Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 30, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 268/2016 ಕಲಂ: 143, 147, 323, 395, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 29-11-2016 ರಂದು 14-00 ಗಂಟೆಗೆ ಶ್ರೀ ವಿರೇಶ ಬಳ್ಳಾರಿ ತಂದೆ ಬಳ್ಳಾರಿ ಚನ್ನಪ್ಪ ವಯಸ್ಸು 55 ವರ್ಷ ಜಾ:ಲಿಂಗಾಯತ ಉ: ವಿಶ್ವವಾಣಿ ದಿನಪತ್ರಿಕೆ ವರದಿಗಾರರು ಫಿರ್ಯಾದಿ ನೀಡಿದ್ದು, ದಿನಾಂಕ 26-11-2016 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ನಾಮಫಲಕ ಮತ್ತು ವೃತ್ತಕ್ಕೆ ಸಂಬಂಧಿಸಿದಂತೆ ವರದಿಯನ್ನು ಮಾಡಿದ್ದು, ದಿನಾಂಕ 29-11-2016 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾದಿದಾರರು ತಮ್ಮ ಬಳ್ಳಾರಿ ಬುಕ್ ಡಿಪೋದ ಹತ್ತಿರ ಇರುವ ಕಚೇರಿಯಲ್ಲಿ ಸುದ್ದಿ ಟೈಪ್ ಮಾಡುತ್ತಾ ಕುಳಿತಿರುವಾಗ ಅಲ್ಲಿಗೆ  ಆರೋಪಿತರಾದ 01] ಹೊಸಳ್ಳಿ ಶಂಕರಗೌಡ. (02) ಹೊಸಳ್ಳಿ ಚಂದ್ರಗೌಡ. (03) ಹೊಸಳ್ಳಿ ನಾಗರಾಜ ಗೌಡ ಹಾಗೂ ಅವರ ಹಿಂಬಾಲಕರು ಸುಮಾರು 200 ಜನರು ಅಕ್ರಮಕೂಟ ರಚಿಸಿಕೊಂಡು ಬಂದು ವಿಶ್ವವಾಣಿ ದಿನಪತ್ರಿಕೆಯಲ್ಲಿ ಲಾಳಗೊಂಡ ಸಮಾಜದ ಬಗ್ಗೆ ಸುಳ್ಳು ಸುದ್ದಿಯನ್ನು ಬರೆದಿದ್ದೀಯೇನಲೇ ಸೂಳೇಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಕೊರಳ ಪಟ್ಟಿ ಹಿಡಿದು ಅಂಗಿಯನ್ನು ಹಿಡಿದು ಎಳೆದಾಡಿ ಹೊಡಿ-ಬಡಿ ಮಾಡಿ, ಇನ್ನೊಮ್ಮೆ ಏನಾದರೂ ಈ ರೀತಿ ಬರೆದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲಲೇ ಸೂಳೇಮಗನೆ ಎಂದು ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಘಟನೆ ನಡೆಯುವ ಸಮಯದಲ್ಲಿ ಫಿರ್ಯಾದಿದಾರರ ಕೊರಳಲ್ಲಿದ್ದ 20 ಗ್ರಾಂ ಚೈನ್, ರೂ. 10,000-00 ಅಪಹರಣ ಮಾಡಿಕೊಂಡು ಓಡಿ ಹೋಗಿರುತ್ತಾರೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 269/2016 ಕಲಂ: 143, 147, 323, 395, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 29-11-2016 ರಂದು 1830 ಗಂಟೆಗೆ ಫಿರ್ಯಾದಿ ಶ್ರೀ ಆರ್. ಮರೇಗೌಡ ತಂದೆ ಸಿದ್ದರಾಮಪ್ಪ, ವಯಸ್ಸು 52 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಹೊಸಳ್ಳಿ, ತಾ: ಗಂಗಾವತಿ ಇವರು ಫಿರ್ಯಾದಿ ಹಾಜರುಪಡಿಸಿದ್ದು,  ದಿನಾಂಕ 26-11-2016 ರಂದು ವಿಶ್ವವಾಣಿ ದಿನಪತ್ರಿಕೆಯಲ್ಲಿ ಲಾಳಗೊಂಡ ಸಮಾಜದ ಬಗ್ಗೆ ಕೀಳುಮಟ್ಟದ ಶಬ್ದವನ್ನು ಬಳಸಿ ವರದಿಯನ್ನು ಮಾಡಿದ್ದು, ಕೆಲವು ದಿನಗಳ ಹಿಂದೆ ಹೊಸಳ್ಳಿ ಗ್ರಾಮದಲ್ಲಿ ನಾಮಫಲಕವನ್ನು ಈ ಬಗ್ಗೆ ಸಮಾಜದ ಮುಖಂಡರಾದ ಮುರಡಬಸಪ್ಪ, ಬಸವರಾಜಪ್ಪ ಪೊ.ಪಾ. ಯರಡೋಣಾ, ಶರಣೇಗೌಡ ಸಿಂಗಾಪೂರ ಸಾ: ಗಂಗಾವತಿ ಎಲ್ಲರೂ ಸೇರಿಕೊಂಡು ಇಂದು ದಿನಾಂಕ 29-11-2016 ರಂದು ಮಧ್ಯಾಹ್ನ 12-15 ಗಂಟೆ ಸುಮಾರಿಗೆ ವಿಚಾರಿಸಲು ಹೋದಾಗ ಬಳ್ಳಾರಿ ವೀರೇಶ ಹಾಗೂ ಬಳ್ಳಾರಿ ನಂದೀಶ ಮತ್ತಿತರ 8-10 ಜನರು ಕೂಡಿಕೊಂಡು ನನ್ನ ಮೇಲೆ ಏಕಾಏಕಿ ಬಂದು ನನ್ನ ಮೈಮೇಲಿನ ಅಂಗಿಯನ್ನು ಎಳೆದಾಡಿ ಕುತ್ತಿಗೆಗೆ ಕೈಹಾಕಿ ನನ್ನ ಕೊರಳಲ್ಲಿನ 20 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಜೇಬಿನಲ್ಲಿದ್ದ ರೂ. 10,000-00 ಹಣವನ್ನು ಕಸಿದುಕೊಂಡಿರುತ್ತಾರೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮೇಲೆ ಹಲ್ಲೆ ಮಾಡಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ.  ಅಲ್ಲದೇ ನಾನು ಪತ್ರಿಕಾ ವರದಿಗಾರನಿದ್ದು ನಿಮ್ಮ ಸಮಾಜದವರು ನನ್ನ ಸೆಂಟ ಕಿತ್ತುಕೊಳ್ಳಲು ಆಗುವುದಿಲ್ಲ, ನನ್ನ ಮೇಲೆ ಫಿರ್ಯಾದಿ ಕೊಟ್ಟರೇ ಜೀವಂತ ಇರಲು ಬಿಡುವುದಿಲ್ಲವೆಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ.  ಘಟನಾ ಕಾಲಕ್ಕೆ ನನ್ನ ಕೊರಳಲ್ಲಿದ್ದ ಬಂಗಾರದ ಸರ ಮತ್ತು ಮುರಡಬಸಪ್ಪ ಇವರ ವಾಚನ್ನು ಕಿತ್ತುಕೊಂಡಿರುತ್ತಾರೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 270/2016 ಕಲಂ: 143, 147, 148, 447, 323, 354, 355, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 29-11-2016 ರಂದು 2030 ಗಂಟೆಗೆ ಫಿರ್ಯಾದಿ ರಜೀಯಾಬೇಗಂ ಗಂಡ ಬಾಬಾ ಫ್ರುಟ್ಸ್ ವಯಸ್ಸು 26 ವರ್ಷ ಉ: ಮನೆಗೆಲಸ ಸಾ: ಲಿಂಗರಾಜ ಕ್ಯಾಂಪ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು, ದಿನಾಂಕ 28-11-2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿತರಾದ 01] ಶರಣ 2] ಅಯ್ಯನಗೌಡ ಹೇರೂರ, 3] ಟಾಟಾ ಎಸಿ ಶಿವು, 4] ನಾಗರಾಜ 5] ಚಂದ್ರು 6] ಇಡ್ಲಿ ಪಂಪ ಸಾ:ಮಹಿಬೂಬ ನಗರ 07] ಸೂಣದಾರ ಶಿವು ಸಾ: ಲಿಂಗರಾಜ್ ಕ್ಯಾಂಪ ಗಂಗಾವತಿ 08] ವಿಕ್ರಮ ಸಂತೆ ಬಯಲು 15 ನೇ ವಾರ್ಡ ಗಂಗಾವತಿ, 9] ಚಕ್ಲಿ ವಿಜಯ ಸಾ: ಸಂತೆ ಬಯಲು 15 ನೇ ವಾರ್ಡ ಗಂಗಾವತಿ ರವರು ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿದಾರರ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಮನೆಯಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದ ಫಿರ್ಯಾದಿ ಹಾಗೂ ಆಕೆಯ ಗಂಡ ಮತ್ತು ಗಂಡನ ಸ್ನೇಹಿತ ರಾಜ ಇವರಿಗೆ ಈ ಮುಸಲ್ಮಾನ ಸೂಳೆ ಮಕ್ಕಳದು ಬಹಳವಾಯಿತು ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಈ ಬಗ್ಗೆ ವಿಚಾರಿಸಿದ್ದಕ್ಕೆ ಆರೋಪಿತರು ರಾಜ ಇವನನ್ನು ಎಳೆದು ಕೈಗಳಿಂದ, ಕಾಲಿನಿಂದ ಒದ್ದಿದ್ದು ಅಲ್ಲಿಯೇ ಬಿದ್ದ ಒಂದು ಸೈಜು ಕಲ್ಲನ್ನು ತೆಗೆದುಕೊಂಡು ಆರೋಪಿ ಅಯ್ಯನಗೌಡ ಹೇರೂರು ಇತನು ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಹಾಕುವವನಿದ್ದು, ಇನ್ನುಳಿದ ಆರೋಪಿತರು ಲೇ ಸೂಳೆ ನಿನ್ನದು ಬಹಳವಾಯಿತೆಂದು ಫಿರ್ಯಾದಿಯ ಸೀರೆ ಎಳೆದು, ಫಿರ್ಯಾದಿದಾರಳನ್ನು ಎಳೆದಾಡಿ ಕೈಗಳಿಂದ ಹೊಡೆದು, ಚಪ್ಪಲಿಯಿಂದ ಹೊಡೆದಿರುತ್ತಾರೆಂದು ವಗೈರೆ ಆಗಿ ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 134/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 29-11-2016 ರಂದು 8-15 ಪಿಎಂಕ್ಕೆ ಆರೋಪಿ ನಂ. 01 ನೇದವನು ನೊಂದಣಿ ಸಂಖ್ಯೆ ಇರದ ಚೆಸ್ಸಿ ನಂ. HD2A18126GWL07915 ನೇದ್ದನ್ನು ಯಲಬುರ್ಗಾ ಕಡೆಯಿಂದ ಕುಕನೂರು ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದು, ಅದೇರೀತಿ ಆರೋಪಿ ನಂ. 02 ನೇದವನು ನೊಂದಣಿ ಸಂಖ್ಯೆ ಇರದ ಚೆಸ್ಸಿ ನಂ. MBLHA10BSGHE71279  ನೇದ್ದನ್ನು ಕುಕನೂರು ಕಡೆಯಿಂದ ಯಲಬುರ್ಗಾ ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗಿದ್ದು ಎರು ವಾಹನದ ಚಾಲಕರು ಒಬ್ಬರಿಗೋಬ್ಬರು ಸೈಡ್ ಕೊಡದೇ ಪರಸ್ಪರ ಮುಖಾಮುಖಿಯಾಗಿ ಟಕ್ಕರ್ ಕೊಟ್ಟು ಅಪಘಾತಪಡಿಸಿರುತ್ತಾರೆ. ಇದರಿಂದಾಗಿ ಆರೋಪಿ ನಂ. 01 ನೇದವನಿಗೆ ಸಾದಾ ಸ್ವರೂಪದ ಗಾಯ ಮತ್ತು ಭಾರಿ ಸ್ವರೂಪದ ಒಳಪೆಟ್ಟಾಗಿದ್ದು, ಆರೋಪಿ ನಂ. 02 ನೇದವನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಎರಡು ಮೋಟಾರ್ ಸೈಕಲ್ ಸವಾರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008