Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow us on FACEBOOK also type
Koppal District Police

Wednesday, March 22, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 44/2017 ಕಲಂ: 87 Karnataka Police Act.
ದಿನಾಂಕ:-21-03-2017 ರಂದು ರಾತ್ರಿ 08-45 ಗಂಟೆಗೆ ಮಾನ್ಯ ಎ.ಎಎಸ್.ಐ ಮಲ್ಲಪ್ಪ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 21-03-2017 ರಂದು ಸಾಯಂಕಾಲ 6-30  ಗಂಟೆಯ ಸುಮಾರಿಗೆ ಬೇವಿನಾಳ ಗ್ರಾಮದ ಲಕ್ಷ್ಮಿ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ .ಎಸ್.ಐ ಮಲ್ಲಪ್ಪ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6 ಜನರು ತಮ್ಮ ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿದ್ದು ಇಬ್ಬರು ಸಿಕ್ಕಿಬಿದ್ದಿದ್ದು,. ಸಿಕ್ಕಿ ಬಿದ್ದ ಆರೋಪಿತಕಡೆಯಿಂದ ಹಾಗೂ ಖಣದಲ್ಲಿ ಸೇರಿ ರೂ. 4150=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಮತ್ತು ಆರೋಪಿತರು  ಇಸ್ಪೀಟ್ ಜೂಜಾಟಕ್ಕೆ ತಂದಿದ್ದ 8 ಮೋಟಾರ್ ಸೈಕಲ್ ಗಳನ್ನು  ಜಪ್ತ ಮಾಡಿಕೊಂಡಿದ್ದು ಅಂತಾ ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 32/2017 ಕಲಂ. 457, 380 ಐ.ಪಿ.ಸಿ:.

ದಿನಾಂಕ: 21-03-2017 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಶಾಂತಾರಾಮ್ ತಂದೆ ಡಾ: ಲಕ್ಷ್ಮಣರಾವ್ ಕಲಾಲ್ ವಯಾ: 52 ವರ್ಷ ಜಾ: ಕಾಟೀಕ್ ಉ: ಮೆಡಿಕಲ್ ಶಾಪ್ ಸಾ: ರಾಘವೇಂದ್ರ ಮಠದ ಹತ್ತಿರ ಕೊಪ್ಪಳ ರವರು ಫಿರ್ಯಾದಿಯನ್ನು ಹಾಜರಪಡಿಸಿದ್ದು, ಫಿರ್ಯಾದಿದಾರರು ತಮ್ಮ ಮನೆಯ ರಿಪೇರಿ ಕೆಲಸದ ನಿಮಿತ್ತ ಪಕ್ಕದಲ್ಲಿರುವ ತಮ್ಮ ತಮ್ಮನ ಮನೆಯಲ್ಲಿ 15 ದಿನಗಳಿಂದ ಇರುತ್ತಿದ್ದರು.  ಫಿರ್ಯಾದಿದಾರರು ತಮ್ಮ ಬಂಗಾರದ ಸಾಮಾನುಗಳನ್ನ ಮತ್ತು ತನ್ನ ತಂಗಿಯರಾದ ರೇಷ್ಮಾ, ಕೃಷ್ಣಾಬಾಯಿ ಮತ್ತು ತಮ್ಮನ ಹೆಂಡತಿಯಾದ ಸುಹಾಸೀನಿ ಹಾಗೂ ತನ್ನ ಮಗಳಾದ ಅಶ್ವೀನಿಯ ಇವರೇಲ್ಲರ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳನ್ನ ತಮ್ಮ ಮನೆಯಲ್ಲಿ ಇಡಲು ಕೋಟ್ಟಿದ್ದರು, ಅವುಗಳನ್ನ ತನ್ನ ಹೆಂಡತಿ ಲಕ್ಷ್ಮೀ ಇವರು ತಮ್ಮ ಅಲಮಾರದಲ್ಲಿಟ್ಟಿದ್ದರು. ತಾವು ಮನೆಯನ್ನು ರಿಪೇರಿ ಮಾಡುತ್ತಿದ್ದರಿಂದ ತಮ್ಮ ಅಲ್ಮಾರಗಳನ್ನು ಮನೆಯ ಹಾಲ್ನಲ್ಲಿ ಇಟ್ಟಿದ್ದರು. ನಿನ್ನೆ ದಿನಾಂಕ: 20-03-2017 ರಂದು ರಾತ್ರಿ 8-30 ಗಂಟೆಗೆ ತಾನು ಮತ್ತು ತನ್ನ ಹೆಂಡತಿ ತಮ್ಮ ಮನೆಗೆ ಬೀಗ ಹಾಕಿಕೊಂಡು ಪಕ್ಕದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿ ಮಲಗಿದ್ದರು ನಂತರ ಮಧ್ಯರಾತ್ರಿ 2-00 ಗಂಟೆಯ ಸುಮಾರಿಗೆ ತನ್ನ ತಮ್ಮನಾದ ಅಶೋಕ ಕಾಲಾಲ್ ಇತನು ತನ್ನ ಮೋಬೈಲ್ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮನೆಯಲ್ಲಿ ಏನೋ ಶಬ್ಧವಾಗುತ್ತಿದೆ ನೋಡಿ ಅಂತಾ ಹೇಳಿದ್ದು, ಆಗ ತಾನು ತನ್ನ ಹೆಂಡತಿ ಮನೆಯಿಂದ ಹೊರಗಡೆ ಬಂದು ತಮ್ಮ ಮನೆಯನ್ನು ನೋಡಿದಾಗ ತಮ್ಮ ಮನೆಯ ಬಾಗಿಲು ಸ್ವಲ್ಪ ತೆಗೆದಿದ್ದು ಕಂಡಿತು ಕೂಡಲೇ ನಾವು ಒಳಗಡೆ ಹೋಗಿ ನೋಡಿದಾಗ ನಮ್ಮ ಅಲ್ಮಾರವು ಕೆಳಗಿ ಬಿದ್ದಿದ್ದು ಅದರಲ್ಲಿಯ ಬಟ್ಟೆಬರೆಗಳನ್ನ ಕಿತ್ತು ಬಿಸಾಕಿದ್ದರು, ಮತ್ತು ಅದರ ಸೇಫ್ ಲಾಕರ್ ಕೂಡಾ ಮೀಟಿ ತೆರೆದು ಕಿತ್ತಿದ್ದು ಕಂಡು ಬಂದಿತು, ತಕ್ಷಣ ನಾನು ಸೇಫ್ ಲಾಕರ್ನಲ್ಲಿಟ್ಟಿದ್ದ ತಮ್ಮೇಲ್ಲರ ಒಟ್ಟು 670 ಗ್ರಾಂ ಬಂಗಾರದ ಆಭರಣಗಳು ಮತ್ತು 350 ಗ್ರಾಂ ಬೆಳ್ಳಿಯ ಸಾಮಾನುಗಳು ಮತ್ತು ಇನ್ನೊಂದು ಅಲ್ಮಾರದಲ್ಲಿದ್ದ ನಗದು ಹಣ ರೂ 50,000=00 ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ 11,00,000=00 ಬೆಲೆಬಾಳುವುಗಳು ಕಂಡು ಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇನೆ.  

Tuesday, March 21, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 53/2017 ಕಲಂ: 279, 337, 338 .ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ:.
ದಿ:20-03-2017 ರಂದು ಮಧ್ಯಾಹ್ನ 3-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಂಜುನಾಥ ಬಡಿಗೇರ. ಸಾ: ದೇವರಾಜ ಅರಸ ಕಾಲೋನಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೇ, ದಿ: 17-03-2017 ರಂದು ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ತಮ್ಮ ಶ್ರೀನಿವಾಸ ಬಡಿಗೇರ ಇತನು ತನ್ನ ಆಟೋ ನಂ: ಕೆಎ-21/ಎ-885 ನೇದ್ದರಲ್ಲಿ ಕೊಪ್ಪಳದ ದೇವರಾಜ ಅರಸ ಕಾಲೋನಿಯ ಮೇರುನ್ನೀಸಾ, ರಜೀಯಾಬೇಗಂ ಹಾಗೂ ಗೌಸಿಯಾಬೇಗಂ ಮತ್ತು ಗೌಸಿಯಾಬೇಗಂ ಳ ಡಿಲೇವರಿ ಆಗಿದ್ದರಿಂದ ಮಗುವಿಗೆ ಆಟೋದಲ್ಲಿ ಕೂಡ್ರಿಸಿಕೊಂಡು ಭಾಡಿಗೆಗೆ ಅಂತಾ ಕರೆದುಕೊಂಡು ಹೊಸಬಂಡಿಹರ್ಲಾಪೂರಕ್ಕೆ ಹೋಗುವಾಗ ಕೊಪ್ಪಳ-ಹೊಸಪೇಟೆ ರಸ್ತೆಯ ಗಿಣಿಗೇರಿ ಬೈಪಾಸ್ ದಾಟಿ ಸ್ವಲ್ಪ ಮುಂದೆ ಹೊರಟಿದ್ದಾಗ ಅದೇ ಸಮಯಕ್ಕೆ ಆಟೋ ಓವರ ಟೇಕ್ ಮಾಡಿಕೊಂಡು ಬಂದ ಲಾರಿ ನಂ: ಕೆಎ-37/ಎ-3802 ನೇದ್ದರ ಚಾಲಕನು ತನ್ನ ಟಿಪ್ಪರ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಓವರಟೇಕ್ ಮಾಡಿಕೊಂಡು ಬಂದು ಆಟೋಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ವಾಹನ ನಿಲ್ಲಿಸದೇ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆಟೋ ಚಾಲಕ ಶ್ರೀನಿವಾಸನಿಗೆ ಭಾರಿಗಾಯ ಹಾಗೂ ಆಟೋದಲ್ಲಿದ್ದ 03 ಜನ ಮಹಿಳೆಯರಿಗೆ ಸಾದಾ ಗಾಯಗಳಾಗಿದ್ದು ಅದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ತಾವರಗೇರಾ ಪೊಲೀಸ್ ಠಾಣೆ ಯು.ಡಿ.ಅರ್. ನಂ: 04/2017 ಕಲಂ. 174 ಸಿ.ಆರ್.ಪಿ.ಸಿ

ಮೃತ ಹನಮಂತ ತಂದೆ ಹೊಳಿಯಪ್ಪ ಎಡಗಿನಹಾಳ ಈತನವು ಸುಮಾರು 30 ಕುರಿಗಳಿದ್ದು ಅವುಗಳನ್ನು ಪ್ರತಿದಿನ ಮೇಯಿಸಲು ಎಂದಿನಂತೆ ದಿನಾಂಕ:13-03-2017 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರು ಕುರಿಗಳನ್ನು ಹೊಡೆದುಕೊಂಡು ಮೇಯಿಸಲು ತಮ್ಮ ಗ್ರಾಮದ ಹಳ್ಳದ ಕಡೆಗೆ ಹೋಗಿದ್ದು ಇರುತ್ತದೆ. ಹಿಗೇ ಹಳ್ಳದಲ್ಲಿ ಕುರಿಗಳನ್ನು ಮೇಯಿಸುವಾಗ ಆಕಸ್ಮಿಕವಾಗಿ ಹಳ್ಳದಲ್ಲಿದ್ದ ಗುಂಡಿಯನ್ನು ಗಮನಿಸದೇ ಅದರಲ್ಲಿ ಜಾರಿ ಬಿದ್ದಿದ್ದು ದಂಡೆಯಲ್ಲಿದ್ದ ಹಳ್ಳದ ಉಸುಕು ಅವನ  ಮೇಲೆ ಬಿದ್ದು ಅವನಿಗೆ ಉಸಿರುಗಟ್ಟಿಂತಾಗಿದ್ದು ಹಾಗೂ ಜಾರಿ ಬಿದ್ದದರಿಂದ ಗೆಜ್ಜೆಯ ಹತ್ತಿರ ಸೊಂಟದ ಹತ್ತಿರ ಗಾಯವಾಗಿದ್ದು ಇರುತ್ತದೆ. ನಂತರ ಅಲ್ಲಿಯೇ ಆತನ ಜೋತಗೆ ತನ್ನ ಕುರಿಗಳನ್ನು ಮೇಯಿಸುತ್ತಿದ್ದ ತಮ್ಮ ಗ್ರಾಮದ ಸೋಮಪ್ಪ ಭೀಮಣ್ಣ ಮೂಳ್ಳುರವರು ಓಡಿ ಬಂದು ಆತನನ್ನು ಮೇಲೆ ಎಬ್ಬಿಸಿದ್ದು ಅಲ್ಲಿಂದ ಸಮೀಪ ತಮ್ಮ ಗ್ರಾಮ ಇರುವದರಿಂದ ಗ್ರಾಮದಲ್ಲಿದ್ದ ಅವರ ತಮ್ಮ ಬೀರಪ್ಪ ಸ್ಥಳಕ್ಕೆ ಹೋಗಿ ಒಂದು ಖಾಸಗಿ ವಾಹನದಲ್ಲಿ ಅವನನ್ನು ಕರೆದುಕೊಂಡು ಮೊದಲು ಸಿಂಧನೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಇಲಾಜಿಗೆ ಬಾಲಂಕು ಆಸ್ಪತ್ರೆ ರಾಯಚೂರಿನಲ್ಲಿ ದಾಖಲು ಮಾಡಿದ್ದು ಇರುತ್ತದೆ. ನಂತರ ದಿನಾಂಕ:19-03-2017 ರಂದು ರಾತ್ರಿ ಮಲಗುವಾಗ ಆಸ್ಪತ್ರೆಯಲ್ಲಿ ವೈದ್ಯರು ಅವನಿಗೆ ನೀರು ಕುಡಿಯಬೇಡ ಅಂತಾ ಹೇಳಿದ್ದು ರಾತ್ರಿ ರಾತ್ರಿ ಎಲ್ಲರೂ ಮಲಗಿದ್ದಾಗ ಆತನು ಇಂದು ದಿನಾಂಕ:20-03-2017 ರಂದು ಬೆಳಗಿನ ಜಾವ 01-00 ಗಂಟೆಯ ಸುಮಾರು ತನ್ನ ಬಾಜು ಇಟ್ಟಿದ್ದ ಬಾಟಲಿಯಲ್ಲಿದ್ದ ಒಂದು ಲೀಟರನಷ್ಟು ನೀರು ಒಮ್ಮೇಲೆ ಕುಡಿದಿದ್ದು ಆಗ ಆತನಿಗೆ ಉಸಿರಾಟದಲ್ಲಿ ತೊಂದರೆಯಾಗಿ ಒದ್ದಾಡುತ್ತಿರುವಾಗ ಆತನನ್ನು ಹೆಚ್ಚಿನ ಇಲಾಜಿಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲು ಆಸ್ಪತ್ರೆಯ ವೈದ್ಯರು ತಿಳಿಸಿದ್ದು ಕೂಡಲೇ ಒಂದು ಖಾಸಗಿ ಅಂಬುಲೇನ್ಸನಲ್ಲಿ ಹೆಚ್ಚಿನ ಇಲಾಜಿಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗುವಾಗ ಕುಷ್ಟಗಿ ಸಮೀಪದಲ್ಲಿ ಬೆಳಗಿನ ಜಾವ 03-00 ಗಂಟೆಯ ಸುಮಾರು ಆತನಿಗೆ ಉಸಿರು ನಿಂತಂತೆ ಆಗಿದ್ದು ಆಗ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಹೋಗಿ ಮಾನ್ಯ ವೈದ್ಯರಲ್ಲಿ  ಪರೀಕ್ಷಿಸಲು ಈತನು ಮೃತಪಟ್ಟ ಬಗ್ಗೆ ಖಚಿತಪಡಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Monday, March 20, 2017

1]  ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 25/2017 ಕಲಂ: 279, 337, 338 .ಪಿ.ಸಿ.:.
ದಿನಾಂ: 19-03-2017 ರಂದು ಫಿರ್ಯಾದಿಯ ದೊಡ್ಡಪ್ಪ ಭೀಮಣ್ಣ ಈತನು ತನ್ನ ಮೋಟಾರ ಸೈಕಲ ನಂ: ಕೆ.-37 ಯು-2303 ನೇದ್ದರ ಮೇಲೆ ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಪಟ್ಟಲಚಿಂತಿ ಮಾಲಗಿತ್ತಿ ರೋಡಿನ ಕಡಿವಾಲ ಸೀಮೇದಾರಿಯ ಹತ್ತಿರ ರೋಡಿನಲ್ಲಿ ಮಾಲಗಿತ್ತಿ ಕಡೆಗೆ ಹೊರಟಾಗ ಮಾಲಗಿತ್ತಿ ಕಡೆಯಿಂದ ಮೋಟಾರ ಸೈಕಲ ನಂ: ಕೆ.-24 ಜೆ-1167 ನೇದ್ದರ ಚಾಲಕ ಶರಣಪ್ಪ ತಂದೆ ಭೀಮಪ್ಪ ಹಗೇದಾಳ ಸಾ: ದೊಣ್ಣೆಗುಡ್ಡ ತಾ: ಕುಷ್ಟಗಿ. ಈತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಎದರುಗಡೆಯಿಂದ ಟಕ್ಕರಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಯ ದೊಡ್ಡಪ್ಪ ಭೀಮಣ್ಣ ರವರಿಗೆ ಬಲಗಡೆ ತಲೆಗೆ ಭಾರಿ ರಕ್ತಗಾಯ, ಬಲಗಡೆ ಕಣ್ಣಿನ ಹುಬ್ಬಿನ ಹತ್ತಿರ ರಕ್ತ ಗಾಯ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು, ಬಲಗಡೆ ಮೊಣಕಾಲ ಹತ್ತಿರ ತೆರಚಿದ ಗಾಯವಾಗಿದ್ದು, ಹಾಗೂ ಅಪಘಾತ ಪಡಿಸಿದ ಶರಣಪ್ಪ ತಂದೆ ಭೀಮಪ್ಪ ಹಗೆದಾಳ ಈತನಿಗೆ ಗದ್ದಕ್ಕೆ ರಕ್ತಗಾಯ ಹಾಗೂ ತಲೆಗೆ ಒಳಪೆಟ್ಟಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಯಿತು.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ. ನಂ: 15/2017 ಕಲಂ. 143, 147, 323, 354, 504, 506 ಸಹಿತ 149  ಐ.ಪಿ.ಸಿ:
ದಿನಾಂಕ: 19-03-2017 ರಂದು ರಾತ್ರಿ 10-30 ಗಂಟೆಗೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಫಿಯರ್ಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ಫಿಯರ್ಾದಿದಾರರಿಗೂ ಹಾಗೂ ಆರೋಪಿತರಿಗೂ ಪಿತ್ರಾಜರ್ಿತವಾದ ಆಸ್ತಿಯ ಹಂಚಿಕೆಯ ವಿಷಯವಾಗಿ ಜಗಳ ಇರುತ್ತದೆ. ಇದೇ ವಿಷಯವಾಗಿ ಇಂದು ದಿನಾಂಕ: 19-03-2017 ರಂದು ಮಧ್ಯಾಹ್ನ 2-00 ಗಂಟೆಗೆ ಆರೋಪಿತರೆಲ್ಲರೂ ಕೂಡಿಕೊಂಡು ಕಾರ್ ನಲ್ಲಿ ನೀರಲಗಿ ಗ್ರಾಮದ ಫಿಯರ್ಾದಿದಾರರ ವಾಸದ ಮನೆಗೆ ಬಂದು ಫಿಯರ್ಾದಿದಾರರಿಗೆ ಹಾಗೂ ಅವರ ಮಗಳಾದ ವಿಧ್ಯಾ, ಸೊಸೆಯಾದ ತೃಪ್ತಿ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ, ಕೂದಲು ಹಿಡಿದಯ ಎಳೆದಾಡಿ, ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಬೇವೂರ ಪೊಲೀಸ್ ಠಾಣೆ ಗುನ್ನೆ. ನಂ: 14/2017 ಕಲ0: 279, 337 ಐ.ಪಿ.ಸಿ:.

ದಿನಾಂಕ: 19-03-2017 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ ಟ್ರ್ಯಾಕ್ಟರ್ ಇಂಜನ್ ನಂಬರ್ 39.1354 SUK09765 ಚೆಸ್ಸಿ ನಂಬರ್ WVTK31419113672  ಇದರ ಟ್ರಾಲಿ ಚೆಸ್ಸಿ ನಂಬರ್ 0184 ಇದ್ದ ಟ್ರ್ಯಾಕ್ಟರ್ನ್ನು ಬೈರನಾಯಕನಳ್ಳಿ ಕಡೆಯಿಂದ ಕುದರಿಮೋತಿ ಕಡೆಗೆ ಅತೀವಾಗವಾಗಿ ಹಾಗೂ ಆಲಕ್ಷತನದಿಂದ ನೆಡೆಸಿಕೊಂಡು ಹೋಗಿ ಬೈರನಾಯಕನಹಳ್ಳಿ ಸೀಮಾದಲ್ಲಿರುವ ಕ್ರಾಸ್ ಹತ್ತಿರ ಕುದರಿಮೋತಿ ರಸ್ತೆ ಕಡೆಗೆ ಹೋಗಲು ಎಲ್ ಟನರ್್ ಮಾಡುವಾಗ ಟ್ರ್ಯಾಕ್ಟರ್ ಮೇಲೆ ನಿಯಂತ್ರಣ ಸಾದಿಸದೆ ಸದರಿ ಕ್ರಾಸ್ ಹತ್ತಿರ ಒಮ್ಮಿಂದೊಮ್ಮೆಲೆ ರಸ್ತೆಯ ಬಲಕ್ಕೆ ತೆಗೆದುಕೊಂಡು ಹೋಗಿ ಟ್ರ್ಯಾಕ್ಟರ್ನ್ನು ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇರುತ್ತದೆ, ಸದರಿ ಅಪಘಾತದಲ್ಲಿ ಆರೋಪಿತನಿಗೆ ಸಾದಾ ಸ್ವರೂಪದ ಗಾಯವಾಗಿವೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Sunday, March 19, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 68/2017 ಕಲ0: 498(ಎ), 324, 504, 506 ಐ.ಪಿ.ಸಿ:.
ದಿನಾಂಕ : 18-03-2017 ರಂದು ಬೆಳಗ್ಗೆ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳಾದ ಶ್ರೀಮತಿ ದೇವಮ್ಮ ಗಂಡ  ರಮೇಶ ಬೋವಿ ತನ್ನ ಮಕ್ಕಳೊಂದಿಗೆ ಮನೆಯಲ್ಲಿ ಇರುವಾಗ ಗಂಡ ರಮೇಶ ಈತನು ವಿನಾ: ಕಾರಣ ಜಗಳ ತೆಗೆದು ಕಟ್ಟಿಗೆಯಿಂದ ಕೈಗೆ ಮತ್ತು ಬೆನ್ನಿಗೆ ಹೊಡೆದು ನೀನು ಎಲ್ಲಿಯಾದರು ಬಿದ್ದು ಸತ್ತು ಹೊಗು ಸೂಳೆ ಅಂತಾ ಹೊಡೆ ಬಡಿ ಮಾಡಿದ್ದು ಮನೆಯಿಂದ ಹೊರಗೆ ಹಾಕಿದ್ದು ಈ ಘಟನೆಯನ್ನು ಓಣಿಯ ಜನರಾದ ಮಾಬುಸಾಬ ಹಾಗೂ ಹನಮಂತಪ್ಪ ಯರಗೇರಿ ಇವರು ನೋಡಿ ಬಿಡಿಸಿಕೊಂಡಿದ್ದು ಅವನು ಅಷ್ಟಕ್ಕೆ ಬಿಡದೆ ಈ ಸೂಳೇ ಇನ್ನು ಮುಂದೆ ನಮ್ಮ ಮನೆಯಲ್ಲಿ ಇರುವದು ಬೇಡ ಇನ್ನೊಮ್ಮೆ ಮನೆಯ ಕಡೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವ ಭಯ ಹಾಕಿ ಮನೆಯಿಂದ ಹೊರಗೆ ಹಾಕಿದ್ದರಿಂದ ಫಿರ್ಯಾದಿಗೆ ಏನು ತೊಚದಂತಾಗಿ ಈ ಬಗ್ಗೆ ಫಿರ್ಯಾದಿ ತಂದೆ ತಾಯಿಗೆ ವಿಷಯ ತಿಳಿಸಿ ಅವರೊಂದಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ಈ ಫಿರ್ಯಾದಿ ಕೊಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.  
2]  ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ: 19/2017 ಕಲಂ. 323, 324, 354, 504, 506 ಸಹಿತ 34 ಐ.ಪಿ.ಸಿ:
ದಿನಾಂಕ: 18-03-2017 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತಮ್ಮ ಬಾಡಿಗೆ ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಪಿರ್ಯಾದಿದಾರಳಿಗೆ ಏನಲೇ ಬೋಸುಡಿ ನಿನಗೆ ಎಷ್ಟು ಸಾರಿ ಹೇಳಬೇಕು, ನಮ್ಮ ಡಿಶ್ ಪುಟ್ಟಿ ಮೇಲೆ ಸೋಲಾರ್ ಲ್ಯಾಂಪ್ ಹಾಕಬೇಡ ಅಂದರು ಹಾಕುತ್ತೀಯಾ ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅವಾಚ್ಯವಾಗಿ ಬೈದಾಡಿ ಎಲ್ಲರೂ ಕೂಡಿಕೊಂಡು ಆಕೆಯ ಮೈ ಕೈ ಮುಟ್ಟಿ ಎಳೆದಾಡಿ ಮಾನಭಂಗ ಮಾಡಿ, ಕೈಯಿಂದ ಬಡಿದಿದ್ದು ಅದೆ. ನಂತರ ಅವರ ಪೈಕಿ ಆರೋಪಿ ನಂ. 02 ನೇದವಳು ಪಿರ್ಯಾದಿದಾರಳ ತಲೆ ಕೂದಲನ್ನು ಗಟ್ಟಿಯಾಗಿ ಹಿಡಿದುಕೊಂಡು ಸಿ.ಸಿ. ರಸ್ತೆಗೆ ಜೋರಾಗಿ ಹಾಯಿಸಿದ್ದು, ಇದರಿಂದಾಗಿ ಪಿರ್ಯಾದಿದಾರಳ ಹಣೆಗೆ, ಬಲಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ. ನಂತರ   ಮೂರು ಜನ ಆರೋಪಿತರು ಪಿರ್ಯಾದಿದಾಳಿಗೆ ಇನ್ನೊಮ್ಮೆ ನಮ್ಮ ಜೊತೆಗೆ ಹೇಗೆ ಇರಬೇಕು ಹಾಗೇ ಇರಬೇಕು, ಇಲ್ಲಾ ಅಂದರೆ ನಿನ್ನ ಜೀವ ಸಹಿತ ಬೀಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ: 45/2017 ಕಲ0: 143, 147, 323, 324, 354, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ 18-03-2017 ರಂದು ರಾತ್ರಿ 11-00 ಗಂಟೆಗೆ ಶ್ರೀಮತಿ ಶಕುಂತಲಮ್ಮ ಗಂಡ ಉಮೇಶ ತೆಗ್ಗಿನಮನಿ, ವಯಸ್ಸು 28 ವರ್ಷ, ಜಾ: ಕುರುಬರ, ಉ: ಮನೆಗೆಲಸ, ಸಾ: ಕಿಲ್ಲಾ ಏರಿಯಾ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿಯರ್ಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 18-03-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಶಾಲೆಯಲ್ಲಿ ಬೈಕಿನ ಮೇಲಿನ ಸ್ಟಿಕ್ಕರನ್ನು ಕೆರೆದುದಕ್ಕೆ ಸಂಬಂಧಿಸಿದಂತೆ ಪ್ರತಿಭಾ ಶಾಲೆಯ ಹತ್ತಿರ ಜಗಳವಾಗಿದ್ದಕ್ಕೆ ಸಂಬಂಧಿಸಿದಂತೆ ಖಲಂದರ ತಂದೆ ಮೈನುಸಾಬ ಸೀಮೆಎಣ್ಣೆ ಇವನು ತನ್ನ ಸಂಗಡಿಗರೊಂದಿಗೆ ಬಂದು ಹನುಮೇಶ ಕಾಯಿಗಡ್ಡೆ, ಮೌನೇಶ ತೆಗ್ಗಿನಮನಿ, ಮೇಘರಾಜ ತೆಗ್ಗಿನಮನಿ, ನಿರುಪಾದಿ ಅಡ್ಡೇರ ಇವರೆಲ್ಲರಿಗೂ ಕೈಯಿಂದ ಹೊಡೆಬಡೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Saturday, March 18, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 67/2017 ಕಲ0: 87 Karnataka Police Act
ದಿನಾಂಕ:- 17-03-2017 ರಂದು ಮಧ್ಯಾಹ್ನ 12-45 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗ ಗಿಡದ ನೆರಳಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಹಾಗೂ ಸಿಬ್ಬಂದಿಯವರು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ ಜನರು ಓಡಿ ಹೋಗಿದ್ದು ಐದು ಜನರು ಸಿಕ್ಕಿಬಿದ್ದಿದ್ದು ಇರುತ್ತದೆ. ಅವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಗಣೇಶ ತಂದೆ ಹನುಮಂತಪ್ಪ ವಾಲಿಕಾರ, ವಯಸ್ಸು: 36 ವರ್ಷ ಜಾತಿ: ಗಂಗಾಮತ, ಉ: ಒಕ್ಕಲತನ ಸಾ: ಮುಷ್ಟೂರ (2) ಆಂಜನೇಯ ತಂದೆ ಹನುಮಂತಪ್ಪ ಕಬ್ಬೇರ, ವಯಸ್ಸು: 34 ವರ್ಷ ಜಾತಿ: ಗಂಗಾಮತ, ಉ: ಒಕ್ಕಲತನ ಸಾ: ಮುಷ್ಟೂರ (3) ಕೊಮಾರೆಪ್ಪ ತಂದೆ ಕಂಟೆಪ್ಪ ತಿರುಕಣ್ಣವರ, ವಯಸ್ಸು: 25 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಮುಷ್ಟೂರ, (4) ಪೋತರಾಜ ತಂಧೆ ಈರಪ್ಪ ಮಡಿವಾಳರ, ವಯಸ್ಸು: 35 ವರ್ಷ ಜಾತಿ: ಮಡಿವಾಳರ, ಉ: ಕುಲಕಸಬು, ಸಾ: ಮುಷ್ಟೂರ, (5) ಬಸಪ್ಪ ತಂದೆ ಬಸಪ್ಪ ವಡ್ಡರಹಟ್ಟಿ, ವಯಸ್ಸು: 50 ವರ್ಷ ಜಾತಿ: ಕುರುಬರ, ಸಾ: ಮುಷ್ಟೂರ ಅಂತಾ ತಿಳಿಸಿದರು. ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 11900/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಟಾವೆಲ್ ಸಿಕ್ಕಿದ್ದು ಇರುತ್ತವೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ: 53/2017 ಕಲಂ. 143,137,323,324,504,506 IPC And 3(1) (10) SC/St Act 1989.
ದಿನಾಂಕ. 17-03-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದಾರರಾದ ಬಸಪ್ಪ ತಂದೆ ಮರಿಯಪ್ಪ ಮಾದರ ವಯಾ 39 ವರ್ಷ ಜಾ.ಮಾದರ ಉ.ಒಕ್ಕಲುತನ ಸಾ.ಹಿರೇಬನ್ನಿಗೋಳ  ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ. 17-03-2017 ರಂದು ಸಂಜೆ 7-00 ಗಂಟೆ ಸುಮಾರಿಗೆ ನಮ್ಮೂರಿನ ಶರಣಬಸವೇಶ್ವರ ದೇವರ ಉತ್ಸವ ನಡೆಯುತ್ತಿದ್ದಾಗ ನಾವು ಅಂದರೆ ನಮ್ಮ ಕೇರಿಯ ದಲಿತ ಯುವಕರಾದ 1) ನಾನು ಬಸಪ್ಪ ತಂದೆ ಮರಿಯಪ್ಪ ಮಾದರ 2) ಮಂಜುನಾಥ ತಂದೆ ಸಣ್ಣದುರಗಪ್ಪ ಹರಿಜನ ವಯಾ 21 ವರ್ಷ 3) ಶಿವರಾಜ ತಂದೆ ಶಿವಪ್ಪ ಹರಿಜನ ವಯಾ 14 ವರ್ಷ 3) ಕುಬೇರಪ್ಪ ತಂದೆ ಸಿದಪ್ಪ ಹರಿಜನ ವಯಾ 25 ವರ್ಷ 4) ಪರಸಪ್ಪ ತಂದೆ ಹಿರೇಬಸಪ್ಪ ಹರಿಜನ ವಯಾ 36 ವರ್ಷ 5) ರಂಗಪ್ಪ ತಂದೆ ಕನಕಪ್ಪ ಹರಿಜನ ವಯಾ 21 ವರ್ಷ 6) ಯಮನಪ್ಪ ತಾಯಿ ಈರವ್ವ ಹರಿಜನ ವಯಾ 23 ವರ್ಷ 7) ಮಾನಪ್ಪ ತಂದೆ ಹನಮಪ್ಪ ಹರಿಜನ ವಯಾ 22 ವರ್ಷ 8) ದೇವಪ್ಪ ತಂದೆ ಈರಪ್ಪ ಹರಿಜನ ವಯಾ 27 ವರ್ಷ 9) ಯಮನಪ್ಪ ತಂದೆ ಮಹಾದೇವಪ್ಪ ಹರಿಜನ ವಯಾ 40 ವರ್ಷ ನಾವೆಲ್ಲರೂ ಜಾತ್ರೆಯ ಉತ್ಸವ ನೋಡುತ್ತಿದ್ದಾಗ ನಮ್ಮೂರಿನ 1) ಮಾತಿಂಗಪ್ಪ ಬಳಿಗಾರ 2) ಸಂಗಪ್ಪ ತಂದೆ ಬಸಪ್ಪ ಮೇಟಿ 3) ಶಿವಪುತ್ರಪ್ಪ ತಂದೆ ಗುರಪ್ಪ ಅರಳಿಕಟ್ಟಿ 4) ಶಂಕ್ರಪ್ಪ ತಂದೆ ದೇವಪ್ಪ ಕಲ್ಗೋಡಿ 5) ಅಯ್ಯಪ್ಪ ತಂದೆ ಶರಣಪ್ಪ ರ್ಯಾವವಣಿಕಿ 6) ಬಸವರಾಜ ತಂದೆ ಚನ್ನಪ್ಪ ಮೇಟಿ 7) ಸಂಗಪ್ಪ ತಂದೆ ಕುಂಟಪ್ಪ ವಣಕಿ 8) ಗುರುಬಸಪ್ಪ ತಂದೆ ವೀರಭದ್ರಪ್ಪ ಹಡಪದ ರವರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಲೇ ಮಾದಿಗ ಸೂಳೇ ಮಕ್ಕಳೇ ಈ ಜಾತ್ರೆಯಲ್ಲಿ ಬರಬೇಡ ಅಂದರೂ ನೀವು ಯಾಕೆ ಬರುತ್ತೀರಿ ನೀವು ನಮ್ಮ ಸಮಾಜದ ಜಾತ್ರೆಯಲ್ಲಿ ಭಾಗವಹಿಸಿದರೆ ನಿಮ್ಮನ್ನು ಏನು ಮಾಡಬೇಕು ಅಂತಾ ನಮಗೆ ಗೊತ್ತಿದೆ ಅಂತಾ ಜಗಳ ತೆಗೆದು ಹೊಡೆ-ಬಡಿ ಮಾಡಿ ಹ್ಯಾಂಗ ಬಾಳ್ವೆ ಮಾಡ್ತೀರಿ ನೋಡಿಕೊಳ್ಳುತ್ತೇವೆ ಅಂತಾ ನಮಗೆ ಬೆದರಿಕೆ ಹಾಕಿ ಇರುತ್ತದೆ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ: 43/2017 ಕಲ0: 78(3), 78(ಸಿ) Karnataka Police Act
ದಿನಾಂಕ 17-03-2017 ರಂದು 9-15 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತರಾದ 1]   ಬಾಬುಸಾಬ ತಂದೆ ಖಾಜಾಹುಸೇನ ಮುಂಡಾಸದ ವಯಾ: 60 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: 05 ನೇ ಲೈನ ಲಿಂಗರಾಜ ಕ್ಯಾಂಪ, ಗಂಗಾವತಿ,2] ಶಂಕ್ರಪ್ಪ ತಂದೆ ಹನುಮಂತಪ್ಪ ವಂಕಲಕುಂಟಿ ವಯಾ: 35 ವರ್ಷ ಜಾ: ಮಡಿವಾಳ  ಉ: ಮೇಷನ್ ಕೆಲಸ ಸಾ: ಮಹೆಬೂಬ ನಗರ ಗಂಗಾವತಿ ಇವರು ಗಂಗಾವತಿ ನಗರದಲ್ಲಿನ ಪ್ರಶಾಂತ ನಗರದ ಮಸೀಧಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ  ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವರ ಮೇಲೆ ಶ್ರೀ ರಾಜಕುಮಾರ ವಾಜಂತ್ರಿ ಪಿ.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 1330-00. 02] ಮಟಕಾ ನಂಬರ ಬರೆದ 08 ಮಟ್ಕಾ ಪಟ್ಟಿಗಳು ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು.  ಸದರಿ ಆರೋಪಿತರ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಮಟಕಾ ಪಟ್ಟಿ ತೆಗೆದುಕೊಳ್ಳುವ 1] ಆಟೋ ಶಂಕರ @ ಶಂಕರ ರಾಠೋಡ ,2]  ಬಾಲು ರಾಠೋಡ ಸಾ: ಮಹೆಬೂಬ ನಗರ ಮತ್ತು ಮಟಕಾ ಜೂಜಾಟದ ಮಟಕಾ ಪಟ್ಟಿಗಳನ್ನು ಬುಕ್ಕಿಗಳ ಕೈಗೆ ಕೊಡುವ ಹಮೀದ್ ಸಾ: ಮಹೆಬೂಬ ನಗರ ರವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 49/2017 ಕಲ0: 448, 354, 342, 506 ಸಹಿತ 34 ಐ.ಪಿ.ಸಿ.
ದಿನಾಂಕ: 17.03.2017 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿ ಕು: ಅನಸೂಯಾ ತಂದೆ ತೇಜಪ್ಪ ಲಿಂಗನಬಂಡಿ ಸಾ: ಹಾಲವರ್ತಿ ಇವಳು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 17.03.2017 ರಂದು ಮದ್ಯಾನ 2:30 ಗಂಟೆಯ ಸುಮಾರಿಗೆ ತಾನು ಮನೆಯಲ್ಲಿದ್ದಾಗ ತನಗೆ ಪರಿಚಯದ ತಿಪ್ಪಣ್ಣ ಗುರಾಣಿ ವಯಾ: 55 ವರ್ಷ ಸಾ: ಸಂಗನಾಳ ಹಾಗೂ ಇತರೆ ಒಬ್ಬ ಅಪರಿಚಿತ ವ್ಯಕ್ತಿ ವಯಾ: 25 ವರ್ಷ ಇಬ್ಬರೂ ಕೂಡಿಕೊಂಡು ತನ್ನ ಮನೆಯೊಳಗೆ ಪ್ರವೇಶ ಮಾಡಿ ನಿನ್ನ ತಮ್ಮ ಎಲ್ಲಿದ್ದಾನೆ ಹೇಳು ಅಂತಾ ಬೆದರಿಸಿ ಮನೆಯಲ್ಲಿ ಬಲವಂತವಾಗಿ ಕೂಡಿಹಾಕಿ ಒಂದು ಕುರ್ಚಿಗೆ ಕೈಗಳನ್ನು ಕಟ್ಟಿ ನಿನ್ನ ತಮ್ಮ ಎಲ್ಲಿದ್ದಾನೆ ಹೇಳು ಅಂತಾ ಬೆದರಿಕೆಯೊಡ್ಡಿದ್ದು ಜೋರಾಗಿ ಅಳುತ್ತಿದ್ದಾಗ ತಾವು ತಂದಿದ್ದ ಕತ್ತರಿಯಿಂದ ತಮ್ಮ ತಲೆಯ ಜಡೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Friday, March 17, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 66/2017 ಕಲಂ. 87 Karnataka Police Act.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೆಸರಹಟ್ಟಿ ಗ್ರಾಮದಲ್ಲಿ ತಾಯಮ್ಮ ಗುಡಿಯ ಹಿಂದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಹಾಗೂ ಸಿಬ್ಬಂದಿ ಮತ್ತು ಪಂಚರು ಸಮೇತ ದಾಳಿ ಮಾಡಲು ತಾಯಮ್ಮ ಗುಡಿ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ ಜನರು ಓಡಿ ಹೋಗಿದ್ದು ಮೂರು ಜನರು ಸಿಕ್ಕಿಬಿದ್ದಿದ್ದು ಇರುತ್ತದೆ. ಅವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ವಿಶ್ವನಾಥ ತಂ/ ದೇವೆಂದ್ರಗೌಡ ಪಾಟೀಲ ವಯಾ 39, ಜಾ. ಲಿಂಗಾಯತ ಸಾ. ಕೆಸರಹಟ್ಟಿ,  (2) ಹನಮಂತಪ್ಪ ತಂ/ ವೆಂಕಾರೆಡ್ಡೆಪ್ಪ ಚಿಕ್ಕೋಟಿ ವಯಾ 41, ಜಾ. ರೆಡ್ಡಿ ಲಿಂಗಾಯತ ಸಾ. ಕೆಸರಹಟ್ಟಿ, (3) ವೀರನಗೌಡ ತಂ/ ಶೇಖರಗೌಡ ಮಾಲಿಪಾಟೀಲ ವಯಾ 35, ಜಾ. ಲಿಂಗಾಯತ ಸಾ. ಕೆಸರಹಟ್ಟಿ, ಅಂತಾ ತಿಳಿಸಿದರು. ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 1600/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಟಾವೆಲ್ ಸಿಕ್ಕಿದ್ದು ಇರುತ್ತವೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ: 52/2017 ಕಲ0: 279,304(A) IPC
ದಿನಾಂಕ :- 16-03-2017 ರಂದು ರಾತ್ರಿ 10-30 ಗಂಟೆಗೆ ಮನೋಜ ತಂದೆ ಪರಶುರಾಮ ಶೆಟ್ಟರ ವಯಾ 19 ವರ್ಷ ಜಾ:ಹಿಂದೂ ಶೆಟ್ಟರ ಉ : ವಿದ್ಯಾರ್ಥಿ/ವ್ಯಾಪಾರ ಸಾ : ಕಂದಕೂರ ರವರು ಠಾಣೆಗೆ ಬಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ಪ್ರತಿದಿನದಂತೆ ದಿನಾಂಕ :16-03-2017 ರಂದು ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಮನೆಯಿಂದ ನಮ್ಮ ತಂದೆಯು ಮೋಟಾರ ಸೈಕಲ್ ನಂ. ಕೆ.-37-ಎಕ್ಷ-7208 ನೇದ್ದನ್ನು ತೆಗೆದುಕೊಂಡು ಕುಷ್ಟಗಿ ಹೋಗಿ ಹಾಲಿನ ಪಾಕೇಟಗಳನ್ನು ತರುತ್ತೇನೆ ಅಂತಾ ಹೇಳಿ ಹೋದನು. ನಂತರ ನನಗೆ ಮುಂಜಾನೆ 06-00 ಗಂಟೆಯ ಸುಮಾರಿಗೆ ಕಂದಕೂರ-ಕುಷ್ಟಗಿ ರೋಡ ಮೇಲೆ ಸಾವಜಿ ಡಾಬಾದ ಹತ್ತಿರ ನಿಮ್ಮ ತಂದೆಯು ಸ್ಕೀಡ್ ಮಾಡಿಕೊಂಡು ಬಿದ್ದಿರುತ್ತಾರೆ. ಅಂತಾ ಸುದ್ದಿ ಕೇಳಿ ಕೂಡಲೇ ನಾನು ಮತ್ತು ನಮ್ಮ ಕಾಕನಾದ ಕನಕರಾಯ ಇಬ್ಬರೂ ಬಂದು ನೋಡಲು ನಮ್ಮ ತಂದೆಯು ನಮ್ಮ ಟಿ.ವ್ಹಿ.ಎಸ್. ಸುಪರ್ ಎಕ್ಷ. ಎಲ್ ಮೋಟಾರ ಸೈಕಲ್  ನಂ : ಕೆ.-37-ಎಕ್ಷ್-7208 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಒಮ್ಮಿಂದೊಮ್ಮಲೇ ಬ್ರೇಕ್ ಮಾಡಿ ನಿಯಂತ್ರಣ ತಪ್ಪಿ ಸ್ಕೀಡ್ ಮಾಡಿಕೊಂಡು ಬಿದ್ದಿದ್ದು, ಸದರಿ ಅಪಘಾತದಿಂದ ತಲೆಯ ಹಿಂದುಗಡೆ  ಭಾರಿ ರಕ್ತಗಾಯವಾಗಿ, ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಹೊರಬಂದಂತೆ ಕಂಡು ಬಂದಿದ್ದು ಇರುತ್ತದೆ. ನಂತರ ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಕುಷ್ಟಗಿಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು, ವೈದ್ಯಾಧೀಕಾರಿಗಳು ಪ್ರಥಮ  ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಮ್ಮ ತಂದೆಯನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಇಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
3]  ಹನುಮಸಾಗರ ಪೊಲೀಸ್ ಠಾಣೆ ಎಫ್.ಎ. ನಂ: 02/2017 ಕಲ0: ಆಕಸ್ಮಿಕ ಬೆಂಕಿ ಅಪಘಾತ.
ದಿನಾಂಕ: 16-03-2017 ರಂದು gÁwæ 19-33 ಗಂಟೆಗೆ ಫಿರ್ಯಾದಿದಾರರಾದ ಹನಮಂತಪ್ಪ ತಂದೆ ಪಕೀರಪ್ಪ ಭಜೆಂತ್ರಿ ಸಾ: ಯರಗೇರಾ ರವರು ಠಾಣೆಗೆ ಹಾಜರಾಗಿ ಬೆರಳಚ್ಚು ಮಾಡಿದ ಅರ್ಜಿಯನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರ ಸಾರಾಂಶವೆನೆಂದರೆ. ಅರ್ಜಿದಾರರು ಮುಂಜಾನೆ 11-00 ಗಂಟೆಗೆಯ ಸುಮಾರಿಗೆ ತಾವುಮಾಡುವ ಮಾವಿನ ಇಟಗಿ ಸರ್ವೆ ನಂ: 4/2 ರಲ್ಲಿ ಗುಡಿಸಲು ಹಾಕಿ ಕೊಂಡಿದ್ದು ಅಲ್ಲಿಂದ ಹೊಲದಲ್ಲಿ ಕೆಲಸಮಾಡಲು ಹೋದಾಗ ಆಕಸ್ಮೀಕವಾಗಿ ಗುಡಿಸಲಿಗೆ ಬೆಂಕಿ ಹತ್ತಿ ಅದರಲ್ಲಿದ್ದ ದವಸದಾನ್ಯ ಹಾಗೂ ಪಾತ್ರೆ. ಪಗಡುಗಳು ಹಾಗೂ ಇತರ ಸಾಮಾನುಗಳು ಮತ್ತು 5 ಕೋಳಿಗಳು ಗುಡಿಸಲು ಸಮೇತ ಸುಟ್ಟು ಒಟ್ಟು 87,000=00 ರೂಪಾಯಿಗಳಷ್ಟು ಲುಕ್ಸಾನಾಗಿದ್ದು ಇರುತ್ತದೆ. ಕಾರಣ ಸರ್ಕಾರದಿಂದ ಸಿಗುವಂತ ಸೌಲತ್ ಬರುವಂತೆ ಮಾಡಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಎಫ್.ಎ ನಂ: 2/2017 ಕಲಂ ಆಕಸ್ಮೀಕ ಬೆಂಕಿ ಅಪಘಾತದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008