Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, July 31, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 202/2017 ಕಲಂ. 279, 337 ಐ.ಪಿ.ಸಿ:.
ದಿನಾಂಕ 29-07-2017 ರಂದು 3-30 ಪಿ.ಎಂ.ಸುಮಾರಿಗೆ ಪಿರ್ಯಾದುದಾರರು ತಮ್ಮ ಲಾರಿ ನಂ.ಕೆ.ಎ.11/ ಎ-6789 ನೇದ್ದರಲ್ಲಿ ಬೂದಿ ಲೋಡಮಾಡಿಕೊಂಡು ಕೊಪ್ಪಳ - ಗಂಗಾವತಿ ರಸ್ತೆಯ ಮೇಲೆ ಹೋಗುತ್ತಿರುವಾಗ ಮಳೆ ಜೋರಾಗಿ ಬರುತ್ತಿದ್ದರಿಂದ ನಿಧಾನವಾಗಿ ಹೋಗುತ್ತಿರುವಾಗ ಲಾರಿಯ ಹಿಂದಿನಿಂದ ಕಾರ ನಂ ಕೆ.ಎ.37/ಎಂ 8577 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಬಾಗಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಕಾರಿನಲ್ಲಿದ್ದವರಿಗೆ ಗಾಯ ಪೆಟ್ಟುಗಳಾಗಿರುತ್ತವೆ. ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.   
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ. 32, 34 ಅಬಕಾರಿ ಕಾಯ್ದೆ:
ದಿನಾಂಕ: 30-07-2017 ರಂದು ಮುಂಜಾನೆ 8-30 ಗಂಟೆಗೆ ಠಾಣೆಯಲ್ಲಿದ್ದಾಗ ಗಡಚಿಂತಿ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-11, ಮಪಿ.ಸಿ-211, ರವರೊಂದಿಗೆ ಗಡಚಿಂತಿ ಗ್ರಾಮಕ್ಕೆ ತಲುಪಿ ಅಲ್ಲಿ ಮಶೀದಿ ಹತ್ತಿರ ಮುಂಜಾನೆ 9-20 ಗಂಟೆಗೆ ತಲುಪಿ ಮುಂಜಾನೆ 9-25 ದಾಳಿಮಾಡಿದಾಗ ಯಲ್ಲವ್ವ ಗಂಡ ಗಂಗಪ್ಪ ದಂಡಿನ ಸಾ: ಗಡಚಿಂತಿ ಇವರ ಹತ್ತಿರ 90 ml HAYWARDS CHEERS WHISKY ಟೆಟ್ರಾ ಪಾಕೇಟಗಳು ಒಟ್ಟು 52 ಪಾಕೇಟಗಳು ಪ್ರತಿಯೊಂದಕ್ಕೆ 28-13 ರೂಪಾಯಿಗಳಂತೆ ಒಟ್ಟು 1462-76 ಹಾಗೂ ನಗದು ಹಣ 290-00  ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಮುಂಜಾನೆ 9-25 ಗಂಟೆಯಿಂದ ಮುಂಜಾನೆ 10-50 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತಳು ತನ್ನ ಲಾಬಕ್ಕೋಸ್ಕರ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಸದರಿಯವಳನ್ನು ಮಹಿಳಾ ಸಿಬ್ಬಂದಿಯೊಂದಿಗೆ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 84/2017 ಕಲಂ. 87 Karnataka Police Act.

ದಿನಾಂಕ:30-07-2017 ರಂದು ಮದ್ಯಾಹ್ನ 4-00 ಗಂಟೆ ಸುಮಾರಿಗೆ ಮಸಬಹಂಚಿನಾಳ ಗ್ರಾಮದ ಗ್ರಾ.ಪಂ. ಮಾರಾಟ ಮಳಿಗೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ. ರವರು ಸಿಬ್ಬಂದಿಯೊಂದಿಗೆ ಅವರ ಮೇಲೆ ದಾಳಿ ಮಾಡಿ ಆರೋಪಿತರಿಂದ 3200=00 ರೂ.ಗಳನ್ನು ಹಾಗೂ ಇಸ್ಪೇಟ್ ಜೂಜಾಟದ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008