೇಗವಾಗಿ ಮತ್ತು ತೀವ್ರ ನಿರ್ಲಕ್ಷತನದಿಂದ ರಸ್ತೆಯ ಮೇಲೆ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಹೊರಟಿದ್ದ ಸಣ್ಣೆಪ್ಪ ಇವನಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿ ಕಾರನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಹಾಗೆಯೇ  ಹೊರಟು ಹೋಗಿದ್ದು, ಈ ಸಮಯದಲ್ಲಿ ನಾವು ಕಾರ ನಂಬರ ನೋಡಲು ಸ್ವಿಫ್ಟ್ ಕಂಪನಿ ಇದ್ದು, ನಂ: ಕೆ.ಎ-25/ ಎಂ.ಬಿ-3744 ಇತ್ತು. ನಂತರ ಅಲ್ಲಿಯೇ ಇದ್ದ ನಾನು ಮತ್ತು ಪಂಪಣ್ಣ ಇಬ್ಬರು ಹೋಗಿ ಸಣ್ಣೆಪ್ಪನಿಗೆ ನೋಡಲು ಅವನ ಹಣೆಯ ಮೇಲೆ ಭಾರಿ ಒಳಪೆಟ್ಟು ಬಿದ್ದು, ತೆರಚಿದ ಗಾಯವಾಗಿದ್ದು ಎಡಗಡೆ ಸೊಂಟದ ಮೇಲೆ ತೆರಚಿದ ಗಾಯವಾಗಿತ್ತು. ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಕೂಡಲೆ ಗಾಯಗೊಂಡ ಸಣ್ಣೆಪ್ಪನಿಗೆ ಯಾವುದೋ ಒಂದು ವಾಹನದಲ್ಲಿ ಅವನ ತಾಯಿ ನೇತ್ರಮ್ಮ, ಮತ್ತು ದೊಡ್ಡಮ್ಮಳಾದ ಸೋಮವ್ವ ಇವರ ಜೊತೆಗೆ ಮಲ್ಲನಗೌಡ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ದಾಖಲಿಸಿ ಬಂದಿರುತ್ತೇನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 110/2016 ಕಲಂ: 78(3) Karnataka Police Act.
ದಿನಾಂಕ: 24-10-2016  ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿ ಹಿರೇಮ್ಯಾಗೇರಿ ಗ್ರಾಮದಲ್ಲಿ ಬರುವ ಅಕ್ಕಮಾದೇವಿ ದೇವಸ್ಥಾನದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನಂ 01 ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 540/-ರೂ. ಹಾಗೂ ಒಂದು ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 78(3) Karnataka Police Act.
ದಿನಾಂಕ: 24-10-2016 ರಂದು ಸಂಜೆ 4:20 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ಮೇಣೆಧಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 2370-00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ ಆರೋಪಿ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ಮರಿಸ್ವಾಮಿ ಉರಿಜಾಳ ಸಾ: ತಾವರಗೇರಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008