Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, April 18, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 77/2017 ಕಲಂ: 279,337,338,304(A) IPC ಮತ್ತು 187 ಐಎಂವಿ ಕಾಯ್ದೆ.
ದಿನಾಂಕ :- 17-04-2017 ರಂದು ರಾತ್ರಿ 8-15 ಗಂಟೆಗೆ ಗಾಯಾಳು ಹನಮಂತಪ್ಪ ತಂದೆ ಬಾಲಪ್ಪ ಹನಮನಾಳ ವಯಾ: 26 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಕರಡಚಿಲುಮಿ ತಾ: ಸಿಂಧನೂರು ರವರು ಠಾಣೆಗೆ ಬಂದು ಲಿಖಿತ  ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ :17-04-2017 ರಂದು ನಾನು ಮತ್ತು ನಮ್ಮ ಸಂಬಂಧಿಕನಾದ ವಿರೇಶ ತಂದೆ ಮುದುಕನಗೌಡ ಗೌಡ್ರ ವಯಾ : 35 ವರ್ಷ ಜಾ : ವಾಲ್ಮೀಕಿ ಉ : ಒಕ್ಕಲುತನ  ಸಾ :ಕರಡಚಿಲುಮಿ ಇತನನ್ನು ಕರೆದುಕೊಂಡು ನನ್ನ ಮೋ.ಸೈ ನಂ : ಕೆ.-36/.ಎಫ್-1002 ನೇದ್ದರಲ್ಲಿ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ಜಾತ್ರೆಯನ್ನು ಮುಗಿಸಿಕೊಂಡು ವಾಪಾಸ್ ಕುಷ್ಟಗಿ ಮುಖಾಂತರ ನಮ್ಮ ಊರಿಗೆ ಕುಷ್ಟಗಿ-ತಾವರಗೇರಾ ರಸ್ತೆಯ ಮೇಲೆ ಹೋಗುತ್ತಿರುವಾಗ ಸದರಿ ಮೋ.ಸೈ ನ್ನು ವಿರೇಶ ಗೌಡ್ರ ಇತನು ನಡೆಸುತ್ತಿದ್ದು ನಾನು ಹಿಂದೆ ಕುಳಿತಿದ್ದೇನು, ಸಂಜೆ 5-45 ಗಂಟೆಯ ಸುಮಾರಿಗೆ ಹಿರೇಮನ್ನಾಪೂರದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಹತ್ತಿರ ಹೋಗುತ್ತಿರುವಾಗ ನಮ್ಮ ಮುಂದೆ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಮುಂದೆ ಹೋಗುತ್ತಿದ್ದು ರೋಡ ಹಂಪ್ಸ ನ್ನು ಒಮ್ಮಲೇ ನೋಡಿ ಒಮ್ಮಿಂದೊಮ್ಮೆಲೇ ಬ್ರೇಕ್ ಮಾಡಿದ್ದರಿಂದ ಹಿಂದೆ ಹೋಗುತ್ತಿದ್ದ ನಮ್ಮ ಮೋ.ಸೈ ಸವಾರನಾದ ವಿರೇಶ ಗೌಡ್ರ ಈತನು ಮೋ.ಸೈ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮಿಂದೊಮ್ಮೆಲೇ ಮುಂದೆ ಹೋಗುತ್ತಿದ್ದ ಲಾರಿಗೆ ಟಕ್ಕರ ಮಾಡಿದ್ದರಿಂದ ನಾವು ಮೋ.ಸೈ ಸಮೇತ ಕೆಳಗೆ ಬಿದ್ದಿದ್ದು ಇದರಿಂದ ನನಗೆ ಬಲಗೈ ಮುಂಗೈಗೆ, ಮತ್ತು ಸೊಂಟಕ್ಕೆ ಒಳಪೆಟ್ಟಾಗಿದ್ದು ನಂತರ ಮೋ.ಸೈ ನಡೆಸುತ್ತಿದ್ದ ವಿರೇಶನನ್ನು ನೋಡಲು ಇತನ ತಲೆಯ ಎಡಗಡೆ ಭಾಗಕ್ಕೆ ಭಾರಿ ರಕ್ತ ಗಾಯವಾಗಿ, ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ  ಸದರಿ ಲಾರಿ ಚಾಲಕ ಹಾಗೂ ನಮ್ಮ ಮೋ.ಸೈ ನೇದ್ದರ ಚಾಲಕನಾದ ವಿರೇಶ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
2] ವಿಶೇಷ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 02/2017 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ.
ದಿ:17-04-2017 ರಂದು ಸಾಯಂಕಾಲ 4:50 ಗಂಟೆಗೆ ಗಂಗಾವತಿ ನಗರದ ಅಂಬೇಡ್ಕರ್ ಸರ್ಕಲ್ ಹತ್ತೀರ ಆರೋಪಿತನಾದ ಹನುಮೇಶ ಇತನು ತನ್ನ ಪಾನಶಾಪ ಅಂಗಡಿಯಲ್ಲಿ ಅನಧೀಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಧ್ಯದ ಡಬ್ಬಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತೀರುವಾಗ ಶ್ರೀ ಆರ್. ಎಸ್ ಉಜ್ಜನಕೊಪ್ಪ ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವನನ್ನು ವಶಕ್ಕೆ ಪಡೆದುಕೊಂಡು ಅವನಿಂದ ಒಟ್ಟು ಅಂ.ಕಿ.ರೂ: 1,857=80 ಬೆಲೆಯುಳ್ಳ ಮಧ್ಯದ ಡಬ್ಬಿಗಳನ್ನು ಜಫ್ತು ಮಾಡಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು  ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 72/2017 ಕಲಂ: 427 ಐ.ಪಿ.ಸಿ.
ದಿನಾಂಕ: 16-04-2017 ರಂದು 8-00 ಪಿ.ಎಂ ಕ್ಕೆ ರಾಮನಗೌಡ ತಂದೆ ಯಮನೂರಗೌಡ ಪಾಟೀಲ್ ಸಾ: ಮಾದಾಪೂರ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾಧಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದುಸದರಿ ದೂರಿನ ಸಾರಾಂಶವೇನೆಂದರೆ  ದಿನಾಂಕ 04-04-2017 ರಂದು ನಾನು ಮತ್ತು ನಮ್ಮ ಊರಿನ ಹಿರಿಯರು ನನ್ನ ಇನೋವಾ ಕಾರ್ ನಂ ಕೆ.ಎ.51 /ಬಿ 7701 ನೇದ್ದನ್ನು ತೆಗೆದುಕೊಂಡು ಹುಲಿಗಿಗೆ ದರ್ಶನಕ್ಕೆ ಬಂದಿದ್ದೇವು ನಂತರ ಮದ್ಯಾನ್ನ 3-30 ಗಂಟೆ ಸುಮಾರಿಗೆ ನನಗೆ ನಮ್ಮ ಊರಿನವರಾದ 1) ದೊಡ್ಡಬಸಪ್ಪ ತಂದೆ ಹನಮಪ್ಪ ಬರದೇಲಿ 2) ಸಿದ್ದಪ್ಪ ತಂದೆ ಹನಮಪ್ಪ ಗುಡದೂರು ಸಾ: ಇಬ್ಬರು ಸಾ: ಮಾದಪೂರ ಇವರು ನನಗೆ ಮದ್ಯವನ್ನು ಕುಡಿಸಲು ಕೇಳಿದರು ನಾನು ಮದ್ಯ ಕುಡಿಸುವುದಿಲ್ಲ ಅಂತಾ ಇಬ್ಬರಿಗೆ ಹೇಳಿದೆನು ಅವರು ಇಬ್ಬರು ನನ್ನ ಇನೋವಾ ಕಾರಿನ ಚಾವಿ ಮತ್ತು ನನ್ನ ಮೋಬೈಲ್  ತೆಗೆದುಕೊಂಡರು ನಾನು ಚಾವಿ ಮತ್ತು ಮೋಬೈಲ್ ಕೇಳಿದರು ಕೊಡದೇ ಹಾಗೆ ಹೋಗಿರುತ್ತಾರೆ, ದಿನಾಂಕ  5-04-2017 ರಂದು ನನ್ನ ಇನೋವಾ ಕಾರು ರಾತ್ರಿ ವರೆಗೂ ಹುಲಿಗಿಯಲ್ಲಿ ನಿಂತ ಜಾಗೆಯಲ್ಲಿ ನಿಂತಿದ್ದು ದಿನಾಂಕ 06-04-2017 ರಂದು ಬೆಳಿಗ್ಗೆ 10-00 ಗಂಟೆಗೆ ಹುಲಿಗಿಗೆ ಹೋಗಿ ನೋಡಲು ನಾನು ಬಿಟ್ಟ ಜಾಗೆಯಲ್ಲಿ ನನ್ನ ಇನೋವಾ ಕಾರ್ ಇರಲಿಲ್ಲಾ ಹುಲಗಿಯ ಕಲ್ಯಾಣ ಮಂಟಪದ ಹತ್ತಿರ ಇರುವ ನೀರಿನ ಟ್ಯಾಂಕ್ ಹತ್ತಿರ ನಿಂತಿದ್ದು ಹೋಗಿ ನೋಡಲು ನನ್ನ ಕಾರಿನ ಕಿಟಕಿಯ ಬಲಭಾಗದ ಹಿಂದಿನ ಗ್ಲಾಸ್ ಒಡೆದಿದ್ದು ಮತ್ತು ಒಳಗಡೆ ಬಲಗಡೆ ಕುಳಿತುಕೊಳ್ಳುವ ಸೀಟು ಸುಟ್ಟಿದ್ದು ,ಮತ್ತು ಕಂಪನಿಯ ಡಿವೈಜರ್ ಮತ್ತು ಕಾರಿನ ಸ್ಟೇರಿಂಗ್ ಗಡ್ಡೆಯು ಒಡೆದಿದ್ದು ಹಾಗೂ ಬಾನೆಟ್ ಸಹ ಬೆಂಡಾಗಿದ್ದು ಇರುತ್ತದೆ ನನ್ನ ಇನೋವಾ ಕಾರ್ ನ್ನು ಮೇಲ್ಕಂಡ ಇಬ್ಬರು ಸೇರಿ ಲುಕ್ಸಾನ್ ಮಾಡುವ ಉದ್ದೇಶದಿಂದ ಕಾರಿನ ಚಾವಿ ಮತ್ತು ಮೋಬೈಲ್ ತೆಗೆದುಕೊಂಡು ಹೋಗಿ ರಾತ್ರಿ ವೇಳೆಯಲ್ಲಿ ಇನೋವಾ ಕಾರ್ ಗ್ಲಾಸ್ ಒಡೆದು ಮತ್ತು ಸೀಟ್ ನ್ನು ಸುಟ್ಟು ಒಟ್ಟು 2,40,000=00 ರೂ ಗಳಷ್ಟು ಲುಕ್ಸಾನ್ ಮಾಡಿದ್ದು. ಈ ರೀತಿ ನನ್ನ ಕಾರಿನ ಲುಕ್ಸಾನ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ಇನೋವಾ ಕಾರ್ ಶೋ ರೂಂ ಗೆ ತೆಗೆದುಕೊಂಡು ಹೋಗಿ ಕಾರಿನ ಲುಕ್ಸಾನ್ ಬಗ್ಗೆ ಕೋಟೇಷನ್ ಮಾಡಿಸಿ ತಮ್ಮಲ್ಲಿ ಬಂದು ಪಿರ್ಯಾದಿ ಕೊಡಲು ವಿಳಂಬವಾಗಿರುತ್ತದೆ ಅಂತಾ ಮುಂತಾಗಿ ನೀಡದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008