Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 14, 2017

1]  ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 277/2017 ಕಲಂ: 32, 34  Karnataka Excise Act.
ದಿನಾಂಕ:- 13-09-2017 ರಂದು ಸಂಜೆ ಶ್ರೀ ಪ್ರಕಾಶ ಮಾಳಿ. ಪಿ.ಎಸ್.. ರವರು ಜಂಗಮರ ಕಲ್ಗುಡಿ ಹತ್ತಿರ ಇರುವಾಗ ಹೊಸಕೇರಾ ಡಗ್ಗಿ ಗ್ರಾಮದ ಹಣವಾಳ ರಸ್ತೆಯ ಪಕ್ಕದ ನಾಲಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲು ರಸ್ತೆಯ ಪಕ್ಕದ ನಾಲಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೀದಿ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿಯು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಇದ್ದ ಮಧ್ಯದ ಪಾಕೇಟಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಕೂಡಲೇ ಸದರಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದವನು ಸಿಕ್ಕಿಬಿದ್ದಿದ್ದು, ವಿಚಾರಿಸಲು ಅವನು ತನ್ನ ಹೆಸರು ಯಮನೂರಪ್ಪ ತಂದೆ ದುರುಗಪ್ಪ ಕಕ್ಕರಗೋಳ, ವಯಸ್ಸು 31 ವರ್ಷ, ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಮಧ್ಯದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ ಅದರಲ್ಲಿ  1] Original Choise 90 ml. 70 ಟೆಟ್ರಾ ಪಾಕೀಟ್ ಗಳು (ಪ್ರತಿಯೊಂದರ ಬೆಲೆ ರೂ. 28.13) ಒಟ್ಟು 6300 ml.  ಅಂ.ಕಿ. ರೂ. 1,969.1 ಇರುತ್ತದೆಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ ರೂ. 150-00 ಗಳು ಸಿಕ್ಕವು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 278/2017 ಕಲಂ: 32, 34  Karnataka Excise Act.
ದಿನಾಂಕ:- 13-09-2017 ರಂದು ಸಂಜೆ ಸಿಂಗನಾಳ ಗ್ರಾಮದಲ್ಲಿ  ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಶ್ರೀ ಪ್ರಕಾಶ ಮಾಳಿ. ಪಿ.ಎಸ್.. ರವರಿಗೆ ಬಂದ ಮೇರೆಗೆ ಅಧಿಕಾರಿ/ಸಿಬ್ಬಂದಿಯವರನ್ನು ಕರೆದುಕೊಂಡು ಸಂಜೆ 6:30 ಗಂಟೆಗೆ ಹೊರಟು ಸಿಂಗನಾಳ ಗ್ರಾಮದ ಶರಣಬಸವೇಶ್ವರ ಗುಡಿಯ ಹತ್ತಿರ ಹೋಗಿ ವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲು ಒಂದು ಕಪಾಟಿನ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಬೀದಿ ಲೈಟಿನ ಬೆಳಕಿನಲ್ಲಿ ಒಬ್ಬ ಹೆಣ್ಣುಮಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವಳ ಹತ್ತಿರ ಇದ್ದ ಮಧ್ಯದ ಪಾಕೇಟಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಕೂಡಲೇ ಸದರಿ ಮಧ್ಯ ಮಾರಾಟ ಮಾಡುತ್ತಿದ್ದವಳ ಮೇಲೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದವಳನ್ನು ಮ.ಎ.ಎಸ್.ಐ. ರವರು ಹಿಡಿದಿದ್ದು,  ವಿಚಾರಿಸಲು ಅವಳು ತನ್ನ ಹೆಸರು  ಲಕ್ಷ್ಮವ್ವ ಗಂಡ ದುರಗಪ್ಪ, ತೆಮ್ಮಿನಾಳ, ವಯಸ್ಸು 48 ವರ್ಷ, ಸಾ: 2ನೇ ವಾರ್ಡ, ದುರ್ಗಾ ಕ್ಯಾಂಪ್, ಸಿಂಗನಾಳ ತಾ: ಗಂಗಾವತಿ  ಜಿ-. ಕೊಪ್ಪಳ ಅಂತಾ ತಿಳಿಸಿದಳು ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಳು. ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಮಧ್ಯದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ ಅದರಲ್ಲಿ  1] Old Tavern 180 ml. 18 ಟೆಟ್ರಾ ಪಾಕೀಟ್ ಗಳು (ಪ್ರತಿಯೊಂದರ ಬೆಲೆ ರೂ. 68.56) ಅಂ.ಕಿ. ರೂ. 1,234.08 [2] Original Choise 180 ml. 08 ಟೆಟ್ರಾ ಪಾಕೀಟ್ ಗಳು (ಪ್ರತಿಯೊಂದರ ಬೆಲೆ ರೂ. 56.27) ಅಂ.ಕಿ. ರೂ. 450.16 ಗಳು [3] Original Choise 90 ml. 242 ಟೆಟ್ರಾ ಪಾಕೀಟ್ ಗಳು (ಪ್ರತಿಯೊಂದರ ಬೆಲೆ ರೂ. 28.13) ಅಂ.ಕಿ. ರೂ. 6,807.46 ಗಳು ಈ ಪ್ರಕಾರ ಒಟ್ಟು 26,280 ml.  ಅಂ.ಕಿ. ರೂ. 8,491-70 ಇರುತ್ತದೆಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ ರೂ. 140-00 ಗಳು ಸಿಕ್ಕವು. ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 257/2017 ಕಲಂ: 279, 337, 338 ಐ.ಪಿ.ಸಿ:

ದಿನಾಂಕ : 13-09-2017 ರಂದು ಮದ್ಯಾಹ್ನ 1-30 ಗಂಟೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಅಯ್ಯಪ್ಪ ಕಮತರ ಸಾ: ಗಾಂಧಿನಗರ ಕುಷ್ಟಗಿ ರವರ ಹೇಳಿಕೆ ಪಡೆದುಕೊಂಡು ವಾಪಾಸ್ ಸಾಯಂಕಾಲ 4-30 ಗಂಟೆಗೆ ಬಂದಿದ್ದು ಸಾರಾಂಶವೆನೆಂದರೆ, ಪಿರ್ಯಾದಿಯು ಇಂದು ದಿನಾಂಕ :13-09-2017 ರಂದು ಮದ್ಯಾಹ್ನ 1-20 ಗಂಟೆಯ ಸುಮಾರಿಗೆ ಗಜೇಂದ್ರಗಡ ರಸ್ತೆಯಲ್ಲಿರುವ ಅವರ ಹೊಲಕ್ಕೆ ತನ್ನ ಟಿವಿಎಸ್ ಎಕ್ಸ ಎಲ್ ಸೂಪರ್ ಮೊ.ಸೈ ನಂ : ಕೆ.-26/ಕೆ-8230 ನೇದ್ದನ್ನು ರಸ್ತೆಯ ಪಕ್ಕದಲ್ಲಿ ನಡೆಸಿಕೊಂಡು ಹೋಗುತ್ತಿರುವಾಗ ಮೈನೂದ್ದಿನ್ ಮುಲ್ಲಾ ರವರ ಹೊಲದ ಹತ್ತಿರ ಹಿಂದಿನಿಂದ ಮೊ.ಸೈ ನಂ : ಕೆ.-37/ವಾಯ್-1136  ನೇದ್ದರ ಸವಾರನು ತನ್ನ ಮೋ.ಸೈ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ ಮಾಡಿದ್ದರಿಂದ ಫಿರ್ಯಾದಿ ಅಯ್ಯಪ್ಪ ಕಮತರ ಹಾಗೂ ಆರೋಪಿತನಾದ ನಾಗರಾಜ ಗೊಂದಳೆ ಇತನಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯವಾಗಿರುತ್ತವೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008