Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, April 17, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 48/2017 ಕಲಂ: 79, 80 Karnakata Police ACT .
ದಿನಾಂಕ: 16-04-2017 ರಂದು ಸಂಜೆ 6-30 ಗಂಟೆಯ ಸುಮಾರಿಗೆ 09 ಜನ ಆರೋಪಿತರು 01] ಲಕ್ಷ್ಮಣ ತಂದೆ ಫಕೀರಡ್ಡಿ ಮೂಲಿಮನಿ, ವಯ: 43 ವರ್ಷ, ಜಾ: ರಡ್ಡಿ, ಉ: ಓಕ್ಕಲುತನ, ಸಾ: ಚುಕ್ಕನಕಲ್, ತಾ: ಕೊಪ್ಪಳ 02] ರೇಣುಕಪ್ಪ ತಂದೆ ಹಾಲಪ್ಪ ಮಡಿವಾಳರ ಉ: ಫೋಟೋಗ್ರಾಫರ್ ಸಾ: ನಿರ್ಮಿತಿ ಕೇಂದ್ರ, 03]ದುರಗಪ್ಪ ತಂದೆ ಕೋಟ್ರಪ್ಪ ಎಮ್ಮಿಯರ್ 04] ಪ್ರಕಾಶ ತಂದೆ ಶಿವಪ್ಪ ಬೆಳವಣಿಕಿ ವಯ: 52 ವರ್ಷ, 05] ವೆಂಕಟೇಶ ತಂದೆ ಬುಡ್ಡಪ್ಪ ಮೇಟಿ 06] ರಮೇಶ ತಂದೆ ನಾರಾಯಣಪ್ಪ ಪೂಜಾರ. 07]ನಿಂಗಪ್ಪ ತಂದೆ ದೇವಪ್ಪ ಮಡಿವಾಳರ 08] ಗವಿಸಿದ್ದಪ್ಪ ತಂದೆ ಬಸಪ್ಪ ಮಡಿವಾಳರ.09] ಕಳಕಪ್ಪ ತಂದೆ ಬುಶೇಪ್ಪ ಮಡಿವಾಳರ ಕೊಪ್ಪಳ ಇವರು ನಗರದ ರೈಲ್ವೆ ಸ್ಟೇಷನ್ ರಸ್ತೆಯ ಹತ್ತಿರ ಇರುವ ಶ್ರೀನಿವಾಸ ಲಾಡ್ಜ ರೂಂ ನಂ:108 ರಲ್ಲಿ  ವಿದ್ಯುತ್ ಬೆಳಕಿನಲ್ಲಿ ಪಣಕ್ಕೆ ನಗದು ಹಣ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರಾದ ಶ್ರೀ ರವಿ ಉಕ್ಕುಂದ ಪಿ.ಐ ಕೊಪ್ಪಳ ನಗರ ರವರು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 37,610=00 ರೂ ನಗದು 52 ಇಸ್ಪೇಟ್ ಎಲೆಗಳು ಹಾಗೂ ಒಂದು ಬೆಡ್ ಶೀಟ್ ಮುದ್ದೇಮಾಲುಗಳನ್ನು ಜಫ್ತು ಮಾಡಿಕೊಂಡು ಹಾಗೂ ಜೂಜುಕೋರರನ್ನು ವಶಕ್ಕೆ ತಗೆದುಕೊಂಡಿದ್ದು, ಅಲ್ಲದೆ ಶ್ರೀನಿವಾಸ  ಲಾಡ್ಜ ಮಾಲಿಕ ಹಾಗೂ ಮ್ಯಾನೇಜರ್ 10] ರವಿ ಸಾ: ಕೊಪ್ಪಳ ಲಾಡ್ಜ್ ಮ್ಯಾನೇಜರ್ 11] ಈಶ್ವರಪ್ಪ ಸಾ: ಕೊಪ್ಪಳ ಲಾಡ್ಜ್ ಮ್ಯಾನೇಜರ್ 12] ಶಶಿಧರ ಶೆಟ್ಟಿ ಸಾ: ಕೊಪ್ಪಳ ಲಾಡ್ಜ್ ಮಾಲೀಕರು 13] ಚಂದ್ರಶೇಖರ ಶೆಟ್ಟಿ ಸಾ: ಕೊಪ್ಪಳ ಲಾಡ್ಜ್ ಮಾಲೀಕರು ಇವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೂಕನೂರ ಪೊಲೀಸ್ ಠಾಣೆ ಗುನ್ನೆ ನಂ: 32/2017 ಕಲಂ: 379 ಐ.ಪಿ.ಸಿ.
ದಿನಾಂಕ: 16-04-2017 ರಂದು ಮಧ‍್ಯಾಹ್ನ 13-30 ಗಂಟೆಗೆ ಪಿರ್ಯಾದಿದಾರರಾದ ಲಕ್ಷ್ಮಿದೇವಿ ಗಂಡ ವೆಂಕಟೇಶಲು ಬಿ. ಸಾ: ಚಪ್ಪರದಹಳ್ಳಿ, ಹೊಸಪೇಟೆ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವನೆಂದರೆ, ದಿನಾಂಕ: 16-04-2017 ರಂದು ಮಧ್ಯಾಹ್ನ 12-45 ಗಂಟೆ ಸುಮಾರಿಗೆ ತಳಕಲ್ ಗ್ರಾಮದ ಶ್ರೀ ಹಜರತ್ ಮೌಲಾಹುಸೇನ ಪಕೀರಸ್ವಾಮಿ ದರ್ಗಾದಲ್ಲಿ ಪಿರ್ಯಾದಿದಾರಳು ಪಾಳಯದಲ್ಲಿ ನಿಂತುಕೊಂಡಿದ್ದು, ನಂತರ ಮಧ್ಯಾಹ್ನ 13-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಹೊರಗಡೆ ಬಂದು ತಮ್ಮ ಬಂಗಾರದ ಮಾಂಗಲ್ಯ ಚೈನ್ ಸರವನ್ನು ನೋಡಿಕೊಳ್ಳಲಾಗಿ ಕೋರಳಲ್ಲಿ ಇದ್ದಿಲ್ಲ. ಸದರಿ ಬಂಗಾರದ ಮಾಂಗಲ್ಯ ಚೈನ್ ಸರವನ್ನು ಅಲ್ಲಿಯೇ ಹುಡುಕಾಡಲು ಸಿಕ್ಕಿರುವದಿಲ್ಲ. ಈ ದಿವಸ ಮಧ್ಯಾಹ್ನ 12-45 ಗಂಟೆಯಿಂದ 13-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸುಮಾರು 02 ಲಕ್ಷ ರೂ. ಬೆಲೆಬಾಳುವ 6 ½ ತೊಲೆ ಬಂಗಾರದ ಮಾಂಗಲ್ಯ ಚೈನ್ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳ್ಳರನ್ನು ಪತ್ತೆ ಮಾಡಿ, ಮಾಂಗಲ್ಯ ಚೈನ್ ಸರವನ್ನು ಹುಡುಕಿ ಕೊಟ್ಟು ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 68/2017 ಕಲಂ: 323, 324, 307, 504, 506, ಸಹಿತ 34 ಐ.ಪಿ.ಸಿ.
ದಿನಾಂಕ 16-04-2017 ರಂದು ಮುನಿರಾಬಾದ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ.ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿದ್ದು ಗಾಯಾಳು ಗವಿಸಿದ್ದಯ್ಯ ಬೊಮ್ಮನಾಳ ಸಾ: ಅಲ್ಲಾನಗರ  ಇವರ ಹೇಳಿಕೆ ಪಡೆದಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 15-04-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದುದಾರರ ಚಿಕ್ಕಪ್ಪ ಶಿವಪುತ್ರಯ್ಯನು ಪೋನಿನಲ್ಲಿ ಮಾತನಾಡುತ್ತಿರುವಾಗ ಆರೋಪಿತರು ಗುರುಸಿದ್ದಯ್ಯ ಕಾತರಕಿ, ಆನಂದ, ಸಿದ್ದಯ್ಯ, ಮಲ್ಲಮ್ಮ ಎಲ್ಲರೂ ಅಲ್ಲಾನಗರ ಇವರು ಬಂದು ಅಯಾಚ್ಯವಾಗಿ ಬೈದಾಡಿದ್ದು ಅದನ್ನು ಕೇಳಲು ಹೋದ ಪಿರ್ಯಾದಿಗೆ  ಮತ್ತು ಅವರ ತಾಯಿ ,ತಂಗಿ ಯರಿಗೆ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡೆದು ನಿಮಗೆ ಜೀವ ಸಹಿತ ಬಿಡುವದಿಲ್ಲಾ ಎಂದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದುದಾರರಿಗೆ ಕೊಡಲಿ ಕಾವಿನಿಂದ ಮತ್ತು ಕುಡಗೋಲನಿಂದ ಹೊಡೆದಿರುತ್ತಾರೆ ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 31/2017 ಕಲಂ: 379 ಐ.ಪಿ.ಸಿ.
ಶ್ರೀ ಭೀಮಣ್ಣ ಸೂರಿ. ಸಿ.ಪಿ.ಐ. ಕೊಪ್ಪಳ ಗ್ರಾಮೀಣ ವೃತ್ತ ರವರು ದಿನಾಂಕ: 16-04-2017 ರಂದು ಬೆಳಗ್ಗೆ 08-00 ಗಂಟೆ ಸುಮಾರಿಗೆ ತಮ್ಮ ಸಿಬ್ಬಂದಿಯವರೊಂದಿಗೆ ಅಳವಂಡಿ-ಮುಂಡರಗಿ ರಸ್ತೆಯ ಮೇಲೆ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹತ್ತಿರ ಅಕ್ರಮ ಮರಳು ಸಾಗಾಣಿಕೆ ಪತ್ತೆ ಕುರಿತು ನಿಂತುಕೊಂಡಿದ್ದಾಗ, ಲಾರಿ ನಂ: ಕೆಎ- 25/ಬಿ-46 ನೇದ್ದರಲ್ಲಿ ಆರೋಪಿ ನಂ; 01 ಮತ್ತು 02 ಇವರಿಬ್ಬರು ಕೂಡಿಕೊಂಡು ಸರ್ಕಾರಕ್ಕೆ ಸೇರಿದ ಹಿರೇಹಳ್ಳದಿಂದ ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಅಂದಾಜು 10,000-00 ರೂ. ಬೆಲೆ ಬಾಳುವ ಮರಳನ್ನು ಕಳ್ಳತನ ಮಾಡಿ, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಮೇಲ್ಕಂಡ ತಮ್ಮ ಲಾರಿಯಲ್ಲಿ ತುಂಬಿಕೊಂಡು ಹೋರಾಟಾಗ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಲಾರಿಯನ್ನು ಪಂಚರ ಸಮಕ್ಷಮ ವಶ ಪಡಿಸಿಕೊಂಡು ತಂದು ಅಳವಂಡಿ ಠಾಣೆಯ ಆವರಣದಲ್ಲಿ ನಿಲ್ಲಿಸಿ ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008