Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police

Sunday, May 21, 2017

1] ಹನುಮಸಾಗರ  ಪೊಲೀಸ್ ಠಾಣೆ ಗುನ್ನೆ ನಂ. 44/2017 ಕಲಂ: 279, 337 ಐ.ಪಿ.ಸಿ
ದಿನಾಂಕ: 20-05-2017 ರಂದು ಸಾಯಾಂಕಾಲ 18-10 ಗಂಟೆಗೆ ಫಿರ್ಯಾದಿದಾರರಾದ ಬಸವರಾಜ ಕರಿಗಾರ ಸಾ: ಹಿರೇಓತಗೇರಿ, ಹಾ/: ವಜ್ಜಲ್ ರವರು ಠಾಣೆಗ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 19-05-2017 ರಂದು ಹುಬ್ಬಳ್ಳಿಗೆ ಬಾಡಿಗೆ ಹೋಗಿ ವಾಪಸ್ ಇಲಕಲ್ಲಗೆ ಹೋಗುವಾಗ ಹನಮಸಾಗರ ದಾಟಿ 2 ಕಿ.ಮೀ ಅಂತರದಲ್ಲಿ ಇಲಕಲ್ಲ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ ತಮ್ಮ ಟವೇರಾ ಕಾರಿಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು, ಅಪಘಾತದಲ್ಲಿ ಫಿರ್ಯಾದಿಗೆ ಹಾಗೂ ಕಾರಿನಲ್ಲಿ ಕುಳಿತ ಶ್ರೀದೇವಿ ರವರಿಗೆ ಸಾದಾ ಸ್ವರೂಪದ ಗಾಯವಾಗಿದ್ದು, ಟವೇರಾ ಕಾರು ಮುಂದಿನ ಬಲಗಡೆ ಗಾಲಿ, ಬಲಗಡೆ ಬಾನೆಟ್, ಬಲಗಡೆ ಎರಡೂ ಬಾಗಿಲು, ಬಲಗಡೆ ಡ್ರೈವರ್ ಬಾಗಿಲಿನ ಗ್ಲಾಸ್ ಹೊಡೆದು ಹಾನಿಯಾಗಿದ್ದು ಇರುತ್ತದೆ. ಶ್ರೀದೇವಿ ಮನೆಯಲ್ಲಿಯೇ ಉಪಚಾರ ಮಾಡಿಸಿಕೊಂಡಿದ್ದು, ಫಿರ್ಯಾದಿದಾರರು ಇಂದು ತಡವಾಗಿ ಉಪಚಾರ ಮಾಡಿಸಿಕೊಂಡು ಮಾಲೀಕರನ್ನು ವಿಚಾರಿಸಿ ತಡವಾಗಿ ಮಾಲೀಕರೊಂದಿಗೆ ಠಾಣೆಗೆ ಬಂದಿದ್ದು, ಅಪಘಾತಪಡಿಸಿದ ಲಾರಿ ನಂ: ಕೆ.-29/-5151 ನೇದ್ದರ ಚಾಲಕನಾದ ಶರಣಪ್ಪ ತಂದೆ ಬಸಪ್ಪ ಮೇಳಿ ಸಾ: ತಳುವಗೇರಿ ಈತನು ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 110/2017 ಕಲಂ: 454, 457, 380 ಐ.ಪಿ.ಸಿ:

ದಿ:20.05.2017 ರಂದು ರಾತ್ರಿ 09.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗುರುಬಸಪ್ಪ ಪಲ್ಲೇದ, ಮುಖ್ಯೋಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಶಾಂತನಗರ, ಗಿಣಗೇರಿ ಸಾ : ಭಾಗ್ಯನಗೆರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿ: 19.05.2017 ರಂದು ಮಧ್ಯಾನ್ನ 01.30  ಗಂಟೆಯಿಂದ ಇಂದು ದಿ 20.05.2017 ರಂದು ಮಧ್ಯಾನ್ನ 12.45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಗಿಣಗೇರಿ ಸ.ಹಿ.ಪ್ರಾಥಮಿಕ ಶಾಲೆಯ 6 ಮತ್ತು 7 ನೇ ತರಗತಿ ಕೊಠಡಿಗಳ ಬೀಗ ಮುರಿದು ಒಳಗೆ ಹೋಗಿ 7 ನೇ ತರಗತಿ ಕೊಠಡಿಯಲ್ಲಿದ್ದ 1 ಯುಪಿಎಸ್ ಅಂಕಿ-3000/-, 2 ಬ್ಯಾಟರಿ ಅಂಕಿ-10000/- ರೂ ಮತ್ತು 1 ಸ್ಪೀಕರ್ ಸೆಟ್ ಅಂಕಿ-2000/- ಎಲ್ಲಾ ಸೇರಿ  ಒಟ್ಟು ಅಂಕಿ-15000/- ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Saturday, May 20, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ: 279, 304(ಎ) ಐ.ಪಿ.ಸಿ
ದಿನಾಂಕ 19-05-2017 ರಂದು 9-30 ಎ.ಎಂ.ಕ್ಕೆ ಪಿರ್ಯಾದುದಾರರು ಠಾಣೆಗೆ ಬಂದು ಲಿಖಿತ ಪಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 16-05-2017 ರಂದು ಪಿರ್ಯಾದುದಾರರ ಚಿಕ್ಕಮ್ಮ ಇವರು ಹಿರೇಬಗನಾಳ ಗ್ರಾಮಕ್ಕೆ ತಮ್ಮ ಮಗಳನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದು ಮಾತನಾಡಿಸಿಕೊಂಡು ವಾಪಾಸ್ ತಮ್ಮ ಅಳಿಯನಾದ ರವಿ ಕುಮಾರ ಇತನ ಬಜಾಜ್ ಡಿಸ್ಕವರಿ ಹೊಸ ನಂಬರ ಇಲ್ಲದ ಮೋಸೈನಲ್ಲಿ ಬರುತ್ತಿದ್ದಾಗ ಹಿರೆಬಗನಾಳ ಹತ್ತಿರ ಇರುವ ಪೆಟ್ರೊಲ್ ಬಂಕ್ ನಲ್ಲಿ ಪೆಟ್ರೊಲ್ ಹಾಕಿಸಿಕೊಂಡು ಸ್ವಲ್ಪ ಮುಂದೆ ಹೋಗುತ್ತಿರುವಾಗ ಹಿರೆಬಗನಾಳ - ಗಿಣಿಗೇರಾ ರಸ್ತೆಯ ಮೇಲೆ ಮೋ.ಸೈ.ನ್ನು  ಅಳಿಯ ರವಿಕುಮಾರನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋ,ಸೈ.ನ್ನು ಸ್ಕೀಡ್ ಮಾಡಿ ಬಿದ್ದಿದ್ದರಿಂದ ಮೋ.ಸೈ.ನಲ್ಲಿ ಹಿಂದೆ ಕುಳಿತಿದ್ದ ಪಿರ್ಯಾದುದಾರರ ಚಿಕ್ಕಮ್ಮಳಿಗೆ ,ತಲಗೆ ಬಾರಿ ರಕ್ತಗಾಯವಾಗಿದ್ದು ಬೆನ್ನಿಗೆ ಒಳಪೆಟ್ಟಾಗಿರುತ್ತವೆ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 18-05-2017 ರಂದು 6-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ: 87 Karnataka Police Act.

ದಿನಾಂಕ: 19-05-2017 ರಂದು ಸಾಯಾಂಕಾಲ 4-50 ಗಂಟೆಯ ಸುಮಾರಿಗೆ ವಜ್ರಬಂಡಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 8 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 8950/- ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

Friday, May 19, 2017

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 67/2017 ಕಲಂ: 143, 147, 504, 341, 323, 324, 354, 506 ಸಹಿತ 149 ಐ.ಪಿ.ಸಿ

ದಿನಾಂಕ: 18-05-2017 ರಂದು ಬೆಳಗ್ಗೆ 11-00 ಗಂಟೆಗೆ ಫಿಯರ್ಾದಿದಾರು ಠಾಣೆಗೆ ಹಾಜರಾಗಿ, ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶವೆನೆಂದರೆ, ಫಿರ್ಯಾದಿದಾರರು ಹಾಗೂ ಆರೋಪಿರಿಗೆ ಮನೆಯ ಕಟ್ಟುವ ಜಾಗೆಯ ಸಂಭಂದ ಜಗಳ ಇದ್ದು, ಇದೇ ವಿಷಯವಾಗಿ ನಿನ್ನೆ ದಿನಾಂಕ: 17-05-2017 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು, ಅವರ ತಂದೆ ತಾಯಿಯೊಂದಿಗೆ ತಮ್ಮ ಮನೆಯ ಮುಂದೆ ಕುಳಿತುಕೊಂಡಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು, ಅವಾಚ್ಯ ಶಬ್ದಗಳಿಂದ ಬೈದು, ಫಿಯರ್ಾದಿದಾರರಿಗೆ ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಇಟ್ಟಿಗೆ ಯಿಂದ ತಲೆಗೆ ಬೆನ್ನಿಗೆ ಕೈಗೆ ಹೊಡೆದು ಪೆಟ್ಟು ಮಾಡಿದ್ದು, ಅಲ್ಲದೇ ಫಿಯರ್ಾದಿದಾರರ ತಂದೆಗೂ ಸಹ ಕೈ ಯಿಂದ ಮೈ ಕೈಗೆ ಹೊಡೆ ಬಡೆ ಮಾಡಿದ್ದು, ಇದನ್ನು ನೋಡಿ ಬಿಡಿಸಲು ಬಂದ ಫಿಯರ್ಾದಿದಾರರ ತಾಯಿ ಫಕೀರಮ್ಮಳಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು, ಅವಾಚ್ಯ ಶಬ್ದಗಳಿಂದ ಬೈದು, ಮೈ ಕೈ ಮುಟ್ಟಿ ಎಳೆದಾಡಿ ಕೈಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ. ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Thursday, May 18, 2017

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 53/2017 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 16-05-2017 ರಂದು ಫೀರ್ಯಾಧಿದಾರಳು ತನ್ನ ಗಂಡ 1] ಖಾಸಿಂ ಅಲಿ ಮತ್ತು ಮಕ್ಕಳಾದ 2] ಸಮೀರ, 3] ತನ್ವೀರ್ ಹಾಗೂ ತನ್ನ ತಾಯಿ 4] ಗೌಸಿಯಾ &  ತನ್ನ ಅಕ್ಕ 5] ಜರಿನಾ, ಅಕ್ಕನ ಮಕ್ಕಳಾದ 6] ಶಕೀಯಾ, 7] ನಾಜು @ ನಾಜ್ಮೀನ್, 8] ನಿಜಾಮ ಇವರೊಂದಿಗೆ ಮುನಿರಾಬಾದದಿಂದ ಲಕ್ಷ್ಮೇಶ್ವರದ ದೂದನಾನ ದರ್ಗಾಕ್ಕೆ ಆಟೋ ನಂ ಕೆ.ಎ 37 ಎ 4175 ನೇದ್ದರಲ್ಲಿ ಹೋಗಿ ದಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ ಲಕ್ಷ್ಮೇಶ್ವರದಿಂದ ದಿನಾಂಕ:17-05-2017 ರಂದು ಸಾಯಂಕಾಲ 07-00 ಘಂಟೆ ಸುಮಾರಿಗೆ ಬಿಟ್ಟು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ತಳಕಲ್ಲ ಸೀಮಾದ ಮುರಾರ್ಜಿ ಶಾಲೆಯ ಹತ್ತಿರ ನಮ್ಮ ಆಟೋದ ಹಿಂದನ ಎಡಗಡೆ ಗಾಲಿ ಪಂಕ್ಚರ ಆಗಾದ ರಸ್ತೆ ಎಡ ಮಗ್ಗಲು ನಿಲ್ಲಿಸಿ ಸಿಗ್ನಲ್ ಲೈಟ್ ಹಾಕಿ, ಸದರ ಆಟೋದ ಬಲಗಡೆಯಿಂದ ಹಿಂದಿನ ಗಾಲಿ ಹತ್ತಿರ ಇರುವ ಟೊಲಬಾಕ್ಸದಿಂದ ಗಾಲಿ ಬಿಚ್ಚಲು ಸಾಮಾನು ತೆಗೆದುಕೊಳ್ಳುತ್ತಿರುವಾಗ  ಫಿರ್ಯಾಧಿದಾರಳ ಗಂಡ ಖಾಸಿಂ ಅಲಿ & ಮಗ ಸಮೀರ ಇವರಿಗೆ ಕೊಪ್ಪಳ ಕಡೆಯಿಂದ ಗದಗ ಕಡೆಗೆ ಹೋರಟ ಲಾರಿ ನಂಬರ್ ಕೆ.ಎ-22 ಸಿ-2370 ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷ್ಯತನದಿಂದ ನೆಡಸಿ ಟಕ್ಕರ ಕೊಟ್ಟು ನನ್ನ ಗಂಡ ಖಾಸಿಂ ಅಲಿ & ಮಗ ಸಮೀರ ಇವರಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಸಾಯುವಂತೆ ಮಾಡಿ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 104/2017 ಕಲಂ: 87 Karnataka Police Act.
ದಿ : 17.05.2017 ರಂದು 03.30 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದ ಪಾಂಡುರಂಗ ಗುಡಿಯ ಹಿಂದೆ ಹಳ್ಳದ ಪಕ್ಕ ಸಾರ್ವಜನಿಕ ಸ್ಥಳದಲ್ಲಿ 09 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿ.ಪಿಐ ಸಾಹೇಬರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 08 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ, 2200=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ: 87 Karnataka Police Act.
ದಿ : 17.05.2017 ರಂದು 05.40 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮಂಗಳಾಪುರ ಗ್ರಾಮದ ಖಾಸಿಂಅಲಿ ಕೋಳಿ ಫಾರಂ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 06 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಡಿ.ಎಸ್.ಪಿ  ಸಾಹೇಬರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, 2 ಜನ ಓಡಿ ಹೋಗಿದ್ದು  ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ, 2820=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ: 279, 337, 338 ಐ.ಪಿ.ಸಿ..

ದಿನಾಂಕ:17-05-2017 ರಂದು ಸಾಯಂಕಾಲ 5-45 ಗಂಟೆಯ ಸುಮಾರಿಗೆ ಆರೋಪಿ ಶರಣಪ್ಪ ತಂದೆ ಗುರುಪಾದಪ್ಪ ಗುರಿಕಾರ  ಟಾಟಾ ಎ.ಸಿ.ಇ ವಾಹನ ನಂ; ಕೆ.ಎ-37/ಎ-7239 ನೇದ್ದರ ಚಾಲಕ ಸಾ|| ಹಿರೇಮ್ಯಾಗೇರಿ ಇತನು ತನ್ನ ಟಾಟಾ ಎ.ಸಿ.ಇ ವಾಹನ ಕೆ.ಎ-37/ಎ-7239 ನೇದ್ದನ್ನು ಸಂಕನೂರು-ಸೂಡಿ ರಸ್ತೆಯ ಮುಕ್ತುಂಸಾಬ ಇಟಗಿ ರವರ ಹೋಲದ ಹತ್ತಿರ ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೊರಟಿದ್ದ ಫಿರ್ಯಾದಿ ಹನಮಂತಪ್ಪ ತಂದೆ ಪರಸಪ್ಪ ಪೂಜಾರ ವ;28 ವರ್ಷ ಜಾ;ವಾಲ್ಮೀಕಿ ಉ;ಕೆ.ಎ.-26/ಎ-6169 ನೇದ್ದರ ಚಾಲಕ ಸಾ|| ಸೂಡಿ ಇತಅಪೇ ಪ್ಯಾಸೇಂಜರ ವಾಹನ ನಂ; ಕೆ.ಎ.-26/ಎ-6169 ನೇದ್ದಕ್ಕೆ ಟಕ್ಕರಕೊಟ್ಟಿದ್ದರಿಂದ ಫಿರ್ಯಾದಿದಾರನ ವಾಹನದಲ್ಲಿದ್ದ 7 ಜನರಿಗೆ ಹಾಗೂ ಪಿರ್ಯಾದಿದಾರನಿಗೆ ಭಾರಿ ಮತ್ತು ಸಾದ ಸ್ವರೂಪದ ರಕ್ತಗಾಯಗಳಾಗಿದ್ದು  ಇರುತ್ತದೆ. ಕಾರಣ ಸದರ ಟಾಟಾ ಎ.ಸಿ.ಇ ವಾಹನ ಕೆ.ಎ-37/ಎ-7239 ನೇದ್ದರ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, May 17, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 83/2017 ಕಲಂ: 78(3) Karnataka Police Act.
ದಿನಾಂಕ:-15-05-2017 ರಂದು ರಾತ್ರಿ 8-45 ಗಂಟೆಗೆ ಮರ್ಲಾನಹಳ್ಳಿ ಗ್ರಾಮದ ಗಂಗಾವತಿ ಕಾರಟಗಿ ಮುಖ್ಯ ರಸ್ತೆಯ ಪಕ್ಕದ ಎಕ್ಸಿಸ್ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ ಧೀಪಕ್ ಆರ್ ಬೂಸರಡ್ಡಿ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತರವರು ಮತ್ತು ಕಾರಟಗಿ ಠಾಣೆಯ ಸಿಬ್ಬಂದಿಯವರು ದಾಳಿ ಮಾಡಿ ಹಿಡಿಯಲು 4 ಜನ  ಆರೋಪಿತರು ಸಿಕ್ಕಿ ಬಿದ್ದಿದ್ದು, ಆರೋಪಿತರಿಂದ ರೂ. 12500=00 ಗಳನ್ನು ಹಾಗೂ 6 ಮೋಬೈಲ್ ಫೊನ್ ಮತ್ತು ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಆರೋಪಿತರಿಗೆ ಮಟ್ಕಾ ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ  ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 1 ಇತನು ತಾವೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾರೆ ಅಂತಾ ಆರೋಪಿತರ ಸಮೇತ ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ: 304(ಎ) ಐ.ಪಿ.ಸಿ:.
ದಿನಾಂಕ: 14-05-2017 ರಂದು ಬೆಳಗಿನ ಜಾವ 04 ಗಂಟೆ ಸುಮಾರಿಗೆ ಆರೋಪಿ ನಂ. 01, 02 ನೇದವರು ಮೃತನಿಗೆ ತಮ್ಮ ಟ್ರ್ಯಾಕ್ಟರ್‍ ದಲ್ಲಿ ಉಸುಗು ತುಂಬುವ ಕೂಲಿಕೆಲಸಕ್ಕಾಗಿ ಯಡಿಯಾಪುರ ಸೀಮಾದ ಆರೋಪಿ ನಂ. 03 ನೇದವನ ಜಮೀನಿನಲ್ಲಿ ಹೋಗಿದ್ದು ಅದೆ. ಸದರಿ ಆರೋಪಿತರು ಮೃತನು ಉಸುಗು ತುಂಬುವ ಕಾಲಕ್ಕೆ ಯಾವುದೇ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿರುವದರಿಂದ ಮುಂಜಾನೆ 05 ಗಂಟೆ ಸುಮಾರಿಗೆ ಉಸುಗು & ಮಣ್ಣಿನ ಪಡಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ: 420 ಸಹಿತ 34 ಐ.ಪಿ.ಸಿ:.

ದಿನಾಂಕ 16-05-2015 ರಂದು ಮುಂಜಾನೆ 11-30  ಗಂಟೆಯ ಸುಮಾರಿಗೆ  ಒಬ್ಬ ಅಂ. 24 ರಿಂದ 26 ವರ್ಷ ವಯಸ್ಸಿನ ಹಾಗೂ  ಒಬ್ಬ ಅಂ.35 ರಿಂದ 38 ವರ್ಷ ವಯಸ್ಸಿನ ಇಬ್ಬರೂ ವ್ಯಕ್ತಿಗಳು  ಗಂಗಾವತಿ ನಗರದ ಹಿರೇ ಜಂತಕಲ್ ನಲ್ಲಿರುವ  ಫಿರ್ಯಾದಿದಾರರ  ಮನೆಗೆ ಬಂದು ಬೆಳ್ಳಿ ಮತ್ತು ಬಂಗಾರದ ಸಾಮಾನುಗಳನ್ನು ತೊಳೆದುಕೊಡುವುದಾಗಿ ಹೇಳಿ ಮೊದಲಿಗೆ ತಾಮ್ರದ ಪಾತ್ರೆಯನ್ನು ತೊಳೆದುಕೊಟ್ಟು ನಂತರ ಬಂಗಾರದ ಆಭರಣಗಳನ್ನು ತೊಳೆದು ಕೊಡುವ ನೆಪದಲ್ಲಿ ಪಿರ್ಯಾಧಿದಾರರ ತಾಯಿಯ 1] 60 ಗ್ರಾಂ ತೂಕದ 06 ಬಂಗಾರದ ಬಳೆಗಳು, ಅಂದಾಜು ಕಿಂ 1,50,000-00 ರೂ (02) 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಅಂ.ಕಿ.ರೂ. 60,000-00. ಪಿರ್ಯಾಧಿದಾರರ ತಂಗಿಯ (02) ಅಂ. 20 ಗ್ರಾಂ ತೂಕದ 02 ಬಂಗಾರದ ಬಳೆಗಳು ಅಂ.ಕಿ.ರೂ. 35,000-00 ಹೀಗೆ ಒಟ್ಟು 120 ಗ್ರಾಂ ತೂಕದ ಒಟ್ಟು ಅಂ.ಕಿ.ರೂ. 2,45,000-00 ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Tuesday, May 16, 2017

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 50/2017 ಕಲಂ: 379  IPC.

ದಿನಾಂಕ :15-05-2017 ರಂದು ಬೆಳಗಿನ ಜಾವ 0300 ಗಂಟೆಯ ಸುಮಾರಿಗೆ ಯಾರೋ ಅಪರಿಚಿತ ಕಳ್ಳರು ಪಿರ್ಯಾದಿದಾರರ ಮನೆಯ ಮುಂದಿನ ಚಪ್ಪರದಲ್ಲಿ ಕಟ್ಟಿದ 3 ಟೆಗರು ಮರಿಗಳು .ಕಿ. 20,000=00 ರೂಪಾಯಿ ಬೆಲೆ ಬಾಳುವುಗಳನ್ನು ಕಳ್ಳತನ ಮಾಡಿಕೊಂಡು ಒಂದು ಬಿಳಿ ಬಣ್ಣದ ಬುಲೋರೋ ಗೂಡ್ಸ ವಾಹನದಲ್ಲಿ ಹಾಕಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಸದರಿ ಕಳ್ಳರನ್ನು ಮತ್ತು ಕಳುವಾದ ಟೆಗರು ಮರಿಗಳನ್ನು ಮತ್ತು ವಾಹನವನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ ಪ್ರಕರಣದ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

 
Will Smith Visitors
Since 01/02/2008