Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 15, 2017

1] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 230/2017 ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 14.10.2017 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ಹನುಮೇಶ ಎಲಿಗಾರ ಸಾ: ಬಿ.ಹೊಸಳ್ಳಿ ತಾ: ಕೊಪ್ಪಳ ನನ್ನ ಕಾರನ್ನು ತೆಗೆದುಕೊಂಡು ಎನ್.ಹೆಚ್-63 ರಸ್ತೆ ಹಾಲವತರ್ತಿ ಕ್ರಾಸ ಹತ್ತಿರ ಗಿಣಿಗೇರಾ ಕಡೆಗೆ ಹೋಗುತ್ತಿರುವಾಗ ನನ್ನ ಕಾರ ಹಿಂದಿನಿಂದ ಅಂದರೆ ಕೊಪ್ಪಳ ಕಡೆಯಿಂದ ಹೊಸಪೇಟೆ ಕಡೆಗೆ ಒಬ್ಬ ಮೋ.ಸೈ ಸವಾರನು ತನ್ನ ಮೋ.ಸೈ ನೇದ್ದರನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ನನ್ನ ಕಾರಿಗೆ ಓವರಟೇಕ ಮಾಡಿಕೊಂಡು ಮುಂದಕ್ಕೆ ಹೋದನು ನಂತರ ನಾನು ದೂರದಿಂದ ರಸ್ತೆಯ ಮೇಲೆ ಗಮನಿಸಲು ನನ್ನ ಕಾರಿನ ಮುಂದೆ ಒಬ್ಬ ಟ್ರ್ಯಾಕ್ಟರ ಚಾಲಕನು ರಸ್ತೆಯ ಮೇಲೆ ನಿಂತುಕೊಂಡಿದ್ದು ಒಮ್ಮಿದೊಮ್ಮಲೇ ತನ್ನ ಹಿಂದೆ ಬರುವ ವಾಹನಗಳನ್ನು ಗಮನಿಸದೇ ಮತ್ತು ಯಾವುದೇ ಸಿಗ್ನನಲ್ ಮತ್ತು ಇಂಡಿಕೇಟರ ಹಾಕದೇ ಒಮ್ಮೇಲೆ ರಸ್ತೆಯ ಮೇಲೆ ಜೋರಾಗಿ ಅಲಕ್ಷತನದಿಂದ ತೆಗೆದುಕೊಂಡಿದ್ದು ಇದನ್ನು ಗಮನಿಸದ ನನ್ನ ಕಾರನ್ನು ಓವರಟೇಕ್ ಮಾಡಿಕೊಂಡು ಮುಂದೆ ಹೋಗಿದ್ದ ಮೋ.ಸೈ ಸವಾರನು ಸದರಿ ಟ್ರ್ಯಾಕ್ಟನ ಟ್ರ್ಯಾಲಿಗೆ ಜೋರಾಗಿ ಟಕ್ಕರಕೊಟ್ಟು ಅಪಘಾತ ಮಾಡಿ ಮೋ.ಸೈ ಮೇಲಿಂದ ಕೆಳಗೆ ಬಿದ್ದನು. ಇದನ್ನು ಗಮನಿಸಿದ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ನಿಲ್ಲಿಸಿದೇ ಒಮ್ಮೇಲೆ ಮತ್ತೆ ಎಡಕ್ಕೆ ತೆಗೆದುಕೊಂಡಿದ್ದರಿಂದ ಟ್ರ್ಯಾಕ್ರನ ಟ್ರ್ಯಾಲಿ ಎಡಕ್ಕೆ ಪಲ್ಟಿಯಾಯಿತು, ಇದನ್ನು ಗಮನಿಸಿದ ನಾನು ಕೂಡಲೇ ನನ್ನ ಕಾರನ್ನು ನಿಲ್ಲಿಸಿ ಹೋಗಿ ನೋಡಲು ಮೋ.ಸೈ ಸವಾರಿಗೆ ತಲೆಗೆ, ಬಲಗೈಗೆ ಭಾರಿ ರಕ್ತಗಾಯ, ಒಳಪೆಟ್ಟಾಗಿತ್ತು ಮತ್ತು ಎರಡು ಕಾಲುಗಳಿಗೆ ತೆರಚಿದ ರಕ್ತಗಾಯಗಳಾಗಿದ್ದವು. ನಂತರ ನಾನು ಗಾಯಾಳುವನ್ನು ಮಾತನಾಡಿಸಲು ತನ್ನ ಹೆಸರು ಬಾಬು ತಂದೆ ಬಾಲಕೃಷ್ಣ ಸಾ: ಮುನಿರಾಬಾದ ಅಂತಾ ತಿಳಿಸಿದನು ನಂತರ ಆತನ ಮೋ.ಸೈ ನಂ: ನೋಡಲು ಕೆ.ಎ-37/ಯು-9952 ಅಂತಾ ಇತ್ತು, ನಂತರ ಟ್ರ್ಯಾಕ್ಟರ ನಂಬರ ನೋಡಲು ಕೆ.ಎ-37/ಟಿ.ಬಿ-2724, ಟ್ರ್ಯಾಲಿ ನಂ: ಕೆ.ಎ-37/ಟಿ.ಬಿ-2725 ಅಂತಾ ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 286/2017 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ  

ದಿನಾಂಕ: 14-10-2017 ರಂದು ಮುಂಜಾನೆ 10-00 ಗಂಟೆಗೆ ಎ.ಎಸ್.ಐ. ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಗೂ ಆರೋಪಿತನನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ, ಹಿರೇಮನ್ನಾಪೂರು ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಲೈಸನ್ಸ ವಗೈರಾ ಹೊಂದಿರದೇ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಒಬ್ಬ ವ್ಯಕ್ತಿಯನ್ನು ಹಾಗೂ  ಅವನಿಂದ ದೊರೆತ  90 ಎಂ.ಎಲ್. ನ ಒಟ್ಟು 80 ಹೈವಾರ್ಡ್ಸ  ಮದ್ಯದ ಟೆಟ್ರಾಪ್ಯಾಕ್ ಅಂ.ಕಿ. 2250=40 ರೂ, ಮತ್ತು ನಗದು ಹಣ 150=00 ರೂ. ಗಳನ್ನು ಜಪ್ತು ಮಾಡಿಕೊಂಡು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008