Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, April 23, 2017

1] ವಿಶೇಷ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 05/2017 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ.
ದಿ:22-04-2017 ರಂದು ಮಧ್ಯಾಹ್ನ 12:30 ಗಂಟೆಗೆ ಬೂದಗುಂಪಾ ಸೀಮಾದ ಕರ್ನಾಟಕ ಪೌಲ್ಟ್ರಿ ಫಾರ್ಮ ಹತ್ತೀರ ಆರೋಪಿತನಾದ ಮಂಜುನಾಥ ತನ್ನ ಹೊಟೇಲ್ನಲ್ಲಿ ಅನಧೀಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಧ್ಯದ ಬಾಟಲಿ/ಡಬ್ಬಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತೀರುವಾಗ ಆರ್ ಎಸ್ ಉಜ್ಜನಕೊಪ್ಪ ಪಿ. ವಿಶೇಷ ಪೊಲೀಸ್ ಠಾಣೆ, ಜಿಲ್ಲಾ ಅಪರಾಧ ವಿಭಾಗ, ಕೊಪ್ಪಳ ಜಿಲ್ಲೆ ಅವರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಒಟ್ಟು ಅಂ.ಕಿ.ರೂ: 4,384=72 ಬೆಲೆಯುಳ್ಳ ಮಧ್ಯದ ಬಾಟಲಿ/ಡಬ್ಬಿಗಳನ್ನು ಜಫ್ತು ಮಾಡಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 62/2017 ಕಲಂ. 447, 341, 323, 504, 506 ಸಹಿತ 34  ಐ.ಪಿ.ಸಿ.
ದಿನಾಂಕ:-22-04-2017 ರಂದು ಬೆಳಗಿನ ಜಾವ 02-10 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶೆಖರಪ್ಪ ತಂದಿ ಕನಕಪ್ಪ ಗಿಣವಾರ ವಯಾ-55 ವರ್ಷ ಜಾ.ಕುರಬರು ಉ-ಒಕ್ಕಲುತನ ಸಾ. ವಾರ್ಡ ನಂ 4 ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖತ ದೂರು ನೀಡಿದ್ದು ಸದ್ರಿ ದೂರಿನಲ್ಲಿ ಕಾರಟಗಿಯ ಸರ್ವೆ ನಂ 303/2ಅ ನೆದ್ದರಲ್ಲಿಯ 2ಎ13ಗುಂ ಪೈಕಿ 37 ಗುಂಟೆ ಜಮೀನು ನನ್ನ ಸ್ವಾಧಿನ ಮತ್ತು ಪಟ್ಟಾದಾರರು ಇರುತ್ತೇನೆ ಸದ್ರಿ ಜಮೀನಿನಲ್ಲಿ ದಿನಾಂಕ:-21-04-2017 ರಂದು ರಾತ್ರಿ 11-50 ಗಂಟೆಯ ಸುಮಾರಿಗೆ ಆರೋಪಿತರು ಪದ್ಮಪ್ಪ ತಂದಿ ಅಯ್ಯಪ್ಪ ರೌಡಕುಂದಿ ಸಾ. ಕಾರಟಗಿ 2) ಅಯ್ಯಪ್ಪ ತಂದಿ ಪದ್ಮಪ್ಪ ಸಾ.ಕಾರಟಗಿ 3) ಶರಣಮ್ಮ ಗಂಡ ಪದ್ಮಪ್ಪ ಸಾ. ಕಾರಟಗಿ ಹಾಗೂ ಇತರರು ಸೇರಿ ನಮ್ಮ ಬೂಮಿಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಅರತಕ್ಷತೆ ಕಾರ್ಯಾಕ್ರಮದ ಸಲುವಾಗಿ ಪೆಂಡಾಲು ಹಾಕಲು ತೆಗ್ಗು ತೊಡುತ್ತಿದ್ದಾಗ್ಗೆ ನಾನು ನನ್ನ ಮಗ ಹೋಗಿ ಇದು ನಮ್ಮ ಜಾಗೆ ಇರುತ್ತದೆ ಅಂತಾ ಅಂದಿದ್ದಕ್ಕೆ ಇವರು ನನಗೆ ನನ್ನ ಮಗ ಮಂಜುನಾಥನಿಗೆ ಎಲ್ಲರೂ ಸೇರಿ ಹಿಡಿದುಕೊಂಡು ಎಳೆದಾಡಿ ಹಲ್ಲೆ ಮಾಡಿ ಅಶ್ಲೀಲ ಪದಗಳಿಂದ ಬೈದಾಡಿ ನಮ್ಮ ಜಾಗ ನಾವು ಏನು ಬೇಕಾದರೂ ಮಾಡಿಕೊಳ್ಳುತ್ತೇವೆ ಇಲ್ಲಿಗೆ ಬಂದರೆ ವಾಪಾಸ ಜೀವಂತ ಕಳುಹಿಸುವುದಿಲ್ಲಾ ಅಂತಾ ಜೀವ ಬೇರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 64/2017 ಕಲಂ 341, 323, 326, 504, 506 ಐ.ಪಿ.ಸಿ.
ದಿನಾಂಕ:-22-04-2017 ರಂದು ಸಂಜೆ 6-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮತಿ ಅಮರಮ್ಮ ಗಂಡ ಈಶಪ್ಪ ಹಾಸಗಲ್ ವಯಾ-50ವರ್ಷ ಜಾ.ಲಿಂಗಾಯತ ಸಾ. ಸೋಮನಾಳ ತಾ. ಗಂಗಾವತಿ  ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ನನಗೆ ಒಬ್ಬ ಗಂಡು ಮಗ ಮೂರು ಜನ ಹೆಣ್ಣು ಮಕ್ಕಳು ಇದ್ದು ನನ್ನ ಮಗನಾದ ನಿಂಗಪ್ಪ ತಂದಿ ಈಶಪ್ಪ ಹಾಸಗಲ್ ವಯಾ-35 ವರ್ಷ ಈತನು ಈಗ್ಗೆ ಸುಮಾರು 5 ವರ್ಷಗಳಿಂದ ದುಡಿಯಲು ಹೋಗದೇ ಪ್ರತಿದಿನ ಕುಡಿದು ಬಂದು ನನಗೆ ನನ್ನ ಗಂಡನಿಗೆ ಕುಡಿಯಲು  ಹಣ ಕೇಳುವುದು ಕೊಡದಿದ್ದರೆ ನಮಗೆ ಅಶ್ಲೀಲ ಪದಗಳಿಂದ ಬೈದಾಡಿ ಹೊಡೆಬಡೆ ಮಾಡುತ್ತಿದ್ದನು ನಮ್ಮ ಸೊಸೆ ರತ್ನಮ್ಮ ಈಕೆಯು ಬಿಡಿಸಿಕೊಳ್ಳಲು ಬಂದರೆ ಆಕೆಗೆ ಹೊಡೆಬಡೆ ಮಾಡುತ್ತಿದ್ದನು ಯಾರದೂ ಹೇಳಲು ಬಂದರೆ ಅವರಿಗೂ ಅಶ್ಲೀಲ ಪದಗಳಿಂದ ಬೈದಾಡುತ್ತಿದ್ದನು ನಮ್ಮ ಮಗನ ಹೆಂಡತಿ ನಮ್ಮ ಸೊಸೆ ಈತನ ಕಿರುಕುಳದಿಂದ ಮನೆ ಬಿಟ್ಟು ತವರು ಮನೆಗೆ ಹೋಗಿರುತ್ತಾಳೆ ದಿನಾಂಕ:-21-04-2017 ರಂದು ರಾತ್ರಿ 9-30 ಗಂಟೆಗೆ ನಮ್ಮ ಮಗನ ಮನೆಗೆ ಬಂದು ನನ್ನ ಗಂಡನಿಗೆ ಕುಡಿಯಲು ಹಣ ಕೇಳಿ ಕೊಡದ್ದರಿಂದ ಆತನಿಗೆ ಹಿಡಿದುಕೊಂಡು ಕಪಾಳಕ್ಕೆ ಹೊಡೆಯುತ್ತಿದ್ದಾಗ್ಗೆ ನಾನು ಮತ್ತು ಮನೆಗೆ ಬಂದಿದ್ದ ನನ್ನ ಹೆಣ್ಣು ಮಕ್ಕಳು ಬಿಡಿಸಿಕೊಂಡು ಮನೆಯಿಂದ ಹೊರಡೆ ದಬ್ಬಿದರು ಮನೆಯ ಹೊರಗಡೆ ಇದ್ದ ಒಂದು ರಾಡನ್ನು ತೆಗೆದುಕೊಂಡು ಬಂದು ನನಗೆ ಹೊಡೆಯಲು ಬಂದಿದ್ದರಿಂದ ನಾನು ತಪ್ಪಿಸಿಕೊಳ್ಳಲು ಹೋಗಿದ್ದರಿಂದ ಹೇಟು ನನ್ನ ಎಡಕಿವಿಗೆ ಬಿದ್ದು ಕಿವಿ ಹರಿದು ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಮನೆಯ ಅಕ್ಕಪಕ್ಕದವರು ಬಂದು ಬಿಡಿಸುಕೊಂಡರು ನಮ್ಮ ಮಗ ನಿಮ್ಮನ್ನು ಕೊಂದು ಆಸ್ತಿಯನ್ನು ನನ್ನ ಹೆಸರಿಗೆ ಮಾಡಿಕೊಳ್ಳುತ್ತೇನೆ ಅಂತಾ ಜೀವ ಬೇದರಿಕೆ ಹಾಕಿ ಹೋಗಿರುತ್ತಾನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 79/2017 ಕಲಂ: 279, 337, 338  ಐ.ಪಿ.ಸಿ.
ದಿ:22-04-17 ರಂದು ರಾತ್ರಿ 8-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ವಿಜಯಲಕ್ಷ್ಮೀ ಇವರು ಹೇಳಿಕೆ ನೀಡುವ ಸ್ಥಿತಿಯಲ್ಲಿರುವುದಿಲ್ಲ. ಇವರ ಆರೈಕೆಯಲ್ಲಿದ್ದ ಶೇಖಮಹ್ಮದ್ ಗೌಸ್ ಸಾ: ಕೊಪ್ಪಳ. ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿ:22-04-17 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರರ ಪರಿಚಯಸ್ಥರಾದ ಹಾಗೂ ಗಾಯಾಳು ಶ್ರೀಮತಿ ವಿಜಯಲಕ್ಷ್ಮೀ ಇವರಿಗೆ ತನ್ನ ಮಗ ಪ್ರಭುಸ್ವಾಮಿ ಇತನು ಹೊಸಪೇಟೆಯಿಂದ ವಾಪಾಸ್ ಕೊಪ್ಪಳಕ್ಕೆ ಅಂತಾ ತನ್ನ ಮೋ.ಸೈ ನಂ: ಕೆಎ-37/ಇಸಿ-7371 ನೇದ್ದರ ಹಿಂದೆ ಕೂಡ್ರಿಸಿಕೊಂಡು ಮೆಡಿಕಲ್ ಕಾಲೇಜ ಮುಂದೆ ಬರುವಾಗ ತನ್ನ ಗಾಡಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು ಬರುವಾಗ ವಾಹನ ನಿಯಂತ್ರಿಸದೇ ಪಲ್ಟಿ ಮಾಡಿದ್ದರಿಂದ ವಿಜಯಲಕ್ಷ್ಮೀ ಇವರಿಗೆ ಭಾರಿಗಾಯ ಹಾಗೂ ಆರೋಪಿ ಚಾಲಕನಿಗೆ ಸಾದಾ ಗಾಯವಾಗಿದ್ದು ಇರುತ್ತದೆ ಅಂತಾ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008