Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, April 28, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 84/2017 ಕಲಂ: 279, 338 ಐ.ಪಿ.ಸಿ.
ಫಿರ್ಯಾದಿ ರಾಮಪ್ಪ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ:27-04-17 ರಂದು ಬೆಳಿಗ್ಗೆ 09-45 ಗಂಟೆಗೆ ಫಿರ್ಯಾದಿದಾರರು ತಮ್ಮ ಮೋಟಾರ ಸೈಕಲ್ ನಂ: ಕೆಎ-35/ವಿ-9707 ನೇದ್ದನ್ನು ಓಡಿಸಿಕೊಂಡು ತಮ್ಮ ಗ್ರಾಮದಿಂದಾ ಕರ್ಕಿಹಳ್ಳಿ ಕಡೆಗೆ ಕುರಿಹಟ್ಟಿಗೆ ಹೋಗಲು ಅಂತಾ ಗದಗ-ಕೊಪ್ಪಳ ಎನ್,ಹೆಚ್-63 ರಸ್ತೆಯ ಕಾವೇರಿ ಪೆಟ್ರೋಲಬಂಕ್ ಸಮೀಪದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಎದುರುಗಡೆ ಕೊಪ್ಪಳದ ಕಡೆಯಿಂದ ಕಾರ್ ನಂ: ಕೆಎ-37/ಎಮ್-4963 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿಗೆ ಎಡಕಾಲ ಪಾದದ ಹತ್ತಿರ ಭಾರಿಗಾಯವಾಗಿದ್ದು ಇರುತ್ತದೆ. ಕಾರಣ ಸದರಿ ಕಾರ್ ಚಾಲಕ ಶಿವಯೋಗಪ್ಪ ಪಟ್ಟೇದ. ಸಾ: ಆರಾಳ ತಾ: ಗಂಗಾವತಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 85/2017 ಕಲಂ: 143,147,148,448,323,324,504,506 ಸಹಿತ 149 ಐ.ಪಿ.ಸಿ.
ಫಿರ್ಯಾದಿ ನಾಗಪ್ಪ ಗ್ವಾಡಿಕಾರ. ಸಾ: ಕಿನ್ನಾಳ ಇವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:27-04-2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಹೆಂಡತಿ, ಮಗನೊಂದಿಗೆ ಮಾತನಾಡುತ್ತಾ ಕುಳಿತಿರುವಾಗ, ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಅತೀಕ್ರಮ ಪ್ರವೇಶ ಮಾಡಿ ತಮ್ಮ ಕೈಗಳಲ್ಲಿ ಕಟ್ಟಿಗೆ, ಕಲ್ಲುಗಳನ್ನು ಹಿಡಿದುಕೊಂಡು ಬಂದು ಮನೆಯೊಳಗೆ ಕುಳಿತಿದ್ದ ಫಿರ್ಯಾದಿಗೆ ಆರೋಪಿ ಹನುಮಪ್ಪ ಇತನು ಏನಲೇ ಸೂಳೆಮಗನೆ ನಮ್ಮ ತಂದೆಯ ಹೆಸರಿನಲ್ಲಿರುವ ಹೊಲವನ್ನು ನಮಗೆ ಬಿಟ್ಟುಕೊಡಲೇ ಅಂತಾ ಜಗಳ ತೆಗೆದು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಫಿರ್ಯಾದಿಯ ಬಲಗಡೆ ಮಲಕಿಕೆ ಮತ್ತು ಬಲಕಣ್ಣಿನ ಕೆಳಗೆ ಮತ್ತು ಬಲಗಡೆ ಪಕ್ಕಡಿಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಪಡಿಸಿದನು. ಆಗ ಅಲ್ಲಿಯೇ ಕುಳಿತಿದ್ದ ಫಿರ್ಯಾದಿ ಹೆಂಡತಿ ರೇಣುಕವ್ವ ಇವಳು ತನ್ನ ಗಂಡನಿಗೆ ಯಾಕೆ ಹೊಡೆಯುತ್ತೀರಿ ಜಮೀನಿನ ಬಗ್ಗೆ ಬೆಳಿಗ್ಗೆ ಹಿರಿಯರೊಂದಿಗೆ ಮಾತನಾಡೊಣ ಅಂತಾ ಹೇಳಿದರು ಅದಕ್ಕೆ ಆರೋಪಿತರಾದ ರಾಮಪ್ಪ ಮತ್ತು ಈರಪ್ಪ ಇವರು ಅದೇನು ಹೇಳುತ್ತೀಯಲೇ ಭೋಸುಡಿ ಸೂಳೆ ಆ ಹೊಲ ನಮ್ಮದು ಅದೇನು ನಮಗೆ ಬುದ್ದಿ ಹೇಳ್ಯಾಕ ಬಂದಿಯಲೇ ಅಂತಾ ಅಂದವರೆ ಅವಳ ಮೈಮೇಲಿದ್ದ ಸೀರೆಯ ಸೆರಗನ್ನು ಹಿಡಿದು ಜಗ್ಗಾಡಿ ಅವಮಾನ ಮಾಡಿ ಮತ್ತು ಅವರು ಕೈಯಿಂದ ಮುಷ್ಟಿಮಾಡಿ ರೇಣುಕಮ್ಮಳ ಬಾಯಿಗೆ ಜೋರಾಗಿ ಗುದ್ದಿ ರಕ್ತಗಾಯ ಮಾಡಿದರು. ಮತ್ತು ಫಿರ್ಯಾದಿಯ ಅಂಗವಿಕಲ ಮಗ ಶರಣಪ್ಪ ಇತನು ತನ್ನ ತಂದೆ-ತಾಯಿಗೆ ಹೊಡೆಯ ಬೇಡಿರಿ ನಿಮ್ಮ ಜಮೀನನ್ನು ನಿಮಗೆ ಕೊಡುತ್ತೇವೆ ಈಗ ನಿಮ್ಮ ಮನೆಗೆ ಹೋಗಿರಿ ಅಂತಾ ಅವರಿಗೆ ಹೇಳಿದನು, ಆಗ ಆರೋಪಿತರಾದ ಕಸ್ತೂರೆವ್ವ, ಲಕ್ಷ್ಮವ್ವ ಮತ್ತು ಸಂತೋಷ ಇವರು ಲೇ ಕುಂಟ ಬೋಸುಡಿ ಮಗನೆ ನಿನಗೆ ಕಾಲು ಸರಿಯಾಗಿಲ್ಲಂದರು ನಮಗೆ ಬುದ್ದಿ ಹೇಳ್ಯಾಕ ಬಂದಾನ ಮಗ ಅಂತಾ ಅಂದವರೆ ಕಸ್ತೂರೆವ್ವ, ಲಕ್ಷ್ಮವ್ವ ಇವರು ಕೈಯಿಂದ ಮೈಕೈಗೆ ಮತ್ತು ಸಂತೋಷ ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಎಡಕಣ್ಣಿನ ಮೇಲೆ , ತಲೆಗೆ ಬಲಗಾಲಿನ ಮೊಣಕಾಲಿಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಮಾಡಿದ್ದು ಅಲ್ಲದೇ ಆರೋಪಿತರು ಅಲ್ಲಿಂದ ಹೋಗುವಾಗ ಇವತ್ತು ಉಳಿದುಕೊಂಡಿರಿ ಭೋಸುಡಿ ಮಕ್ಕಳಾ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 341 307 326 323 392 504 506 ಐ.ಪಿ.ಸಿ.
ದಿನಾಂಕ 27-04-2017 ರಂದು ಮುಂಜಾನೆ 10-15 ಗಂಟೆಗೆ ಫಿರ್ಯಾಧಿದಾರ ಶ್ರೀ ಬಾರೆಪ್ಪ ತಂದೆ ಸಿದ್ದಪ್ಪ ಬಂಗಾರಿ, ವಯಾ 25 ವರ್ಷ ಜಾತಿ ವಾಲ್ಮೀಕಿ, ಉ : ಕೂಲಿಕೆಲಸ ಸಾ : ಹಿರೇಖೇಡಾ ಇವರು ಠಾಣೆಗೆ ಹಾಜರಾಗಿ ತಾವು ಸ್ವಂತಾಕ್ಷರದಿಂದ ಬರೆದ ಲಿಖಿತ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 26-04-2017 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನಾನು ತಾವರಗೇರಾ ಗ್ರಾಮದಲ್ಲಿ ನನ್ನ ತಂಗಿಗೆ ಬುತ್ತಿ ಕೊಟ್ಟು ವಾಪಸ್ ನಮ್ಮೂರಿಗೆ ನಾನು ಮತ್ತು ನನ್ನ ಅಳಿಯ ರಮೇಶ ಈತನೊಂದಿಗೆ ನಮ್ಮ ಸಂಬಂಧಿಕರ ಹೆಚ್.ಎಫ್. ಡಿಲೆಕ್ಸ್ ಮೋಟಾರ ಸೈಕಲ್ ನಂ.ಕೆಎ-37/ಇಬಿ-7655 ರಲ್ಲಿ ನಮ್ಮೂರಿಗೆ ಹೋಗುತ್ತಿದ್ದೇವು. ರಾತ್ರಿ 8-00 ಗಂಟೆಯ ಸುಮಾರಿಗೆ ನಾವು ಕನಕಗಿರಿಯ ನವಲಿ ಸರ್ಕಲ್ ದಲ್ಲಿ ಊಟ ಮಾಡುತ್ತಿದ್ದಾಗ ಆ ಸಮಯದಲ್ಲಿ ಮಲ್ಲಿಗೆವಾಡ ಗ್ರಾಮದ ಹನುಮಂತಪ್ಪ ತಂದೆ ನಾಗಪ್ಪ ನಾಯಕ ಈತನು ನನ್ನ ಹತ್ತಿರ ಕುಡಿದ ಅಮಲಿನಲ್ಲಿ ಬಂದು ಏನಲೇ ಸೂಳೇ ಮಗನೇ ಬಾರೇ ನನ್ನನ್ನು ನಮ್ಮೂರಿಗೆ ಬಿಟ್ಟು ಬಾ ಅಂತಾ ಅನ್ನುತ್ತಾ ಚೀರಾಡುತ್ತಾ ನಮಗೆ ಹೊಡೆಯಲು ಬಂದನು. ನಾವು ಗಾಬರಿಯಾಗಿ ಹನುಮಂತನನ್ನು ಹಿಂದೆ ಕೂಡಿಸಿಕೊಂಡು ನಾವು ಕನಕಗಿರಿ-ನವಲಿ ರಸ್ತೆಯ ಮುಖಾಂತರ ಮಲ್ಲಿಗೆವಾಡ ಗ್ರಾಮಕ್ಕೆ ಹೋಗುವಾಗ ರಾತ್ರಿ 10-30 ಗಂಟೆಯ ಸುಮಾರಿಗೆ ಮಲ್ಲಿಗೆವಾಡ ಸೀಮಾದ ಗಾಳಿ ದುರಗಮ್ಮ ಗುಡಿಯ ಹತ್ತಿರ ನಮ್ಮನ್ನು ನಿಲ್ಲಿಸಿ ಹನುಮಂತಪ್ಪನು ನಮಗೆ ಸರಾಯಿ ಕುಡಿಯಲು ಹಣ ಕೊಡಲೇ ಸೂಳೇ ಮಗನೇ ಅಂತಾ ಅನ್ನುತ್ತಾ ನನ್ನ ಜೇಬಿನಲ್ಲಿದ್ದ ರೂ.200/-ಗಳನ್ನು ಹಣವನ್ನು ಒತ್ತಾಯ ಪೂರ್ವಕವಾಗಿ ಕಸಿದುಕೊಂಡನು. ನನ್ನ ಅಳಿಯ ರಮೇಶನು ಅವನಿಗೆ ಯಾಕೇ ಹಣ ಕಸಿದುಕೊಳ್ಳುತ್ತೀಯಾ ಇವೆಷ್ಟಾ ಅವನ ಹತ್ತಿರ ಖಚರ್ಿಗೆ ಇವೇ ಅಂತಾ ಅವನಿಗೆ ಕೋರಿ ಕೊಂಡನು. ಕೂಡಲೇ ಹನುಮಂತಪ್ಪನು ಸಿಟ್ಟಿಗೆ ಬಂದು ನನಗೇನು ಹೇಳುತ್ತೀಲೇ ಸೂಳೇ ಮಗನೇ ಅಂತಾ ಅನ್ನುತ್ತಾ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಯೇ ಗುಡಿಯಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಬಂದು ನನ್ನ ಅಳಿಯ ರಮೇಶ ಈತನ ತಲೆಗೆ, ಎಡಗೈ ಮೊಣಕೈ ಜೋರಾಗಿ ಹೊಡೆದನು. ಇದರಿಂದ ಅವನಿಗೆ ಜೋರಾಗಿ ರಕ್ತ ಬರ ಹತ್ತಿದ್ದು, ಹಾಗೂ ಎಡಗೈ ಬುಜಕ್ಕೆ, ಬೆನ್ನಿಗೆ ಜೋರಾಗಿ ಹೊಡೆದನು. ಬಿಡಿಸಲು ಹೋದ ನನಗೆ ಎದೆಗೆ ಕಾಲಿನಿಂದ ಜೋರಾಗಿ ಒದ್ದನು. ಮತ್ತು ರಸ್ತೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಕಲ್ಲಿನಿಂದ ನನ್ನ ಮೋ.ಸೈ.ನ ಡೂಮಿಗೆ, ಟ್ಯಾಂಕಿಗೆ. ಸೈಡ್ ಭಾಕ್ಸ್ ಗೆ ಕಲ್ಲಿನಿಂದ ಜಜ್ಜಿ ಲುಕ್ಸಾನ ಮಾಡಿದನು. ಈ ಜಗಳವನ್ನು ನೋಡಿ ಅಲ್ಲಿಯೇ ರಸ್ತೆಯ ಮೇಲೆ ಹೋಗುತ್ತಿದ್ದ ನನ್ನ ಮಾವ ಲಕ್ಷ್ಮಣ ತಂದೆ ವಾಸಪ್ಪ ಬಿಳಿಗುಡ್ಡ, ನನ್ನ ತಂದೆ ಸಿದ್ದಪ್ಪ ತಂದೆ ಮರಿಯಪ್ಪ ಬಂಗಾರಿ ಇವರು ಬಂದು ಜಗಳ ಬಿಡಿಸಿ ಕಳುಹಿಸುವಾಗ ಹನುಮಂತಪ್ಪ ನಾಯಕನು ಈ ಸಲಾ ಉಳಿದಿಯೇಲೇ ಬಾರೆ ಸೂಳೇ ಮಗನೇ ನಾನು ಯಾವಾಗ ಕೇಳುತ್ತಿನೇ ಆವಾಗ ರೊಕ್ಕ ಕೊಡಬೇಕು ಇಲ್ಲದಿದ್ದರೇ ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಅನ್ನುತ್ತಾ ಕಬ್ಬಿಣದ ರಾಡ್ನ್ನು ಅಲ್ಲಿಯೇ ಬಿಸಾಕಿ ಹೋದರು. ಈ ಘಟನೆಯಿಂದ ನನ್ನ ಅಳಿಯ ರಮೇಶನ ತಲೆಗೆ, ಎಡಗೈಗೆ ಭಾರಿ ಪೆಟ್ಟಾಗಿ ಮೂಛರ್ೆ ಬಂದು ನೆಲಕ್ಕೆ ಬಿದ್ದಿದ್ದರಿಂದ ಅವನನ್ನು ಚಿಕಿತ್ಸೆಗಾಗಿ ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಕಾರಣ ಹನುಮಂತಪ್ಪ ತಂದೆ ನಾಗಪ್ಪ ನಾಯಕ ಸಾ : ಮಲ್ಲಿಗೆವಾಡ ಈತನ ಮೇಲೆ ಕೇಸ್ ಮಾಡಲು ವಿನಂತಿ ಅಂತಾ ಕೊಟ್ಟ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008